KGF 2 ಹವಾ: 20 ಕೋಟಿ ದಾಟಿದ ಮುಂಗಡ ಬುಕ್ಕಿಂಗ್ ಮೊತ್ತ!
ಇನ್ನು ಕೆಜಿಎಫ್ ಸಿನಿಮಾದ ಜೊತೆ ಅಂದರೆ ಏಪ್ರಿಲ್ 13ರಂದು ತಮಿಳು ನಟ ವಿಜಯ್ ದಳಪತಿ ಅಭಿನಯದ ಬೀಸ್ಟ್ ಚಿತ್ರವೂ ರಿಲೀಸ್ ಆಗುತ್ತಿದೆ. ಆದರೆ ಕೆಜಿಎಫ್ ಅಲೆಗೆ ಬೀಸ್ಟ್ ಸಿನಿಮಾ ಮಂಕಾಗುವ ಲಕ್ಷಣಗಳು ಕಂಡುಬರುತ್ತಿದೆ.
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ಬಿಡುಗಡೆಗೆ ಸಜ್ಜಾಗಿದೆ. ದೇಶ-ವಿದೇಶಗಳಲ್ಲಿ ‘ರಾಕಿಭಾಯ್’ ಅಭಿಮಾನಿಗಳು ಈ ಚಿತ್ರವನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಇನ್ನು ಕೆಜಿಎಫ್ ಸಿನಿಮಾದ ಜೊತೆ ಅಂದರೆ ಏಪ್ರಿಲ್ 13ರಂದು ತಮಿಳು ನಟ ವಿಜಯ್ ದಳಪತಿ ಅಭಿನಯದ ಬೀಸ್ಟ್ ಚಿತ್ರವೂ ರಿಲೀಸ್ ಆಗುತ್ತಿದೆ. ಆದರೆ ಕೆಜಿಎಫ್ ಅಲೆಗೆ ಬೀಸ್ಟ್ ಸಿನಿಮಾ ಮಂಕಾಗುವ ಲಕ್ಷಣಗಳು ಕಂಡುಬರುತ್ತಿದೆ.
ಇದನ್ನು ಓದಿ: ಈ ಕಾರಣಕ್ಕಾಗಿ ಕನ್ನಡಕ್ಕಿಂತಲೂ ತೆಲುಗಿನಲ್ಲಿ ಹೆಚ್ಚಿದ ಕೆಜಿಎಫ್-2 ಕ್ರೇಜ್...!
ಭರ್ಜರಿ ಮುಂಗಡ ಬುಕ್ಕಿಂಗ್:
ಈಗಾಗಲೇ ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದ್ದು, ಹಿಂದಿ ಭಾಷಾ ಪ್ರದೇಶದಲ್ಲೇ ಇದುವರೆಗೆ ರೂ. 11.40 ಕೋಟಿ ಮೊತ್ತದ ಟಿಕೆಟ್ ಬುಕ್ಕಿಂಗ್ ಆಗಿದೆ. ಇನ್ನು ಕೆಜಿಎಫ್ ಚಾಪ್ಟರ್ 2ನ ಐದು ಭಾಷಾ ಅವತರಣಿಕೆಗಳು ಸೇರಿ ರೂ. 20 ಕೋಟಿ ಮೊತ್ತದ ಮುಂಗಡ ಬುಕ್ಕಿಂಗ್ ಆಗಿದೆ. ಮೊದಲ ದಿನದ ಟಿಕೆಟ್ ದರ ರೂ. 1,450ರಿಂದ ರೂ. 2,000ವರೆಗೂ ಇದೆ. ಮೊದಲ ಪ್ರದರ್ಶನ ನಡುರಾತ್ರಿ 1 ಗಂಟೆಯಿಂದ ಆರಂಭವಾಗಲಿದೆ.
ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್-2 ರಾಜ್ಯದ 500 ಏಕತೆರೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ತಮಿಳುನಾಡಿನಲ್ಲಿ 1 ಸಾವಿರ ಏಕತೆರೆಯ ಚಿತ್ರಮಂದಿರಗಳ ಪೈಕಿ 350 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ತೆಲುಗು ಭಾಷೆಯಲ್ಲೂ ಇದೇ ರೀತಿಯ ಪ್ರತಿಕ್ರಿಯೆ ಇದೆ.
ಇನ್ನೊಂದೆಡೆ ರಿಲೀಸ್ ಆಗುತ್ತಿರುವ ‘ಬೀಸ್ಟ್’ ಚಿತ್ರವು ಏಪ್ರಿಲ್ 13ರಂದು ರಾಜ್ಯದ 300 ಚಿತ್ರಮಂದಿರಗಳಲ್ಲಿ 1,500 ಪ್ರದರ್ಶನ ಕಾಣಲಿದೆ. ಮರುದಿನ ಕೆಜಿಎಫ್ –2 ಬಿಡುಗಡೆ ಹಿನ್ನೆಲೆಯಲ್ಲಿ ‘ಬೀಸ್ಟ್’ ಚಿತ್ರವು 50 ಚಿತ್ರಮಂದಿರಗಳಲ್ಲಷ್ಟೇ ಪ್ರದರ್ಶನ ಕಾಣಲಿದೆ.
ಇದನ್ನು ಓದಿ: ಮತ್ತೆ ಮುಂದೂಡಿಕೆಯಾದ ʼಜರ್ಸಿʼ ಸಿನಿಮಾ ರಿಲೀಸ್ ಡೇಟ್: ಕಾರಣ ಏನು ಗೊತ್ತಾ?
ಶಾಹಿದ್ ʼಜರ್ಸಿʼ ಸಿನಿಮಾ ಮುಂದೂಡಿಕೆ:
ಏಪ್ರಿಲ್ 13 ರಂದು ಜರ್ಸಿ, ಏ.14ರಂದು ಕೆಜಿಎಫ್-2 ಸಿನಿಮಾಗಳು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಿನಿಮಾಕ್ಕೆ ಹೊಡೆತ ಬೀಳಬಾರದು ಎಂಬ ಉದ್ದೇಶದಿಂದ ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ʼಜರ್ಸಿ ʼ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ.
ಪೋಲೆಂಡ್‌ನಲ್ಲೂ ಕೆಜಿಎಫ್-2 ಹವಾ:
ಕೆಜಿಎಫ್ ಹವಾ ದೇಶ ಮಾತ್ರವಲ್ಲದೆ, ವಿದೇಶಗಳಲ್ಲೂ ಹರಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಪುರಾವೆ ಎಂಬಂತೆ ಇದೀಗ ಪೋಲೆಂಡ್‌ನ ವಾರ್ಸಾದ ಕಿನೋಗ್ರಾಮ್‌ನಲ್ಲಿ ಲೋಕಾ ಫಿಲ್ಮ್ಸ್‌ಗೆ ಸಂಬಂಧಿಸಿದ ಯುನೈಟೆಡ್ ಫಿಲ್ಮ್ಸ್ ಯುರೋಪಾದಿಂದ ಮೊದಲ ಬಾರಿಗೆ ಭವ್ಯವಾದ ಟಿಕೆಟ್ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಗಿದೆ. ಇದು ಪೋಲೆಂಡ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆದ ಭವ್ಯವಾದ ಕಾರ್ಯಕ್ರಮ ಎಂಬುದು ವಿಶೇಷ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..