ತಿರುವನಂತಪುರಂ: ಡಿಸೆಂಬರ್ 8ರಿಂದ 15ರವರೆಗೆ 28ನೇ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಇಂದಿನಿಂದ ಅಂದರೆ ಬುಧವಾರ(ನವೆಂಬರ್ 22) ಬೆಳಗ್ಗೆ 10ಗಂಟೆಯಿಂದ ಪ್ರತಿನಿಧಿ ನೋಂದಣಿ ಪ್ರಾರಂಭವಾಗಲಿದೆ.


COMMERCIAL BREAK
SCROLL TO CONTINUE READING

ಪ್ರತಿವರ್ಷದಂತೆ ಈ ವರ್ಷವೂ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಆಯೋಜಿಸಲಾಗಿದೆ. 1996ರಿಂದ ಈ ಈ ಚಲನಚಿತ್ರೋತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕೇರಳ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಸಹಕಾರದೊಂದಿಗೆ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಯು ಈ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ.


ಇದನ್ನೂ ಓದಿ: "ಮಿಚೆಲ್‌ ಮಾರ್ಷ್ ಟ್ರೋಫಿಯ ಮೇಲೆ ಕಾಲುಗಳನ್ನು ಇಡುವುದು ಅಗೌರವವಾಗಿರಲಿಲ್ಲ; ಅದು ಕೇವಲ ಅವರ ವಿಶ್ರಾಂತಿ ಆಗಿತ್ತು": ಚೇತನ್‌ ಅಹಿಂಸಾ!


28ನೇ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿನಿಧಿ ನೋಂದಣಿ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಆಸಕ್ತರು https://www.iffk.in/ ವೆಬ್‍ಸೈಟ್‍ಗೆ ಭೇಟಿ ನೀಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.


ಸಾಮಾನ್ಯ ವರ್ಗಕ್ಕೆ ಶೇ.18ರಷ್ಟು GST ಸೇರಿ 1180 ರೂ. ಮತ್ತು ವಿದ್ಯಾರ್ಥಿಗಳಿಗೆ ಶೇ.18ರಷ್ಟು GST ಸೇರಿ 590 ರೂ. ಆಗುತ್ತದೆ. ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿವಿಧ ಭಾರತೀಯ ಭಾಷೆಗಳ ಸಿನಿಮಾಗಳು ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಭಾಷೆಗಳ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.


ಇದನ್ನೂ ಓದಿ: BBK 10: ಸಂಗೀತಾ ಶೃಂಗೇರಿ ಹೇಳೋದೊಂದು, ಮಾಡೋದೊಂದು! "ಮಾನವೀಯತೆ" ಬರೀ ಡೈಲಾಗ್‌ಗೆ ಮಾತ್ರ ಸೀಮಿತವಾಯ್ತಾ?


ಚಲನಚಿತ್ರೋತ್ಸವದಲ್ಲಿ ಹೆಸರಾಂತ ನಿರ್ದೇಶಕರು ಮತ್ತು ನಿರ್ಮಾಪಕರ ಸಮಕಾಲೀನ ವಿಶ್ವ ಸಿನಿಮಾಗಳು, ಸಮಕಾಲೀನ ಭಾರತೀಯ ಸಿನಿಮಾಗಳು, ಹೊಸ ಮಲಯಾಳಂ ಸಿನಿಮಾಗಳು, ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. IFFK ಸಮಯದಲ್ಲಿ ಫಿಲ್ಮ್ ಮಾರ್ಕೆಟ್ ಮತ್ತು ಸಿನಿಮಾಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸೆಮಿನಾರ್‌ಗಳನ್ನು ಸಹ ಆಯೋಜಿಸಲಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.