31 DAYS Kannada movie : ʼಜಾಲಿಡೇಸ್ʼ ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ʼ31 DAYSʼ ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಅನಾವರಣವಾಯಿತು. 


COMMERCIAL BREAK
SCROLL TO CONTINUE READING

ʼ31 DAYSʼ ಚಿತ್ರಕ್ಕೆ ʼಹೈ ವೋಲ್ಟೇಜ್ ಲವ್ ಸ್ಟೋರಿʼ ಎಂಬ ಅಡಿಬರಹವಿದೆ. ಇದೊಂದು ಪ್ರೇಮ ಕಥಾನಕವಾಗಿದ್ದು, ಚಿತ್ರಸಂತೆಗೆ ಆಗಮಿಸಿದ್ದ 46 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ದಂಪತಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ವಿಶೇಷ. ಶೀರ್ಷಿಕೆಯನ್ನು ಯುವ ಪ್ರೇಮಿಗಳು ಬಿಡುಗಡೆ ಮಾಡಿದರು. ಅಲ್ಲಿ ನೆರದಿದ್ದ ಸಹಸ್ರಾರು ಕಲಾಸಕ್ತರು "31 DAYS" ಚಿತ್ರದ ವಿನೂತನ ಫಸ್ಟ್ ಲುಕ್ ಗೆ ಫಿದಾ ಆದರು.


ಇದನ್ನೂ ಓದಿ:National Youth Day 2024 : ನೋಡಲೇಬೇಕಾದ ಸ್ಪೂರ್ತಿದಾಯಕ ಸಿನಿಮಾಗಳಿವು..!


ನಾನು ಸಹ ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿಯಾಗಿದ್ದು, ಚಿತ್ರಸಂತೆಯಲ್ಲಿ ನಮ್ಮ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆಯಾಗಿದ್ದು ಖುಷಿಯಾಗಿದೆ ಎನ್ನುತ್ತಾರೆ ನಾಯಕ ನಿರಂಜನ್ ಶೆಟ್ಟಿ. Nstar ಬ್ಯಾನರ್‌ನಲ್ಲಿ ನಾಗವೇಣಿ. N. ಶೆಟ್ಟಿ ಅವರು ನಿರ್ಮಿಸುತ್ತಿರುವ "31DAYS" ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ. 


31 DAYS ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಹೆಬ್ರಿ, ಆಗುಂಬೆ, ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ನಿರಂಜನ್ ಶೆಟ್ಟಿ ಅವರು ನಾಯಕನಾಗಿ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸುತ್ತಿದ್ದಾರೆ.  


ಇದನ್ನೂ ಓದಿ:ಟಾಲಿವುಡ್‌ ಎಂಟ್ರೀ ಬಗ್ಗೆ ಖುಷಿ ಹಂಚಿಕೊಂಡ ಕಾಂತಾರ ಮೂಗುತ್ತಿ ಸುಂದರಿ!


ʼ31 DAYSʼ ಚಿತ್ರ ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ ಪ್ರೇಮ ಕಥೆ. 31 ದಿನಗಳಲ್ಲಿ ನಡೆಯುವ ಹೈ ವೋಲ್ಟೇಜ್‌ ಲವ್‌ ಸ್ಟೋರಿ ಇದಾಗಿದೆ. 4 ಹಾಡುಗಳಿರುವ ಈ ಚಿತ್ರಕ್ಕೆ ವಿ. ಮನೋಹರ್ ರವರ ಸಂಗೀತ ನಿರ್ದೇಶನವಿದೆ. ಇದು ವಿ.ಮನೋಹರ್ ಅವರ ಸಂಗೀತ ನಿರ್ದೇಶನದ 150 ನೇ ಚಿತ್ರವೂ ಹೌದು. ವಿನುತ್. K  ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ ಹಾಗೂ ಸನತ್ ರವರ ಸಂಕಲನ ಈ ಚಿತ್ರಕ್ಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.