ಬೆಂಗಳೂರು: ರಾಜ್ಯದ ನಾನಾ ಕಡೆಯಿಂದ ಆಗಮಿಸುತ್ತಿರುವ ಅಭಿಮಾನಿಗಳು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೇ ತಿಂಗಳ 10 ರಂದು ಉಪೇಂದ್ರ ತಮ್ಮ ಅಭಿಮಾನಿಗಳಿಗೆ "ಪ್ರೀತಿಯ ಅಭಿಮಾನಿಗಳೇ ದಯವಿಟ್ಟು ಹಾರ, ಕೇಕ್, ಬ್ಯಾನರ್ ಗಳಿಗೆ ಅನವಶ್ಯಕ ಖರ್ಚು ಮಾಡದೆ ನಿಮ್ಮ ಪ್ರೀತಿ ಶುಭಾಶಯಗಳೊಂದಿಗೆ ಬಂದು ನನ್ನ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಟ್ವೀಟ್ ಮಾಡಿದ್ದರು.


COMMERCIAL BREAK
SCROLL TO CONTINUE READING

ರಿಯಲ್ ಸ್ಟಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಪ್ರಜಾಕೀಯ ಬೆಂಬಲಿಗರಿಂದ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ "ಗಿಡ ನೆಡುವ ಕಾರ್ಯಕ್ರಮ"ವನ್ನು ಉಪೇಂದ್ರ ಅಭಿಮಾನಿಗಳು ನಿನ್ನೆ ತುಮಕೂರಿನಲ್ಲಿ ನೆರವೇರಿಸಿದರು.


ಹುಟ್ಟುಹಬ್ಬದ ಪ್ರಯುಕ್ತ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಟ್ರೇಲರ್ ಇಂದು ಬಿಡುಗಡೆಗೊಳ್ಳಲಿದೆ. 


ಉಪೇಂದ್ರ ಕುರಿತಾದ 'ನಮ್ಮ ಉಪ್ಪಿ ಹತ್ತಿರದವರು ಕಂಡಂತೆ' ಪುಸ್ತಕ ಬಿಡುಗಡೆಯೂ ಸಹ ನಡೆಯಲಿದ್ದು 
ಇದು ಉಪೇಂದ್ರ ಹುಟ್ಟುಹಬ್ಬದ ವಿಶೇಷವಾಗಿದೆ.