Kabzaa movie : ಕಬ್ಜ ಬಾಕ್ಸಾಫೀಸ್ ಲೆಕ್ಕಚಾರಕ್ಕೆ ಆ ಮೇಲೆ ಬರೋಣ.. ಮೊದಲಿಗೆ ತೊಡೆ ತಟ್ಟಿ ಹೇಳಬೇಕಿರೋದು.. ಕಾಲರ್ ಮೇಲೆತ್ತಿ ಹೇಳಬೇಕಿರೋದು.. ಎದೆ ಉಬ್ಬಿಸಿ ಹೇಳಬೇಕಿರೋದು ಅಂದ್ರೆ ನಮ್ಮ ಕನ್ನಡ ಸಿನಿಮಾಗಳು ಪ್ರಪಂಚದ ಮೂಲೆ ಮೂಲೆಯನ್ನೂ ತಲುಪಿವೆ ಅನ್ನೋ ವಿಚಾರನ.. ಇದು ಆರ್.ಚಂದ್ರು ಕನಸು, ತಪಸ್ಸು.. ನಮ್ಮ ಕನ್ನಡ ಸಿನಿಮಾ ಯಾರಿಗೂ ಕಮ್ಮಿಯಿಲ್ಲ.. ನಮ್ಮ ಇಂಡಸ್ಟ್ರಿ ಚಿಕ್ಕದಲ್ಲ.. ನಮಗೆ ವಿಶ್ವದಾದ್ಯಂತ ಮಾರುಕಟ್ಟೆ ಇದೆ ಅಂತ ಶಥಪಥ ಹೆಜ್ಜೆ ಇಟ್ಟಿದ್ದು ಚಂದ್ರು..


COMMERCIAL BREAK
SCROLL TO CONTINUE READING

ಯೆಸ್ ಅತ್ತ ಜರ್ಮನ್‍ನ ಬರ್ಲಿನ್.. ಮಲೇಷಿಯಾ, ಇಂಡೋನೇಷಿಯಾ, ಯು.ಕೆ. ಯು.ಎಸ್, ಆಸ್ಟ್ರೇಲಿಯಾ, ಮಸ್ಕತ್ ಹೀಗೆ ಒಂದಾ ಎರಡಾ? ವಿಶ್ವದ ಮೂಲೆ ಮೂಲೆಯಲ್ಲೂ ಕನ್ನಡದ ಕಹಳೆ ಊದುತ್ತಿದ್ದಾರೆ.. ಲಾಭ-ನಷ್ಟ ಸೆಕೆಂಡರಿ, ನಮ್ಮ ಕನ್ನಡ ಜಗದ ಮೂಲೆ ಮೂಲೆ ತಲುಪಬೇಕು.. ಕನ್ನಡದ ಗತ್ತು ತಾಕತ್ತು ಎಂತದ್ದು ಎಂಬುದನ್ನ ವಿಶ್ವಕ್ಕೆ ತೋರಿಸಬೇಕು ಅನ್ನೋ ಮಹತ್ವಕಾಂಕ್ಷೆಯಲ್ಲಿ ಸಿನಿಮಾವನ್ನ ಆಯಾ ಭಾಗದ ಕನ್ನಡಿಗರಿಂದಲೇ ರಿಲೀಸ್ ಮಾಡಿಸಿದ್ದಾರೆ.. ಇಲ್ಲಿ ಪ್ರೊಫೆಷನಲ್ ಡಿಸ್ಟ್ರಿಬ್ಯೂಟರ್ ಅಂತ ಯಾರೂ ಇಲ್ಲ.. ಎಲ್ಲರೂ ನಮ್ಮ ಕನ್ನಡ ಸಿನಿಮಾ ಎಂಬ ಖುಷಿಯಲ್ಲಿ, ಸಂಭ್ರಮದಲ್ಲಿ ಅವ್ರವ್ರೇ ರಿಲೀಸ್ ಮಾಡಿದ್ದಾರೆ.


ಇದನ್ನೂ ಓದಿ : Kabzaa collection: ಕಬ್ಜ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?


ಇದು ದೇಶದಾಚೆಗಿನ ಮಾತಾದ್ರೆ, ದೇಶದೊಳಗೆ ಅಂತೂ ಸುನಾಮಿನೇ ಎದ್ದಿದೆ.. ಅಕೇಶ್ವರನ ಆರ್ಭಟಕ್ಕೆ ಹಳೇ ದಾಖಲೆಗಳೆಲ್ಲಾ ಕೊಚ್ಚಿ ಹೋಗಿವೆ.. ಹೊಸದೊಂದು ಚರಿತ್ರೆ ನಿರ್ಮಾಣವಾಗಿದೆ.. ಹೊಸ ದಾಖಲೆಗಳನ್ನ ಕಬ್ಜ ಮಾಡಿಕೊಳ್ಳಲಾಗಿದೆ.. ಅತ್ತ ಮುಂಬೈನಿಂದ ಹೌಸ್‍ಫುಲ್ ಸಾರ್ ಅನ್ನೋ ಮಾತು ಕೇಳಿ ಬರ್ತಿದೆ.. ಇತ್ತ ಹೈದರಾಬಾದ್, ಚೆನೈನಿಂದಲೂ ಬ್ಯಾಕ್ ಟು ಬ್ಯಾಕ್ ಕರೆಗಳು ಬರ್ತಿವೆ.. ಎಲ್ಲಾರ ಅಭಿಪ್ರಾಯ ಮಾತು ಒಂದೇ ಸಾರ್ ಸಖತ್ ರೆಸ್ಪಾನ್ಸ್ ಸರ್ ಅನ್ನೋದೆ ಆಗಿದೆ..


ಇನ್ನು ನಮ್ಮ ಕರ್ನಾಟಕದಲ್ಲಂತೂ ಹೇಳುವ ಹಾಗೆಯೇ ಇಲ್ಲ.. ಬೆಂಗಳೂರಿನ ನರ್ತಕಿಯಲ್ಲಿ ಹೌಸ್‍ಫುಲ್ ಶೋಗಳ ನರ್ತನವೇ ಆಗಿ ಹೋಗಿದೆ.. ಸತತ 13 ಶೋ ನರ್ತಕಿಯಲ್ಲಿ ತುಂಬಿದ ಪ್ರದರ್ಶನ ಕಂಡಿದೆ ಕಬ್ಜ.. ಮೆಜೆಸ್ಟಿಕ್ ನಲ್ಲಿ ಸಿನಿಮಾ ನೋಡುವ ಸಂಪ್ರದಾಯವೇ ಮರೆತೋಯ್ತು.. ಕೆಜಿ ರಸ್ತೆಯ ಸಿನಿಮಾ ಮಂದಿರಗಳತ್ತ ಜನ ಬರ್ತಿಲ್ಲ ಎನ್ನುವಾಗಲೇ ನರ್ತಕಿಯಲ್ಲಿ ಸತತ 13 ಶೋಗಳು ಹೌಸ್‍ಫುಲ್ ಪ್ರದರ್ಶನ ಕಂಡಿರೋದು ದಾಖಲೆಯೇ ಸರಿ..


ಮತ್ತೊಂದು ಕಡೆ ಕಾಂತಾರ ನಂತ್ರ 130 ಕನ್ನಡ ಸಿನಿಮಾಗಳು ರಿಲೀಸ್ ಆಗಿದ್ವು.. ಅದರಲ್ಲಿ ಯಾವ ಸಿನಿಮಾ ಸಹ ಗೆಲುವಿನ ಬಾವುಟ ಹಾರಿಸಿದ ಉದಾಹರಣೆ ಇರಲಿಲ್ಲ.. ಜನ ಥಿಯೇಟರ್‍ನ ಮರೆತೇ ಹೋಗಿಬಿಟ್ರಾ ಎಂಬ ಅನುಮಾನ ಹುಟ್ಟಿತ್ತು.. ಹಿಂದೆ ಆದ್ರೆ ಹೆಂಗೆ ಗುರು ಅನ್ನೋ ಯೋಚನೆ ಶುರುವಾಗಿತ್ತು.. ಮತ್ತಷ್ಟು ಮಗದಷ್ಟು ಥಿಯೇಟರ್‍ಗಳು ಬಾಗಿಲು ಮುಚ್ಬೇಕಾಗುತ್ತೆ ಎಂಬ ಮಾತು ಇತ್ತು.. ಆದ್ರೆ ಸತ್ತಿರೋ ಜೀವಕ್ಕೆ ಉಸಿರುಕೊಟ್ಟಂತೆ ಚಂದ್ರು ಸಂಜೀವಿನಿಯಾಗಿದ್ದಾರೆ.. ಥಿಯೇಟರ್‍ಗಳಲ್ಲಿ ಮತ್ತೆ ಹೌಸ್‍ಫುಲ್ ಬೋರ್ಡ್‍ಗಳು ಧೂಳು ಕೊಡವಿ ಎದ್ದು ನಿಂತಿವೆ


ಇದನ್ನೂ ಓದಿ : URFI JAVED: ʼನಮ್ಮ ಮಹಿಳೆಯರು ಸೋಮಾರಿ’ ಹೇಳಿಕೆಗೆ ತಿರುಗೇಟು ನೀಡಿದ ಉರ್ಫಿ! 


ಗಾಂಧಿನಗರದ ಮಂದಿ, ಥಿಯೇಟರ್ ಮಂದಿ ಚಂದ್ರುಗೆ ಸಾಷ್ಟಾಂಗ ನಮಸ್ಕಾರ ಅಂತಿದ್ದಾರೆ.. ಬರದ ನಾಡಲ್ಲಿ ಓಯಸಿಸ್ ಸಿಕ್ಕಂತೆ ಕನ್ನಡ ಚಿತ್ರರಂಗಕ್ಕೆ ಉಸಿರು ಕೊಟ್ಟಿದ್ದೀರಿ ಸಾರ್ ಅಅಂತ ಕೊಂಡಾಡ್ತಿದ್ದಾರೆ.. ಆಡೋರ್ ಆಡ್ಕೊಳಿ, ಆಡೋರ ಬಾಯಿ ಮುಚ್ಚಿಸುವಂತೆ ಚಂದ್ರು ಗೆದ್ದು ತೋರಿಸಿದ್ದಾರೆ.. ಎರಡು ದಿನಗಳಲ್ಲಿ 100 ಕೋಟಿ ಕ್ಲಬ್ ಜಾಯ್ನ್ ಆಗಿದ್ದಾರೆ.. 200 ಕೋಟಿಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಆರ್.ಚಂದ್ರು.. ಮುಂದಿನ ವಾರ ಕೂಡ ಇರೋದ್ರಿಂದ 300, 400 ಕೋಟಿ ಕ್ಲಬ್ ಸಹ ಕಷ್ಟವಲ್ಲ.. ಅಲ್ಲಿಗೆ ಕೆಜಿಎಫ್, ಕಾಂತಾರಕ್ಕೂ ಸೆಡ್ಡು ಹೊಡೆದು ತಲೆ ಎತ್ತಿನಿಂತಿದ್ದಾರೆ ಚಂದ್ರುಭಾಯ್...


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.