Kannada Serial : ಹೆಸರೇ ಹೇಳೋ ತರ ಇದು ಕನ್ನಡದ ಕಂಪು ತುಂಬಿರೋ ಸೀರಿಯಲ್ ಅಂತಾನೆ ಹೇಳಬಹುದು. ಕನ್ನಡ ಬರೀ ಭಾಷೆ ಅಲ್ಲ ಬದುಕು ಅಂತ ನಂಬಿರೋ ಊರಿನಲ್ಲಿ ಹುಟ್ಟಿರೋ ಕಾವೇರಿ ಅನ್ನೋ ಹೆಣ್ಣು ಮಗಳು ವೃತ್ತಿಯಲ್ಲಿ ಶಿಕ್ಷಕಿ, ಅಪ್ಪ ಕಟ್ಟಿರೋ ಕನ್ನಡ ಶಾಲೆಯನ್ನು ಕಾಪಾಡೋದಕ್ಕಾಗಿ ಹಾಗು ಅದರ ಅಭಿವೃದ್ದಿಗಾಗಿ ಸದಾಕಾಲ ಹೋರಾಡೋಳು. 


COMMERCIAL BREAK
SCROLL TO CONTINUE READING

ಇನ್ನು ಕಥಾ ನಾಯಕ ಅಗಸ್ತ್ಯ ಇಂಡಿಯಾದಲ್ಲೇ ಒನ್ ಆಫ್ ದಿ ಬೆಸ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಓನರ್ ಈತನಿಗೆ ಆತನ ಶಾಲೆ ಅಭಿವೃದ್ಧಿ ಆಗ್ಬೇಕು ಅಷ್ಟೇ ವಿನಹ ಬೇರೆಯಾವುದು ಆತನ ಲೆಕ್ಕಕ್ಕೆ ಬರಲ್ಲ. ಆದರೆ ಕನ್ನಡ ಶಾಲೆಯನ್ನು ಉಳಿಸೋ ಸಲುವಾಗಿ ಅಗಸ್ತ್ಯ ನೀಡಿರುವ ಸವಾಲನ್ನು ಸ್ವೀಕರಿಸಿ, ಕಾವೇರಿ 6 ತಿಂಗಳುಗಳ ಕಾಲ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾಳೆ ? ಇವರಿಬ್ಬರ ಉದ್ದೇಶ ಒಂದೇ ಆಗಿದ್ದರು ಅನುಸರಿಸೋ ದಾರಿಗಳು ಮಾತ್ರ ಬೇರೆ ಬೇರೆ, ಈ ಕವಲು ದಾರಿಗಳು ಹೇಗೆ ಒಂದಾಗ್ತವೆ ಅನ್ನೋದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.


ಇದನ್ನೂ ಓದಿ-ಧೋನಿಗೆ ಅಂದು ನಟ ಅಂಬರೀಶ್ ಕೊಟ್ಟ ಹಣ ಎಷ್ಟು? ಕಷ್ಟದಲ್ಲಿ ಕ್ರಿಕೆಟಿಗನ ಕೈ ಹಿಡಿದ ಮಂಡ್ಯದ ಗಂಡು!


ಇನ್ನು ಈ ಸೀರಿಯಲ್ ನ ನಾಯಕನಾಗಿ 'ಮತ್ತೆ ವಸಂತ' ಧಾರವಾಹಿ ಖ್ಯಾತಿಯ ರಕ್ಷಿತ್ ಹಾಗು ನಾಯಕಿಯಾಗಿ ಪ್ರಿಯ ಜೆ ಆಚಾರ್ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಮತ್ತೊಂದು ವಿಶೇಷತೆ ಅಂದರೆ ಸರಿ ಸುಮಾರು 30 ವರ್ಷಗಳ ಹಿಂದೆ ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ಮಹಾಲಕ್ಷ್ಮಿಯವರು ಇದೇ ಮೊಟ್ಟ ಮೊದಲ ಬಾರಿಗೆ ಖಾಸಗಿ ವಾಹಿನಿ ಮೂಲಕ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. 


ವರ್ಷಗಳ ಬಳಿಕ ನಟನೆಯ ಮೂಲಕ ಮಹಾಲಕ್ಷ್ಮಿಯವರನ್ನು ಕನ್ನಡ ಕಿರುತೆರೆಗೆ ಪರಿಚಯಿಸಲು ಸ್ಟಾರ್ ಸುವರ್ಣ ವಾಹಿನಿ ಹೆಮ್ಮೆ ಪಡುತ್ತದೆ. ಕರ್ನಾಟಕದ ಸುಂದರ ತಾಣಗಳಾದ ದಕ್ಷಿಣ ಕನ್ನಡ ಹಾಗು ಆಗುಂಬೆಯಲ್ಲಿ ಈ ಧಾರವಾಹಿಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅದ್ಬುತ ತಾರಾಬಳಗವನ್ನು ಈ ಧಾರಾವಾಹಿ ಹೊಂದಿದೆ.


ಶುರುವಾಗ್ತಿದೆ ಮಾತೃಭಾಷೆ ಕನ್ನಡವನ್ನು ಉಸಿರಾಗಿಸಿಕೊಂಡವಳ ಕತೆ "ಕಾವೇರಿ ಕನ್ನಡ ಮೀಡಿಯಂ" ಇದೇ ಆಗಸ್ಟ್ 28 ರಿಂದ ರಾತ್ರಿ 7.30 ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.


ಇದನ್ನೂ ಓದಿ-ಜವಾನ್‌ಗೆ ಯು/ಎ ಪ್ರಮಾಣಪತ್ರ! ಚಿತ್ರ ಹೇಗಿದೆ? ನೋಡಿದವರು ಹೇಳಿದ ವಿಮರ್ಶೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.