ಕಿಚ್ಚ ಸುದೀಪ್ಗಾಗಿ ಸ್ಪೆಷಲ್ ಜಾಕೆಟ್ ತಂದ ಅಭಿಮಾನಿ..! ಯಾಕೆ ಗೊತ್ತಾ..?
ಬಾಕ್ಸ್ ಆಫಿಸ್ ಬಾದ್‌ಷಾ, ಕನ್ನಡದ ಕಂಪನ್ನು ತಮ್ಮ ಸಿನಿಮಾ ಮೂಲಕ ಜಗದಗಲ ಹರಿಸುತ್ತಿರುವ ನಟ ಕಿಚ್ಚ ಸುದೀಪ್‌ಗೆ ಅಭಿಮಾನಿಗಳನ್ನ ಕಂಡರೆ ಅದೇನೋ ವಿಪರೀತ ಪ್ರೀತಿ. ಹಾಗೇ ಕೋಟಿ ಕೋಟಿ ಅಭಿಮಾನಿ ಬಳಗಕ್ಕೂ ಇದೇ ರೀತಿ ಕಿಚ್ಚ ಸುದೀಪ್ ಅವರ ಮೇಲೆ ಸಾಕಷ್ಟು ಅಭಿಮಾನ ಹಾಗೂ ಸಾಕಷ್ಟು ಪ್ರೀತಿ. ಹೀಗೆ ನಟ ಸುದೀಪ್ ಅವರ ಮೇಲಿನ ಪ್ರೀತಿಯನ್ನ ಫ್ಯಾನ್ಸ್ ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು: ಬಾಕ್ಸ್ ಆಫಿಸ್ ಬಾದ್‌ಷಾ, ಕನ್ನಡದ ಕಂಪನ್ನು ತಮ್ಮ ಸಿನಿಮಾ ಮೂಲಕ ಜಗದಗಲ ಹರಿಸುತ್ತಿರುವ ನಟ ಕಿಚ್ಚ ಸುದೀಪ್‌ಗೆ ಅಭಿಮಾನಿಗಳನ್ನ ಕಂಡರೆ ಅದೇನೋ ವಿಪರೀತ ಪ್ರೀತಿ. ಹಾಗೇ ಕೋಟಿ ಕೋಟಿ ಅಭಿಮಾನಿ ಬಳಗಕ್ಕೂ ಇದೇ ರೀತಿ ಕಿಚ್ಚ ಸುದೀಪ್ ಅವರ ಮೇಲೆ ಸಾಕಷ್ಟು ಅಭಿಮಾನ ಹಾಗೂ ಸಾಕಷ್ಟು ಪ್ರೀತಿ. ಹೀಗೆ ನಟ ಸುದೀಪ್ ಅವರ ಮೇಲಿನ ಪ್ರೀತಿಯನ್ನ ಫ್ಯಾನ್ಸ್ ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡದ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ಅಬ್ಬರಿಸಿ ಬೊಬ್ಬಿರಿಯಲು ಸಜ್ಜಾಗಿದೆ. ಇನ್ನೇನು ಜುಲೈ 28 ಅಂದ್ರೆ ಗುರುವಾರ ‘ವಿಕ್ರಾಂತ್ ರೋಣ’ ಚಿತ್ರ ಜಗತ್ತಿನಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಎಂಟ್ರಿ ಕೊಡಲಿದೆ. ಆದರೆ ಈ ಸಂಭ್ರಮಕ್ಕೂ ಮೊದಲು ಬೆಂಗಳೂರಲ್ಲಿ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಿತ್ತು ‘ವಿಕ್ರಾಂತ್ ರೋಣ’ ತಂಡ. ಈ ಇವೆಂಟ್‌ನಲ್ಲಿ ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಅಭಿಮಾನ ಎಂತಹದ್ದು ಅನ್ನೋದು ಇಡೀ ಜಗತ್ತಿಗೇ ಮತ್ತೊಮ್ಮೆ ಮನವರಿಕೆ ಆಗಿದೆ.
ಇದನ್ನೂ ಓದಿ: 'Vikrant Rona' ಬಿಡುಗಡೆಗೆ ವಿಶ್ವಾದ್ಯಂತ ಕೌಂಟ್ ಡೌನ್ ಶುರು..!
ಸ್ಪೆಷಲ್ ಜಾಕೆಟ್ :
ಬೆಂಗಳೂರಿನ ಅಭಿಮಾನಿ ಒಬ್ಬರು ಕಿಚ್ಚ ಸುದೀಪ್ ಅವರಿಗೆ ಸ್ಪೆಷಲ್ ಜಾಕೆಟ್ ಒಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ‘ವಿಕ್ರಾಂತ್ ರೋಣ’ ಪ್ರಿಂಟ್ ಇದ್ದ ಹ್ಯಾಂಡ್ ಮೇಡ್ ಜಾಕೆಟ್‌ನ ಅಭಿಮಾನಿ ಗಿಫ್ಟ್ ಆಗಿ ನೀಡಿದ್ದಾರೆ. ಕುಟುಂಬ ಸಮೇತ ಆಗಮಿಸಿದ್ದ ಕಿಚ್ಚ ಸುದೀಪ್ ಅವರ ಅಭಿಮಾನಿ, ಸ್ಪೆಷಲ್ ಹ್ಯಾಂಡ್ ಮೇಡ್ ಜಾಕೆಟ್ ನೀಡಿದರು. ತಮ್ಮ ಫ್ಯಾನ್ಸ್ ನೀಡುವ ಉಡುಗೊರೆಯನ್ನ ಅತಿ ಪ್ರೀತಿಯಿಂದ ಸ್ವೀಕರಿಸುವ ಕಿಚ್ಚ ಸುದೀಪ್ ಈ ಗಿಫ್ಟ್‌ಗೂ ಫಿದಾ ಆಗಿದ್ದರು. ತಮ್ಮ ಅಭಿಮಾನಿ ಎದುರು ಸ್ಪೆಷಲ್ ಜಾಕೆಟ್ ತೊಟ್ಟು, ಸಂತಸಪಟ್ಟರು.
ಇದನ್ನೂ ಓದಿ: ಸಮಂತಾ - ನಾಗ ಚೈತನ್ಯ ವಿಚ್ಛೇದನಕ್ಕೆ ಅಮೀರ್ ಖಾನ್ ಕಾರಣವೇ!?
ಒಟ್ಟಾರೆ ಹೇಳೋದಾದ್ರೆ ನಾಳೆ ಜಗತ್ತಿನಾದ್ಯಂತ ‘ವಿಕ್ರಾಂತ್ ರೋಣ’ ಹಬ್ಬ ವಿಜೃಂಭಣೆಯಿಂದ ನಡೆಯೋದು ಪಕ್ಕಾ. ಅದರಲ್ಲೂ ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಈ ಸಿನಿಮಾ ತುಂಬಾ ಅಂದ್ರೆ ತುಂಬಾನೆ ಸ್ಪೆಷಲ್. ಎಲ್ಲರೂ ಉಸಿರು ಬಿಗಿ ಹಿಡಿದು ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.