KRG Studios ಮತ್ತು TVF Motion Picturesನ ಚೊಚ್ಚಲ ಸಹಯೋಗವಾದ ʼಪೌಡರ್ʼ ಬೆಂಗಳೂರಿನ ಹೆಸರಾಂತ ಪಬ್ʼಗಳಲ್ಲಿ ಒಂದಾದ ʼ1522- ದಿ‌ ಪಬ್ʼ ಜೊತೆಗೆ ಒಂದು ವಿಶೇಷವಾದ ಸಹಯೋಗಕ್ಕೆ ಮುಂದಾಗಿದೆ. ಹಾಸ್ಪಿಟ್ಯಾಲಿಟಿ ಪಾರ್ಟ್ನರ್ಸ್ ಆಗಿ ʼ1522- ದಿ‌ ಪಬ್ʼ ಕೆ.ಆರ್.ಜಿ. ಸಂಸ್ಥೆಯೊಡನೆ ಕೈ ಜೋಡಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಪೌಡರ್ ಒಂದು ಹಾಸ್ಯಭರಿತ ಚಿತ್ರವಾಗಿದೆ. ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು. ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಹುವುದೇ? ಪೌಡರ್ ಹಿಂದಿನ ಪವರ್ ಅವರಿಗೆ ತಿಳಿಯುವುದೇ? ಇದುವೇ ಕಥೆಯ ಸಾರಾಂಶ. ಈ ನಿಟ್ಟಿನಲ್ಲಿ KRG Studiosನ ಮಾರ್ಕೆಟಿಂಗ್ ತಂಡವಾದ ಕೆ.ಆರ್.ಜಿ. ಕನೆಕ್ಟ್ಸ್ ,ಯುವ ಪ್ರೇಕ್ಷಕರನ್ನು ಕರೆತರಲು ಈ ಸಹಯೋಗವನ್ನು ಮುಂದಿಟ್ಟಿದೆ.


ಇದನ್ನೂ ಓದಿ:  ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನ ಒಟ್ಟು ಆಸ್ತಿ ಎಷ್ಟು ಗೊತ್ತಾ?


ಈ ಸಹಯೋಗದ ಮೂಲಕ ಚಿತ್ರ ತಂಡವು 1522ನ ಔಟ್ಲೆಟ್ ಗಳಲ್ಲಿ ಸ್ಟ್ಯಾಂಡ್ ಅಪ್ ಹಾಸ್ಯ ಕಾರ್ಯಕ್ರಮಗಳು, ಸಿನಿತಾರೆಗಳೊಡನೆ ಪ್ರೇಕ್ಷಕರ ಭೇಟಿ,ಮಾತುಕತೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ‌ ಈ ಸಹಯೋಗವು "ಪೌಡರ್" ಮತ್ತು ಯುವ ಪ್ರೇಕ್ಷಕರ, ಸ್ಟ್ಯಾಂಡ್ ಅಪ್ ಹಾಸ್ಯ ಕಲಾವಿದರ, "೧೫೨೨-ದಿ ಪಬ್" ಹಾಗೂ ಚಿತ್ರರಂಗದ ಸಮಾಗಮ ಎಂದರೆ ಉತ್ಪ್ರೇಕ್ಷೆಯಲ್ಲ.


ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಪೌಡರ್ ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.


1522-ದಿ ಪಬ್ ನಲ್ಲಿ ಸ್ಟ್ಯಾಂಡ್ ಅಪ್ ಹಾಸ್ಯ ಕಾರ್ಯಕ್ರಮಗಳು:
ಹೆಸರಾಂತ ಸ್ಟ್ಯಾಂಡ್ ಅಪ್ ಹಾಸ್ಯ ಕಲಾವಿದರಾದ ಗಣೇಶ್ ಕಶ್ಯಪ್, ನಿತಿನ್ ಎಂ ಕಾಮತ್ ಮತ್ತು ಶ್ರವಣ್ ಪಿ 1522 ಪಬ್ ಔಟ್ಲೆಟ್ʼಗಳಲ್ಲಿ ಸ್ಟ್ಯಾಂಡ್ ಅಪ್ ಹಾಸ್ಯ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಈ ಕುರಿತು ಕಲಾವಿದರು ಮಾತನಾಡಿ, " ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಯಾದ ಕೆ.ಆರ್.ಜಿ. ಸ್ಟೂಡಿಯೋಸ್ ಜೊತೆಗೆ ಈ‌ ಸಹಯೋಗಕ್ಕೆ ಮುಂದಾಗಿರುವುದು ನಮಗೆ ಸಂತಸ ತಂದಿದೆ. ಈ ಮೂಲಕ ಪ್ರೇಕ್ಷಕರನ್ನು ಇನ್ನಷ್ಟು ನಕ್ಕು ನಗಿಸುವ ಕಂಟೆಂಟ್ ನೀಡಲಿದ್ದೇವೆ. ಕೆ.ಆರ್.ಜಿ ಸಂಸ್ಥೆಯೊಡನೆ ಇನ್ನಷ್ಟು ಹೊಸ ಸಹಯೋಗಗಳಿಗೆ ಇದು ಮೊದಲ ಹೆಜ್ಜೆಯಾಗಲಿದೆ ಎಂದು ಭಾವಿಸುತ್ತೇವೆ" ಎಂದು ಪ್ರಶಂಸೆ ವ್ಯಕ್ತಪಡಿಸಿದರು.


1522- ದಿ ಪಬ್ ಕುರಿತು:
1522- ದಿ ಪಬ್ ಬೆಂಗಳೂರಿನ ಹೆಸರಾಂತ ಪಬ್ ಗಳಲ್ಲಿ ಅಗ್ರ ಸ್ಥಾನ ಪಡೆದಿದೆ. ಮಲ್ಲೇಶ್ವರಂ, ಜೆ.ಪಿ. ನಗರ್, ಸರ್ಜಾಪುರ, ನ್ಯೂ ಬೆಲ್ ರಸ್ತೆ, ಕೋರಮಂಗಲ ಸೇರಿದಂತೆ 10ಕ್ಕೂ ಹೆಚ್ಚು ಔಟ್ಲೆಟ್ ಗಳನ್ನು ಈ ಪಬ್ ಹೊಂದಿದೆ. 


ಇನ್ನು 2017ರಲ್ಲಿ ಆರಂಭಗೊಂಡ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಅವರ ಕನಸಿನ ಕೂಸಾದ KRG Studios ಸಂಸ್ಥೆ, ನಾಡಿನ ಹೆಸರಾಂತ ಚಿತ್ರ ವಿತರಣಾ ಮತ್ತು ನಿರ್ಮಾಣ ಸಂಸ್ಥೆಯಾಗಿದೆ. 2020ರಲ್ಲಿ ಚಿತ್ರ ನಿರ್ಮಾಣಕ್ಕೆ ಕಾಲಿಟ್ಟು, ವಿಭಿನ್ನ ಕಥಾವಸ್ತುವನ್ನು ಹೊಂದಿರುವ ತನ್ನ ಚಿತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದೆ. "ಪೌಡರ್" ಅವರ ಮುಂಬರುವ ಚಿತ್ರವಾಗಿದೆ. 


ಸಂಸ್ಥೆಯ ಮಾಲೀಕರಾದ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಈ ಸಹಯೋಗದ ಕುರಿತು‌ ಮಾತನಾಡಿ, "1522- ದಿ ಪಬ್ ಯುವ ಪೀಳಿಗೆಯನ್ನು ಆಕರ್ಷಿಸುವ ಹೆಸರಾಂತ ಪಬ್ ಆಗಿದೆ. ನಮ್ಮ ಚಿತ್ರ "ಪೌಡರ್" ಯುವ ಪ್ರೇಕ್ಷಕರ ಮನರಂಜಿಸುವ ಚಿತ್ರವಾಗಿದ್ದು, ಈ‌ ಕಾರಣ ನಾವು ಈ‌ ಸಹಯೋಗಕ್ಕೆ ಮುಂದಾಗಿದ್ದೇವೆ. ಅಷ್ಟೇ ಅಲ್ಲದೆ,  1522- ದಿ‌ ಪಬ್ ನ‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಚೇತನ್‌ ಹೆಗಡೆ ನಮ್ಮ ಆಪ್ತ ಸ್ನೇಹಿತ‌. ಹಾಗಾಗಿ ಈ ಸಹಯೋಗ ನಮಗೆ ವಿಶೇಷವಾಗಿದೆ" ಎಂದಿದ್ದಾರೆ.


ಇದನ್ನೂ ಓದಿ:  "ದರ್ಶನ್‌ ಬಿಡುಗಡೆಯಾಗಿ ನಮ್ಮ ಮನೆಗೆ ಬಂದ್ರೆ...."- ಮೃತ ರೇಣುಕಾಸ್ವಾಮಿ ತಂದೆಯ ಅಚ್ಚರಿಯ ಹೇಳಿಕೆ ವೈರಲ್


ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಸಂಸ್ಥಾಪಕ ಅರುನಭ್‌ ಕುಮಾರ್‌ ಸಾರಥ್ಯದಲ್ಲಿ, ತನ್ನ ಆರಂಭದ ದಿನದಿಂದಲೂ, ಉತ್ತಮ ಗುಣ ಮಟ್ಟದ ಕಥೆಗಳ ಮೂಲಕ ಟಿ.ವಿ.ಎಫ್‌ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದೆ. ತನ್ನ ೧೦ ವರ್ಷಗಳ  ಪಯಣದಲ್ಲಿ, ಹಲವಾರು "ಸ್ಟೀರಿಯೋ ಟೈಪ್"ಗಳನ್ನು ಭೇದಿಸಿದೆ. "ದಿ ವೈರಲ್‌ ಫೀವರ್" ಎಂಬ ಶೀರ್ಷಿಕೆಯೊಂದಿಗೆ ಸಾವಿರಾರು ಪ್ರೇಕ್ಷಕರ ಮನಮುಟ್ಟಿದೆ. ಈ ನಡುವೆ ಹಲವಾರು ನಿರ್ಮಾಣ ಸಂಸ್ಥೆಗಳು ಉಗಮವಾಗಿದ್ದರೂ, ಟಿ.ವಿ.ಎಫ್‌ ವೆಬ್‌ ಕಂಟೆಂಟ್‌  ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews