Vishnupriya smoking video: ಹುಡುಗರು ಮಾತ್ರವಲ್ಲ ಹುಡುಗಿಯರೂ ಸಿಗರೇಟ್ ಸೇದುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದೂ ಕೂಡ ಅದೇ! ಅಂದಹಾಗೆ ಬಿಗ್‌ ಬಾಸ್‌ ವೀಕ್ಷಕರಿಗೆ ತಿಳಿದಂತೆ, ಬಿಗ್‌ ಬಾಸ್‌ ಮನೆಯಲ್ಲಿ ಸ್ಮೋಕಿಂಗ್‌ ಝೋನ್‌ ಎಂಬುದು ಇರುತ್ತದೆ. ಈ ಸೌಲಭ್ಯ ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿಯೂ ಇದೆ. ಆದರೆ ಈ ಬಾರಿ ಕನ್ನಡದ ಸೀಸನ್‌ನಲ್ಲಿ ಆ ರೀತಿ ಯಾವುದು ಕಾಣಿಸುತ್ತಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಹೋಟೆಲ್‌ನಲ್ಲಿ ಸರ್ವರ್‌ ಆಗಿ ಕೆಲಸ ಮಾಡಿದ್ದ ಈಕೆ ಇಂದು ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳುತ್ತಿರುವ ಬ್ಯೂಟಿ... ಯಾರು ಗೊತ್ತಾ..?


ಅಂದಹಾಗೆ ನಾವಿಂದು ಮಾತನಾಡುತ್ತಿರುವುದು ಕನ್ನಡ ಬಿಗ್‌ ಬಾಸ್‌ ಬಗ್ಗೆ ಅಲ್ಲ, ಬದಲಾಗಿ ತೆಲುಗು ಬಿಗ್‌ಬಾಸ್‌ ಬಗ್ಗೆ. ಈ ಶೋನಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಸ್ಮೋಕ್‌ ಮಾಡಿರುವ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ,


ಆ ಮಹಿಳಾ ಸ್ಪರ್ಧಿ ಬೇರಾರು ಅಲ್ಲ, ನಟಿ ವಿಷ್ಣುಪ್ರಿಯಾ. ಈ ಹಿಂದೆ ಆಕೆ ಮೇಲೆ ನಾನಾ ದೂರುಗಳು ಕೇಳಿಬಂದಿತ್ತು. ಸರಿಯಾಗಿ ಬಟ್ಟೆ ಹಾಕುವುದಿಲ್ಲ ಎಂದೆಲ್ಲಾ ಮಾತುಗಳು ಕೇಳಿತ್ತು, ಆ ಕಾರಣಕ್ಕೆ ಸಹಸ್ಪರ್ಧಿಯೊಬ್ಬರು ವಿಷ್ಣುಪ್ರಿಯಾರನ್ನು ನಾಮಿನೇಟ್‌ ಕೂಡ ಮಾಡಿದ್ದರು.


ತೆಲುಗು ಬಿಗ್‌ಬಾಸ್‌ನಲ್ಲಿ ಮಂಗಳೂರು ಮೂಲದ ಪೃಥ್ವಿರಾಜ್ ಶೆಟ್ಟಿಯನ್ನು ಪ್ರೀತಿಸುತ್ತಿರುವುದಾಗಿ ವಿಷ್ಣುಪ್ರಿಯಾ ಹೇಳಿದ್ದರು. ಆದರೆ ಆ ಪ್ರೀತಿಗೆ ಪೃಥ್ವಿರಾಜ್ ಒಪ್ಪಿಗೆ ಕೊಟ್ಟಿರಲಿಲ್ಲ. ಜೊತೆಗೆ ಪೃಥ್ವಿರಾಜ್ ಬೇರಾವುದೇ ಮಹಿಳಾ ಸ್ಪರ್ಧಿ ಜೊತೆ ಆತ್ಮೀಯತೆಯಿಂದ ಇದ್ದರೆ ವಿಷ್ಣುಪ್ರಿಯಾಗೆ ಅದನ್ನು ಇಷ್ಟಪಡುತ್ತಿರಲಿಲ್ಲ. ಈ ಕಾರಣಕ್ಕೆ ಅವರು ಸ್ಮೋಕ್‌ ಮಾಡಲು ಹೋಗಿದ್ದಾರೆ.



 


ಇದನ್ನೂ ಓದಿ: ತೀರಿಸಲಾಗದ ಋಣ... ಭಾರತೀಯ ಕ್ರಿಕೆಟ್‌ ಲೋಕಕ್ಕೆ ರತನ್‌ ಟಾಟಾ ಕೊಡುಗೆ ಒಂದಾ... ಎರಡಾ? ಈ ಕ್ರಿಕೆಟಿಗರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೇ ರತನ್‌ ಅವರಿಂದ!!


ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ನೀರಿನಂತೆ ಎಲ್ಲೆಡೆ ಹರಿದಾಡುತ್ತಿದೆ. ತೆಲುಗಿನ ಶೋವೊಂದರಲ್ಲಿ ನಿರೂಪಕಿಯಾಗಿ ಸೈ ಎನಿಸಿಕೊಂಡಿದ್ದ ವಿಷ್ಣುಪ್ರಿಯಾ,  ಮಲಯಾಳಂ ಸಿನಿಮಾವೊಂದರಲ್ಲಿಯೂ ನಟಿಸಿದ್ದಾರೆ. ವಿಷ್ಣುಪ್ರಿಯಾಗೆ ಈಗ 29 ವರ್ಷ ವಯಸ್ಸು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.