Ira Khan engagement : ಅಮೀರ್ ಖಾನ್ ಪುತ್ರಿ ಇರಾ ಖಾನ್ ಅವರ ನಿಶ್ಚಿತಾರ್ಥ ಸಮಾರಂಭ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿದೆ.  ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ಮುಂಬೈನಲ್ಲಿ ಇರಾ ಖಾನ್ ನಿಶ್ಚಿತಾರ್ಥ ನಡೆಯಿತು. ಮುಂಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬದವರು ಭಾಗಿಯಾಗಿದ್ದರು. ಅಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್, ಅಳಿಯ ಇಮ್ರಾನ್ ಖಾನ್ ಹಾಗೂ ನಿರ್ದೇಶಕ ಅಶುತೋಷ್ ಗೌರೀಕರ್ ಹಾಗೂ ಕುಟುಂಬ ಸದಸ್ಯರು, ಸ್ನೇಹಿತರು ಸಹ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಮರೆಯಲಾಗದ ನೆನಪು ಅಪ್ಪು : ಯವರತ್ನನನ್ನು ಅಜ್ಜಿಯೊಬ್ಬರು ಮುದ್ದಾಡಿದ್ದ ವಿಡಿಯೋ ವೈರಲ್‌..!


ಇರಾ ಅವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಚಿತ್ರಗಳಲ್ಲಿ, ಇರಾ ಖಾನ್ ಸುಂದರವಾದ ಕೆಂಪು ಗೌನ್ ಧರಿಸಿರುವುದನ್ನು ಕಾಣಬಹುದು. ಆದರೆ ಆಕೆಯ ಗೆಳೆಯ ನೂಪುರ್ ಶಿಖರೆ ಕಪ್ಪು ಸೂಟ್‌ ಧರಿಸಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಇರಾ ಅವರ ತಂದೆ ಅಮೀರ್ ಖಾನ್, ತಾಯಿ ರೀನಾ ದತ್ತಾ, ಕಿರಣ್ ರಾವ್, ಅಮೀರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಮತ್ತು ಅಜ್ಜಿ ಜೀನತ್ ಹುಸೇನ್ ಭಾಗವಹಿಸಿದ್ದರು. ವೈರಲ್ ಚಿತ್ರಗಳಲ್ಲಿ ಅಮೀರ್ ಖಾನ್ ಎಥ್ನಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಕುರ್ತಾಗೆ ಹೊಂದಿಕೆಯಾಗುವ ಧೋತಿಯನ್ನು ಧರಿಸಿದ್ದಾರೆ.


 


 

 

 

 



 

 

 

 

 

 

 

 

 

 

 

A post shared by yogen shah (@yogenshah_s)


 


ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಾದ ನೂಪುರ್ ಶಿಖರೆ ಅವರು ಕೆಲವು ತಿಂಗಳ ಹಿಂದೆ ಇರಾ ಖಾನ್ ಅವರಿಗೆ ಇಟಲಿಯಲ್ಲಿ ನಡೆದ ತಮ್ಮ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಪ್ರಪೋಸ್ ಮಾಡಿದ್ದರು. ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇರಾ ಖಾನ್ ಅಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ. ಇರಾ ಮತ್ತು ನೂಪುರ್ ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ರಿಲೇಶನ್‌ಶಿಪ್‌ ಬಗೆಗಿನ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ : ಯಶಸ್ಸಿನ ಶಿಖರ ಶೀಘ್ರವೇ ಏರಲು ಆಫೀಸ್ ನಲ್ಲಿ ಈ ಸಸ್ಯಗಳನ್ನು ಇರಿಸಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.