ನನ್ನನ್ನು ನಾಯಿಗೆ ಹೋಲಿಸುತ್ತಿದ್ದಾರೆ..! ಸಲ್ಮಾನ್ ಖಾನ್ ತಂಗಿ ಗಂಡನ ಶಾಕಿಂಗ್ ಹೇಳಿಕೆ ವೈರಲ್
Aayush Sharma Ruslaan movie : ಆಯುಷ್ ಶರ್ಮಾ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಸಹೋದರಿಯ ಗಂಡ. ಸಲ್ಲು ಭಾಯ್ ಸಂಬಂಧಿ ಅಂದ್ಮೇಲೆ ಸಿನಿರಂಗದಲ್ಲಿ ಒಂದು ರೆಂಜ್ ಇದ್ದೇ ಇರುತ್ತೆ. ಅದರೆ, ಆಯುಷ್ ಹೆಚ್ಚಾಗಿ ಟ್ರೋಲ್‌ಗೆ ಗುರಿಯಾಗುತ್ತಿದ್ದು, ಇದೀಗ ಈ ಕುರಿತು ಭಾವುಕರಾಗಿ ಮಾತನಾಡಿದ್ದಾರೆ.
Aayush Sharma : ನಟ ಆಯುಷ್ ಶರ್ಮಾ ಬಿಟೌನ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಅಳಿಯ ಅಂತ ಎಲ್ಲರಿಗೂ ಗೊತ್ತಿದೆ. ಇತ್ತೀಚಿಗೆ ನಟನಾಗಿ ವೃತ್ತಿ ಜೀವನ ಆರಂಭಿಸಿರುವ ಆಯುಷ್ ತಮ್ಮ ಮೇಲೆ ಬಂದಿದ್ದ ಕಾಮೆಂಟ್‌ಗಳನ್ನು ನೆನೆದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಅವರ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹೌದು.. ಆಯುಷ್ ಶರ್ಮಾ ಬಿಟೌನ್ ಭಾಯ್ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಗಂಡ. ಸಲ್ಲು ಭಾಯ್ ಸಂಬಂಧಿ ಅಂದ್ಮೇಲೆ ಸಿನಿರಂಗದಲ್ಲಿ ಒಂದು ರೆಂಜ್ ಇದ್ದೇ ಇರುತ್ತೆ. ಅದರೆ, ಆಯುಷ್ ಹೆಚ್ಚಾಗಿ ಟ್ರೋಲ್‌ಗೆ ಗುರಿಯಾಗುತ್ತಿದ್ದು, ಇದೀಗ ಈ ಕುರಿತು ಭಾವುಕರಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್‌ಗೆ ಮತ ಹಾಕುವಂತೆ ನಟ ರಣವೀರ್ ಮನವಿ..! ವಿಡಿಯೋ ವೈರಲ್, ದೂರು ದಾಖಲು
ಅಸಲಿ ವಿಷಯ ಏನೆಂದರೆ ಆಯುಷ್ ಶರ್ಮಾ ಅಭಿನಯದ ಸಿನಿಮಾ ಲವ್ ಯಾತ್ರಿ 2018 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಅಭಿರಾಜ್ ಮಿನಾವಾಲಾ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದರೂ ದೇವದಾಸು ರಿಮೇಕ್ ಆಗಿದ್ದ ಈ ಸಿನಿಮಾ ಫ್ಲಾಪ್ ಆಯಿತು. ಇದರಿಂದಾಗಿ ಆಯುಷ್ ಅವರನ್ನು ನಾಯಿಗೆ ಹೋಲಿಸಿ ಟ್ರೋಲ್ ಮಾಡಲಾಗಿತ್ತು.
ಈ ಕುರಿತು ಆಯುಷ್ ಶರ್ಮಾ ತಮ್ಮ ಮುಂಬರುವ ರುಸ್ಲಾನ್ ಚಿತ್ರದ ಪ್ರಚಾರದ ವೇಳೆ ಮಾತನಾಡಿ, ನನ್ನ ಮಕ್ಕಳು ನನ್ನ ಬಗ್ಗೆ ಹೆಮ್ಮೆ ಪಡಬೇಕೆಂದು ನಾನು ಬಯಸುತ್ತೇನೆ. ಆದರೆ, ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಸುದ್ದಿಯನ್ನು ಮುಂದೆ ನನ್ನ ಮಕ್ಕಳು ದೊಡ್ಡವರಾದ ಮೇಲೆ ಓದಿದರೆ ಏನಾಗುತ್ತದೆ? ಮಕ್ಕಳು ತಮ್ಮ ತಂದೆಯ ಬಗ್ಗೆ ಒಳ್ಳೆಯದನ್ನು ತಿಳಿದುಕೊಳ್ಳಬೇಕು. ಆದರೆ, ಈಗ ನನ್ನ ಬಗ್ಗೆ ತಪ್ಪು ಮಾತನಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರ ಕಾಮೆಂಟ್‌ಗಳಿಂದಾಗಿಯೇ ನಾನೀಗ ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿ!!
ಸಧ್ಯ ಆಯುಷ್ ನಟನೆಯ ರುಸ್ಲಾನ್ ಸಿನಿಮಾ ಏಪ್ರಿಲ್ 26 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಾಯಕಿ ನಟಿಯಾಗಿ, ಸುಶ್ರಿ ಮಿಶ್ರಾ ಕಾಣಿಸಿಕೊಂಡಿದ್ದು, ಸೌತ್ ಸೂಪರ್ ಸ್ಟಾರ್ ನಟ ಜಗಪತಿ ಬಾಬು ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕರಣ್ ಬುತಾನಿ ಆಕ್ಷನ್ ಕಟ್ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.