Mirza abbas ali : 90 ರ ದಶಕದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಹೆಚ್ಚು ವೈವಿಧ್ಯಮಯ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಮಯ. ತಮಿಳು ಚಿತ್ರರಂಗವು ತನ್ನ ಮುಂದಿನ ಸೂಪರ್‌ಸ್ಟಾರ್‌ಗಾಗಿ ಹುಡುಕುತ್ತಿತ್ತು. ಅರವಿಂದ್ ಸ್ವಾಮಿಯಿಂದ ಹಿಡಿದು ದಳಪತಿ ವಿಜಯ್ ವರೆಗೆ ಅನೇಕ ಯುವ ನಟರು ಟಾಪ್‌ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದರು. ಆದರೆ ಓರ್ವ ನಟ ಮಾತ್ರ ಎಲ್ಲರನ್ನೂ ಮೀರಿ ಬೆಳೆದಿದ್ದರು. 


COMMERCIAL BREAK
SCROLL TO CONTINUE READING

ಯಶಸ್ವಿ ಚಲನಚಿತ್ರಗಳು, ದೊಡ್ಡ ನಿರ್ದೇಶಕರು ಮತ್ತು ದೊಡ್ಡ ಅಭಿಮಾನಿ ಬಳಗವನ್ನು ಈ ನಟ ಹೊಂದಿದ್ದರು. ಆದರೆ ಇಷ್ಟೆಲ್ಲ ಐಷಾರಾಮಿ ಜೀವನ ಹೊಂದಿದ್ದ ಈ ನಟ 30 ವರ್ಷಕ್ಕೆ ಮುಂಚೆಯೇ ದಿವಾಳಿಯಾದರು. ಚಲನಚಿತ್ರಗಳನ್ನು ತೊರೆದರು ಮತ್ತು ಹಣ ಸಂಪಾದಿಸಲು ಟ್ಯಾಕ್ಸಿ ಓಡಿಸಿದರು. ಕೊನೆಗೆ ತುತ್ತು ಅನ್ನ ಗಿಟ್ಟಿಸಿಕೊಳ್ಳಲು ಶೌಚಾಲಯಗಳನ್ನು ಸಹ ಸ್ವಚ್ಛಗೊಳಿಸ ಬೇಕಾಯಿತು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ: ಕಿಂಗ್ ಖಾನ್ 'ಡಂಕಿ' ಟೀಸರ್‌ಗೆ ಮಿಲಿಯನ್ಸ್ ವೀವ್ಸ್ : ಈ ವರ್ಷ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ 


1975 ರಲ್ಲಿ ಜನಿಸಿದ ಅಬ್ಬಾಸ್ ಹದಿಹರೆಯದವರಾಗಿ ಬೆಂಗಳೂರಿನಲ್ಲಿ ಮಾಡೆಲಿಂಗ್ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು. 1996 ರ ಕಾದಲ್ ದೇಶಂ ಚಿತ್ರಕ್ಕೆ ಸಹಿ ಮಾಡಿದರು. ಚಿತ್ರದ ಯಶಸ್ಸು ಅವರನ್ನು ರಾತ್ರೋರಾತ್ರಿ ಟಾಪ್‌ ಹೀರೋ ಆಗಿ ಮಾಡಿತು. ಆದರೆ ಆ ಬಳಿಕ ಅಬ್ಬಾಸ್ ಅವರ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡವು. ಅಬ್ಬಾಸ್ ರಜನಿಕಾಂತ್ ನಟನೆಯ ಸಿನಿಮಾದಲ್ಲಿ ವಿಲನ್‌ ಆಗಿ ಕಾಣಿಸಿಕೊಂಡರು. ಕಮಲ್ ಹಾಸನ್ ಅವರ ಹೇ ರಾಮ್ ನಲ್ಲಿ ಪೋಷಕ ಪಾತ್ರವನ್ನು ಮಾಡಿದರು. 


ಅಬ್ಬಾಸ್ ನಂತರ ಅವರು ಐಶ್ವರ್ಯಾ ರೈ, ಅಜಿತ್ ಮತ್ತು ಟಬು ಅವರೊಂದಿಗೆ ಕೆಲಸ ಮಾಡಿದರು. ಅದು ಅವರ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಿತು. ಅವರು ಮಿನ್ನಲೆ, ಆನಂದಂ, ಮತ್ತು ಪಮ್ಮಲ್ ಕೆ.ಸಂಬಂಧಂ ನಂತಹ ಹಿಟ್‌ ಸಿನಿಮಾಗಳಲ್ಲಿ ಕೆಲಸ ಮಾಡಿದರು.


[[{"fid":"348886","view_mode":"default","fields":{"format":"default","field_file_image_alt_text[und][0][value]":"Mirza abbas ali ","field_file_image_title_text[und][0][value]":"ಮಿರ್ಜಾ ಅಬ್ಬಾಸ್ ಅಲಿ "},"type":"media","field_deltas":{"3":{"format":"default","field_file_image_alt_text[und][0][value]":"Mirza abbas ali ","field_file_image_title_text[und][0][value]":"ಮಿರ್ಜಾ ಅಬ್ಬಾಸ್ ಅಲಿ "}},"link_text":false,"attributes":{"alt":"Mirza abbas ali ","title":"ಮಿರ್ಜಾ ಅಬ್ಬಾಸ್ ಅಲಿ ","class":"media-element file-default","data-delta":"3"}}]]


2002 ರಲ್ಲಿ ವೃತ್ತಿಜೀವನದ ಉನ್ನತ ಮಟ್ಟದಲ್ಲಿ ಇದ್ದರು. ಆದರೆ ನಂತರ ಎಲ್ಲವು ಬದಲಾಯಿತು. 2000 ರ ದಶಕದ ಮಧ್ಯಭಾಗದಲ್ಲಿ, ಅಬ್ಬಾಸ್ ಅವರನ್ನು ತಮಿಳು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ತಳ್ಳಲಾಯಿತು. ಬಿಪಾಶಾ ಬಸು ಜೊತೆಗಿನ ಹಿಂದಿ ಚಿತ್ರವೊಂದು ಕೈ ತಪ್ಪಿತು. 2014 ರ ನಂತರ, ಅವರು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ನಟನೆಯ ಅವಕಾಶ ಕಡಿಮೆ ಆಗುತ್ತಿದ್ದಂತೆ ನ್ಯೂಜಿಲೆಂಡ್‌ಗೆ ತೆರಳಿದರು. 


ಕೆಲವು ವರದಿಗಳ ಪ್ರಕಾರ, ಅವರು ಅಲ್ಲಿ ದಿವಾಳಿಯಾದರು ಎಂದು ಹೇಳಿವೆ. ಅಲ್ಲಿ ಹಣ ಸಂಪಾದಿಸಲು ಮೆಕ್ಯಾನಿಕ್ ಮತ್ತು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಆರಂಭಿಸಿದರಂತೆ. ಇನ್ನೂ ಕೆಲವರ ಪ್ರಕಾರ, ಅವರು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಸಹ ಹಿಂಜರಿಯಲಿಲ್ಲ ಎನ್ನಲಾಗಿದೆ.


ಇದನ್ನೂ ಓದಿ: ಮದುವೆಗೂ ಮುನ್ನ ಭಾವಿ ಸೊಸೆಗೆ ಕಂಡೀಷನ್ ಹಾಕಿದ ತಂಬಿ ರಾಮಯ್ಯ..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.