ಬೆಂಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್(Kichcha Sudeep) ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದುಕೊಂಡಿದ್ದಾರೆ. ಮಂತ್ರಾಲಯ(Mantralayam)ದಲ್ಲಿ ಗುರುವೈಭವೋತ್ಸವ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಕಿಚ್ಚ ಸುದೀಪ್ ರಾಯರ ಬೃಂದಾವನ ದರ್ಶನ ಪಡೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಿಂದ ನಿನ್ನೆ ಸಂಜೆ(ಮಾರ್ಚ್ 4) ಮಂತ್ರಾಲಯಕ್ಕೆ ಆಗಮಿಸಿದ ಸುದೀಪ್ ಶ್ರೀಮಠ(Mantralaya Raghavendra Temple)ಕ್ಕೆ ಭೇಟಿ ನೀಡಿದರು. ಆರಂಭದಲ್ಲಿ ರಾಯರ ಮೂಲ ಬೃಂದಾವನ ದರ್ಶನ ಪಡೆದುಕೊಂಡು ನಂತರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿದರು. ಶ್ರೀಮಠದಲ್ಲಿ ರಾಯರ 401ನೇ ಪಟ್ಟಾಭಿಷೇಕ ಹಾಗೂ 427ನೇ ವರ್ಧಂತಿ ಉತ್ಸವದ ಹಿನ್ನೆಲೆ ಸುದೀಪ್‌ ಅವರಿಗೆ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಇದನ್ನೂ ಓದಿ: ಸಲ್ಮಾನ್​ ಖಾನ್ 'ಟೈಗರ್​ 3' ರಿಲೀಸ್​ ದಿನಾಂಕ ಘೋಷಣೆ.. ಈ ದಿನದಂದು ಬಿಡುಗಡೆಯಾಗಲಿದೆ ಚಿತ್ರ!


ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ(Sri Subudhendra Teertha Swamiji)ಯವರು ಆಶಿರ್ವಚನ ನೀಡಿ ನಟನಿಗೆ ಸನ್ಮಾನಿಸಿದರು. ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನಾಚರಣೆಯನ್ನು ಗುರುವೈಭವೋತ್ಸವವಾಗಿ ಆಚರಿಸಲಾಗಿದೆ. ಗುರುವೈಭವೋತ್ಸವ ಹಿನ್ನೆಲೆ ಮಠದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನೂ ಸನ್ಮಾನಿಸಲಾಯಿತು.


ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ


ಚಿತ್ರರಂಗಕ್ಕೆ ಗಣಿದಣಿ ಪುತ್ರನ ಗ್ರ್ಯಾಂಡ್ ಎಂಟ್ರಿ.. "ಪುನೀತ್ ನನ್ನ ಗುರು" ಎಂದ 'ಕಿರೀಟಿ'!


ಮಠದ ಯೋಗಿಂದ್ರ ಸಭಾ ಭವನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸುದೀಪ್(Sudeep) ಸೇರಿದಂತೆ ಗಣ್ಯರಿಗೆ ಸನ್ಮಾನಿಸಿ, ಪ್ರಶಸ್ತಿ ನೀಡಬೇಕಾಗಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ನಿಗದಿತ ಸ್ಥಳದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ.


ಸದ್ಯ ಕಿಚ್ಚ ಸುದೀಪ್ ‘ವಿಕ್ರಾಂತ್​ ರೋಣ’(Vikrant Rona)ಸಿನಿಮಾದ ಕೊನೆಯ ಹಂತದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಸುದೀಪ್​ ಇಂಗ್ಲಿಷ್ ವರ್ಷನ್​ ಡಬ್ಬಿಂಗ್ ಪೂರ್ಣಗೊಳಿಸಿದ್ದು, ಹಾಲಿವುಡ್ ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಅಡ್ವೆಂಚರ್ ಮತ್ತು ಫ್ಯಾಂಟಿಸಿ ಸಿನಿಮಾ ಇಂಗ್ಲಿಷ್ ಭಾಷೆಯಲ್ಲಿಯೂ ರಿಲೀಸ್ ಆಗುತ್ತಿರುವುದಕ್ಕೆ ಕಿಚ್ಚನ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.