ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅವರ ಬಯೊಗ್ರಪಿ ಬಿಡುಗಡೆ
ಕಿಚ್ಚ ಸುದೀಪ್ ಅವರ ಈ ಬಾರಿಯ ಹುಟ್ಟುಹಬ್ಬ ಹಲವು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ.ಸೆಪ್ಟಂಬರ್ 2ಕ್ಕೆ ಅವರ ಹುಟ್ಟುಹಬ್ಬ ಇದ್ದರೂ ಕೂಡ ಈಗಾಗಲೇ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ನೆಚ್ಚಿನ ನಟನಿಗೆ ಶುಭಕೋರಲು ಈಗಾಗಲೇ ಭರದಿಂದ ಸಿದ್ದತೆಗಳನ್ನು ನಡೆಸಿದ್ದಾರೆ.
ಬೆಂಗಳೂರು: ಕಿಚ್ಚ ಸುದೀಪ್ ಅವರ ಈ ಬಾರಿಯ ಹುಟ್ಟುಹಬ್ಬ ಹಲವು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ.ಸೆಪ್ಟಂಬರ್ 2ಕ್ಕೆ ಅವರ ಹುಟ್ಟುಹಬ್ಬ ಇದ್ದರೂ ಕೂಡ ಈಗಾಗಲೇ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ನೆಚ್ಚಿನ ನಟನಿಗೆ ಶುಭಕೋರಲು ಈಗಾಗಲೇ ಭರದಿಂದ ಸಿದ್ದತೆಗಳನ್ನು ನಡೆಸಿದ್ದಾರೆ.
ಈ ಬಾರಿಯ ಸುದೀಪ್ ಅವರ ಹುಟ್ಟುಹಬ್ಬದ ವಿಶೇಷತೆ ಏನಪ್ಪಾ ಅಂದರೆ ಹಿರಿಯ ಸಿನಿಮಾ ಪತ್ರಕರ್ತರಾದ ಶರಣು ಹುಲ್ಲೂರ್ ಅವರು ನೆಚ್ಚಿನ ಕನ್ನಡ ನಟ ಸಾಮ್ರಾಟ್ ನಿಗೆ ಬಯೋಗ್ರಪಿ ಮೂಲಕ ವಿಶೇಷ ಉಡುಗೊರೆಯನ್ನು ನೀಡುತ್ತಿದ್ದಾರೆ. ಹೌದು ಸುದೀಪ್ ಅವರ ಜೀವನ ಚಿತ್ರಣದ ಕುರಿತಾದ ಪುಸ್ತಕವು ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ.ಈ ಹಿನ್ನಲೆಯಲ್ಲಿ ಈ ಹುಟ್ಟುಹಬ್ಬ ಹಲವು ರೀತಿಯಲ್ಲಿ ಸ್ಮರಣೀಯವಾಗಲಿದೆ.ಇನ್ನೊಂದೆಡೆಗೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಟ್ವೀಟ್ ಮಾಡಿ ಸುದೀಪ್ ಹುಟ್ಟುಹಬ್ಬಕ್ಕಾಗಿ ವಿಶೇಷ ಡಿಪಿಯೊಂದನ್ನು ತಮ್ಮ ಟ್ವೀಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಮನೋಜ್ಞ ಅಭಿನಯದ ಮೂಲಕ ಕೇವಲ ದಕ್ಷಿಣ ಭಾರತ ಮಾತ್ರವಲ್ಲ ಇಡೀ ಭಾರತ ಚಿತ್ರರಂಗದಾದ್ಯಂತ ಚಿರಪರಿಚಿತರಾಗಿರುವ ಸುದೀಪ್ ಇತ್ತೀಚಿಗಷ್ಟೇ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಎದುರು ದಬಾಂಗ್ ಸರಣಿ ಚಿತ್ರದಲ್ಲಿ ನಟಿಸಿ ದೇಶದ ಗಮನ ಸೆಳೆದಿದ್ದರು.ಅದಕ್ಕೂ ಮೊದಲು ಅವರು ಚಿರಂಜೀವಿ ಜೊತೆಗೆ ಸೈರಾ ನರಸಿಂಹ ರೆಡ್ಡಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ಸುದೀಪ್ ಅವರ ಎರಡು ಚಿತ್ರಗಳು ದೇಶಾದ್ಯಂತ ಸಾಕಷ್ಟು ಹವಾ ಸೃಷ್ಟಿಸಿವೆ.ಅದರಲ್ಲಿ ಪ್ಯಾಂಟಸಿ ಲೋಕದ ಚಕ್ರವರ್ತಿಯಂತೆ ಕಾಣಿಸಿಕೊಂಡಿರುವ ಫ್ಯಾಂಟಮ್ ಚಿತ್ರದ ಪೋಸ್ಟರ್ ಈಗಾಗಲೇ ಅಭಿಮಾನಿಗಳಿಗೆ ಸಾಕಷ್ಟು ಕೂತುಹಲ ಸೃಷ್ಟಿಸಿದೆ.ಇನ್ನೊಂದೆಡೆ ಕೋಟಿಗೊಬ್ಬ-3 ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ.ಇನ್ನೊಂದು ವಿಶೇಷವೆಂದರೆ ಈ ಸಿನಿಮಾಗಳು ಈಗ ಬಹುಭಾಷೆಯಲ್ಲಿ ಸಿದ್ದವಾಗುತ್ತಿರುವುದು ನಿಜಕ್ಕೂ ಕನ್ನಡ ಸಿನಿಮಾವನ್ನು ಇನ್ನು ಎತ್ತರಕ್ಕೆ ಒಯ್ಯುತ್ತವೆ.
ಫ್ಯಾಂಟಮ್ ಚಿತ್ರ ಅನುಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಸುದೀಪ್ ಅವರ ಆಪ್ತ ಸಹಾಯಕ ಮಂಜುನಾಥ್ ಗೌಡ ಈ ಚಿತ್ರವನ್ನು ತಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.ಸದ್ಯ ಈ ಚಿತ್ರ ಹೈದರಾಬಾದ್ ನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ.