Abishek Ambareesh : ಡಿ. 11ಕ್ಕೆ ಯಂಗ್ ರೆಬಲ್ ಸ್ಟಾರ್ ಎಂಗೇಜ್‌ಮೆಂಟ್! ಇವರೇ ನೋಡಿ ಅಂಬಿ ಸೊಸೆ!
Abhishek Ambareesh Engagement : ಡಿಸೆಂಬರ್ 11 ರಂದು ಅಂಬರೀಷ್ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್ ಅವರ ನಿಶ್ಚಿತಾರ್ಥ ಪ್ರಸಾದ್ ಬಿಡಪ ಹಾಗೂ ಜುಡಿತ್ ಅವರ ಪುತ್ರಿ ಅವಿವ ಜತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಎಂಗೇಜ್‌ಮೆಂಟ್ ವದಂತಿಗಳು ಎಲ್ಲೆಡೆ ಹರಿದಾಡುತ್ತಿವೆ.
Abhishek Ambareesh and Aviva Bidapa Engagement : ಮದುವೆ ಸೀಸನ್ ಶುರುವಾಗಿದೆ. ಎಲ್ಲೆಲ್ಲೂ ವಿವಾಹ ಸಮಾರಂಭಗಳು ನಡೆಯುತ್ತಿವೆ. ಸ್ಯಾಂಡಲ್‌ವುಡ್‌ನ ಎಲಿಜೆಬಲ್ ಬ್ಯಾಚುಲರ್‌ಗಳ ಮದುವೆ ಬಗ್ಗೆಯೂ ಗುಸುಪಿಸು ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ನಿಶ್ಚಿತಾರ್ಥದ ವಿಚಾರ ಜೋರಾಗಿ ಸದ್ದು ಮಾಡ್ತಿದೆ. ಅಂಬಿ ಪುತ್ರನ ಕೈ ಹಿಡಿಯಲಿದ್ದಾರೆ ಎನ್ನಲಾದ ಮಾಡೆಲ್ ಒಬ್ಬರ ಫೋಟೋಗಳು ಸಹ ಎಲ್ಲೆಡೆ ವೈರಲ್ ಆಗಿದೆ. ಡಿಸೆಂಬರ್‌ನಲ್ಲಿ ಅಭಿಷೇಕ್ ಅಂಬರೀಷ್ ಎಂಗೇಜ್‌ಮೆಂಟ್ ನಡೆಯಲಿದೆ ಎನ್ನಲಾಗುತ್ತಿತ್ತು. ಇದೀಗ ನಿಶ್ಚಿತಾರ್ಥದ ಡೇಟ್ ಕೂಡ ಎಲ್ಲೆಡೆ ಹರಿದಾಡುತ್ತಿದೆ.
ಇದನ್ನೂ ಓದಿ : Tagaru Palya : ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ
ಡಿಸೆಂಬರ್ 11 ರಂದು ಅಂಬರೀಷ್ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್ ಅವರ ನಿಶ್ಚಿತಾರ್ಥ ಪ್ರಸಾದ್ ಬಿಡಪ ಹಾಗೂ ಜುಡಿತ್ ಅವರ ಪುತ್ರಿ ಅವಿವ ಜತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಎಂಗೇಜ್‌ಮೆಂಟ್ ವದಂತಿಗಳು ಎಲ್ಲೆಡೆ ಹರಿದಾಡುತ್ತಿವೆ. ಆದರೆ ಇತ್ತೀಚೆಗೆ ಈ ಸುದ್ದಿಗಳೆಲ್ಲ ಸುಳ್ಳು ಎಂದು ಸುಮಲತಾ ಅಂಬರೀಷ್ ಇತ್ತೀಚೆಗೆ ಹೇಳಿದ್ದರು. ಅಭಿಷೇಕ್ ಅಂಬರೀಷ್ ಕೂಡ ಎಂಗೇಜ್‌ಮೆಂಟ್ ವಿಚಾರವನ್ನು ಅಲ್ಲಗಳೆದಿದ್ದರು.
ಆದರೆ ಅಂಬರೀಶ್ ಕುಟುಂಬದ ಆಪ್ತರ ಪ್ರಕಾರ, ಡಿಸೆಂಬರ್ 11 ರಂದು ಅಂಬರೀಷ್ ನಿಶ್ಚಿತಾರ್ಥ ನಡೆಯಲಿದೆ. ಇದಕ್ಕಾಗಿ ಹಾಲ್ ಕೂಡ ಬುಕ್ ಆಗಿದೆಯಂತೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಜತೆ ಅಭಿಷೇಕ್ ಎಂಗೇಜ್ ಆಗಲಿದ್ದಾರಂತೆ. ಅವಿವ ಬಹು ಬೇಡಿಕೆಯ ಫ್ಯಾಷನ್ ಡಿಸೈನರ್ ಆಗಿದ್ದು ಜೊತೆಗೆ ಮಾಡೆಲಿಂಗ್ ಕೂಡ ಮಾಡುತ್ತಾರೆ. ವಿಧ ವಿಧ ಡಿಸೈನರ್ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳುವ ಅವಿವ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 44 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ : Abhishek Ambareesh: ಅಭಿಷೇಕ್ ಅಂಬರೀಷ್ ಎಂಗೇಜ್ ಆಗ್ತಿದ್ದಾರೆ ಎನ್ನಲಾದ ಬೆಡಗಿ ಇವರೇ ನೋಡಿ!
ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಹುದಿನಗಳಿಂದ ಸ್ನೇಹಿತರಾಗಿದ್ದರಂತೆ. ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ. ಇದಕ್ಕೆ ಇಬ್ಬರ ಕುಟುಂಬದವರು ಸಹ ಒಪ್ಪಿಕೊಂಡಿದ್ದಾರಂತೆ. ಹೀಗಾಗಿ ಇದೇ ಡಿಸೆಂಬರ್ 11 ರಂದು ಅಭಿಷೇಕ್ ಮತ್ತು ಅವಿವ ನಿಶ್ಚಿತಾರ್ಥ ನಡೆಯಲಿದೆಯಂತೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ಆರಂಭವಾಗಿವೆಯಂತೆ. ಹೀಗೆ ಅಭಿಷೇಕ್ ನಿಶ್ಚಿತಾರ್ಥದ ಬಗ್ಗೆ ಗಾಸಿಪ್ ಒಂದು ಚಂದನವನದಲ್ಲಿ ಹರಿದಾಡುತ್ತಿದೆ. ಆದರೆ ಇಬ್ಬರ ನಿಶ್ಚಿತಾರ್ಥದ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.