ಅಭಿ ಕೈ ಮೇಲೆ ಮೂಡಿತು ತುತ್ತು ಕೊಟ್ಟವಳ, ಮುತ್ತು ಕೊಡುವವಳ ಹೆಸರು; ಜೂ. ರೆಬೆಲ್ ಮದುವೆ ಸಂಭ್ರಮ
Abhishek Aviva Wedding : ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಅವರ ಮದುವೆಗೆ ಕೇವಲ ಇನ್ನು ಎರಡು ದಿನಗಳು ಮಾತ್ರ. ಜೂನ್ 5ರಂದು ನೆರವೇರಲಿರುವ ಈ ಜೋಡಿಯ ವಿವಾಹಕ್ಕೆ ತಯಾರಿ ಭರ್ಜರಿಯಾಗಿದೆ. ಈ ನಡುವೆ ಈ ಸಂಭ್ರಮದಲ್ಲಿ ಅನೇಕ ಸಿನಿತಾರೆಯರು ಭಾಗಿಯಾಗಿದ್ದಾರೆ.
Sandalwood : ಸ್ಯಾಂಡಲ್‌ವುಡ್‌ನ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಮದುವೆ ಪೂರ್ವ ಕಾರ್ಯಗಳಿಗೆ ಈಗಾಗಲೇ ಅದ್ದೂರಿಯಾಗಿ ಚಾಲನೆ ದೊರಕಿದೆ. ಅರಿಶಿಣ ಶಾಸ್ತ್ರ, ಮದರಂಗಿ ಶಾಸ್ತ್ರವನ್ನು ನೆರವೇರಿಸಲಾಗಿದೆ.
ಮದರಂಗಿ ಶಾಸ್ತ್ರದ ವೇಳೆ ಅಭಿಷೇಕ್ ಕೈ ಮೇಲೆ ಅಮ್ಮ ಸುಮಲತಾ ಹಾಗೂ ಭಾವಿ ಪತ್ನಿ ಅವಿವಾ ಹೆಸರು ಬರೆಸಿಕೊಂಡಿದ್ದಾರೆ. ತುತ್ತು ಕೊಟ್ಟ ಅಮ್ಮ ಹಾಗೂ ಮುತ್ತು ಕೊಡುವ ಮಡದಿಯ ಹೆಸರಿನ ಜೊತಗೆ ಮಂಡ್ಯ ಎಂದು ಬರೆಸಿಕೊಂಡು ಅಭಿಮಾನ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ತಮ್ಮ ತಂದೆಯ ನೆನಪಿಗೆ ರೆಬೆಲ್ ಎಂದು ಬರೆಸಿಕೊಂಡಿದ್ದಾರೆ.
ಇದನ್ನೂ ಓದಿ-Ileana D’Cruz: ಗರ್ಭಿಣಿ ಇಲಿಯಾನಾ ಎಂಗೇಜ್ಮೆಂಟ್ ಆಗಿದ್ದು ಯಾರ ಜೊತೆ!? ಫೋಟೋದಲ್ಲಿರೋದು ಮಗುವಿನ ತಂದೆನಾ?
ಸೋಷಿಯಲ್ ಮಿಡಿಯಾದಲ್ಲಿ ಅಭಿಷೇಕ್ ಮದುವೆ ತಯಾರಿಯ ಕೆಲವು ಪೋಟೋಗಳು ಸಖತ್ ವೈರಲ್ ಆಗುತ್ತಿವೆ. ಈಗಾಗಲೇ ಅರಿಶಿಣ ಶಾಸ್ತ್ರ ಮುಗಿದಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಹೂವು ಹಸಿರು ತೋರಣ ಮದುವೆ ಚಪ್ಪರ ಹಾಕಲಾಗಿದ್ದು, ಜೂನ್ 4 ರಂದು ಚಪ್ಪರ ಪೂಜೆ ನೆರವೇರಲಿದೆ.
ನಟಿಯರಾದ ಪ್ರಿಯಾಂಕಾ ಉಪೇಂದ್ರ, ಮೇಘನಾ ರಾಜ್ ಸರ್ಜಾ, ಸೇರಿ ಹಲವು ನಟ ನಟಿಯರು ಸಂಭ್ರಮದಲ್ಲಿ ಪಾಲ್ಗೊಂಡ ಪೋಟೋಗಳು ಔಐರಲ್ ಆಗುತ್ತಿವೆ. ಜೂನ್ 5ರಂದು ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅಭಿಷೇಕ್ ಮತ್ತು ಅವಿವಾ ಜೋಡಿ ಸಪ್ತಪಡಿ ತುಳಿಯಲಿದೆ. ಜೂನ್ 7ರಂದು ಪ್ಯಾಲೇಸ್ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟದ ಕಾರ್ಯಕ್ರಮವೂ ಜರುಗಲಿದೆ.
ಇದನ್ನೂ ಓದಿ-PS 2 OTT Release: ಒಟಿಟಿಯಲ್ಲಿ ಪೊನ್ನಿಯಿನ್ ಸೆಲ್ವನ್ 2 ರಿಲೀಸ್.. ಎಲ್ಲಿ ವೀಕ್ಷಿಸಬೇಕು ಇಲ್ಲಿ ತಿಳಿಯಿರಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.