ಬೆಂಗಳೂರು: ಕೋಟಿ ಕೋಟಿ ಕನ್ನಡಿಗರ ಪಾಲಿನ ಪ್ರೀತಿಯ ರೆಬೆಲ್‌ಸ್ಟಾರ್‌ ಹಾಗೂ ಕಾವೇರಿ ಹೋರಾಟದ ಕಿಚ್ಚಿಗೆ ಸದಾ ಎದೆಯೊಡ್ಡಿ ನಿಲ್ಲುತ್ತಿ‌ದ್ದ ದಿವಂಗತ ಅಂಬರೀಶ್‌ ಅವರ ಪುತ್ರನ ಮತ್ತೊಂದು ಸಿನಿಮಾ ಘೋಷಣೆಯಾಗಿದೆ.ಈಗಾಗಲೇ ಹಲವು ಪ್ರಾಜೆಕ್ಟ್‌ಗಳು ಅಭಿಷೇಕ್‌ ಕೈಯಲ್ಲಿದ್ದು, ಈಗ 4ನೇ ಸಿನಿಮಾ ಪೋಸ್ಟರ್‌ ಅನ್ನು ರಿಲೀಸ್‌ ಮಾಡಲಾಗಿದೆ. ಸಾವಿರ ವರ್ಷದ ಹಿಂದಿನ ಕಥೆ ಇದಾಗಿರಲಿದೆ ಎಂಬ ಕುತೂಹಲಕಾರಿ ಮಾಹಿತಿ ಕೂಡ ರಿವೀಲ್‌ ಆಗಿದೆ. ಸಿನಿಮಾ ಪೋಸ್ಟರ್‌ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಇವತ್ತು ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.ಈ ಸಂಭ್ರಮದಲ್ಲೇ ಮತ್ತೊಂದು ಗಿಫ್ಟ್‌ ಕನ್ನಡ ಸಿನಿಪ್ರಿಯರಿಗೆ ಸಿಕ್ಕಿದೆ.ಸಿಕ್ಕಾಪಟ್ಟೆ ಕುತೂಹಲ ಕೆರಳಿಸುತ್ತಿರುವ ಹೊಸ ಸಿನಿಮಾ ಪೋಸ್ಟರ್‌, ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಪೋಸ್ಟರ್‌ ನೋಡಿದ ಪ್ರತಿಯೊಬ್ಬರು ಹುಬ್ಬೇರಿಸಿದ್ದು, ಕಥೆ ಕೂಡ ಇದಕ್ಕೆ ತಕ್ಕಂತೆ ಇರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.


ಇದನ್ನೂ ಓದಿ: ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!


ರಾಕ್‌ಲೈನ್ ಸಾಥ್‌


ಟಿ.ಕೆ.ದಯಾನಂದ್‌‌ ಈ ಸಿನಿಮಾಗೆ ಸ್ಟೋರಿ ಬರೆದಿದ್ದಾರೆ. ಈ ಹಿಂದೆ 'ಬೆಲ್‌ಬಾಟಂ' ರೀತಿ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಕ್ಕೆ ಕಥೆ ಬರೆಯುವ ಮೂಲಕ ಮೆಚ್ಚುಗೆಯನ್ನು ಗಳಿಸಿದ್ದರು.ಆದರೆ ಈ ಬಾರಿ 1 ಸಾವಿರ ವರ್ಷದ ಹಿಂದಿನ ಕಥೆಯನ್ನು ಹೆಣೆದಿದ್ದಾರಂತೆ. ಜೊತೆಯಲ್ಲಿ ಅಭಿಶೇಕ್‌ ಅಂಬರೀಶ್ ಅವರ 4ನೇ ಸಿನಿಮಾಗೆ ಡೈಲಾಗ್‌ ಕೂಡ ಬರೆದಿದ್ದಾರೆ. ಸಹಜವಾಗಿಯೇ ಇದು ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಒಂದೊಳ್ಳೆ ತಂಡದ ಜೊತೆಗೆ ಅಭಿಶೇಕ್‌ 4ನೇ ಸಿನಿ ಪಯಣ ಆರಂಭವಾಗಿದೆ.


ಇದನ್ನೂ ಓದಿ : ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!


ದಿವಂಗತ ಅಂಬರೀಶ್​ ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಇಂದು ಅಭಿಷೇಕ್ 4ನೇ ಚಿತ್ರದ ಮುಹೂರ್ತ ನೆರವೇರಿತು. ವಾರಿಯರ್​ ಲುಕ್, ರಗಡ್‌ ಕಾಸ್ಟ್ಯೂಮ್‌ನಲ್ಲಿ ​ಕಾಣಿಸಿಕೊಂಡಿರೋ ಅಭಿಷೇಕ್ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅಯೋಗ್ಯ & ಮದಗಜ ಸಿನಿಮಾಗೆ ಡೈರೆಕ್ಷನ್‌ ಮಾಡಿದ್ದ ಮಹೇಶ್​ ಕುಮಾರ್ ಈ ಚಿತ್ರಕ್ಕು ಕೂಡ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಸಧ್ಯದಲ್ಲೇ ಸಿನಿಮಾ ಶೂಟಿಂಗ್‌ ಆರಂಭಿಸುವ ಪ್ಲ್ಯಾನ್‌ ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.