ಬೆಂಗಳೂರು: ಸ್ಯಾಂಡಲ್ವುಡ್‌ ರೆಬಲ್‌ ಸ್ಟಾರ್‌ ಅಂಬರೀಷ್ ಹಾಗೂ ಸುಮಲತಾ ಮುದ್ದಿನ ಮಗ ಯಂಗ್‌ ರೆಬಲ್‌ ಸ್ಟಾರ್‌ ಅಭಿಷೇಕ್ ಅಂಬರೀಷ್ ಮದುವೆ ಆಮಂತ್ರಣ ಎಲ್ಲಡೆ ಹಂಚಿಕೆಯಾಗಿ, ದಿನಾಂಕವೂ ನಿಗದಿಯಾಗಿದೆ.


COMMERCIAL BREAK
SCROLL TO CONTINUE READING

ಜೂನ್ 5 ರಂದು ನಡೆಯಲಿರುವ ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿದ್ದಪ್ಪ ವಿವಾಹಕ್ಕೆ ಕ್ಷಣಗಣನೇ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ನಿವಾಸದಲ್ಲಿ ಅದ್ದೂರಿ ಮದುವೆ ಸಂಭ್ರಮ ಜೋರು ನಡೆಯುತ್ತಿದೆ.


ಇದನ್ನೂ ಓದಿ: Actress Leelavati: ಹಿರಿಯ ನಟಿ ಲೀಲಾವತಿ ನಟನೆ ಅನುಕರಣೆ ಮಾಡಿದ ನಟ ಶ್ರೀಧರ್ !


ಮದುವೆಗೆ ಎರಡು ದಿನ ಬಾಕಿರುವ ಹಿನ್ನಲೆ ಈಗಾಗಲೇ ತಮ್ಮ ನಿವಾಸದಲ್ಲಿ ಅರಿಶಿನ ಶಾಸ್ರಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಹಾಗೆಯೇ ಮದುವೆಗೆ ಮುಂಚಿತವಾಗಿ ಅರಿಶಿನ ಶಾಸ್ತ್ರ ಮಾಡುವುದರಿಂದ ಇಂದು ಅಂಬಿ ಮನೆತುಂಬಾ ಅರಿಶಿನ ಶಾಸ್ತ್ರದ ಕಲರವ ತುಂಬಿದೆ. ಅದರ ಜೊತೆಯಲ್ಲಿ ಯಂಗ್‌ ರೆಬಲ್‌ ಸ್ಟಾರ್‌, ಮದುಮಗ  ಅಭಿಷೇಕ್ ಅರಶಿನ ಶಾಸ್ತ್ರಕ್ಕೆ ಸಜ್ಜಾಗಿದ್ದಾರೆ.


ಇದನ್ನೂ ಓದಿ: Singer Nisha Upadhyaya: ಲೈವ್​ ಶೋ ವೇಳೆ ಖ್ಯಾತ ಗಾಯಕಿ ಮೇಲೆ ಗುಂಡೇಟು!


ಸದ್ಯ ಇನ್ನು ಅಭಿ ಹಾಗೂ ಅವಿವ ಜೂನ್ 5 ರಂದು ಅದ್ದೂರಿಯಾಗಿ  ಹಸೆಮಣೆ ಏರಲಿದ್ದಾರೆ. ಈ ನವ ಜೋಡಿಗಳು   ಕಳೆದ ವರ್ಷ ಡಿಸೆಂಬರ್ 11ರಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ  ಕುಟುಂಬಸ್ಥರು, ಆಪ್ತರು ಹಾಗೂ ಕೆಲ ಗಣ್ಯರ ಸಮ್ಮುಖದಲ್ಲಿ  ಅದ್ದೂರಿ ನಿಶ್ಚಿತಾರ್ಥ ನೆರವೇರಿತು. 29ರಂದು ಅಂಬರೀಷ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಮಾಧಿ ಬಳಿ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ್ದರು.


ಸದ್ಯ ಅಂಬಿ ಮನೆಯಲ್ಲಿ ಅರಶಿನ ಶಾಸ್ತ್ರಕ್ಕೆ ಬೇಕಾದ ಡೆಕೊರೇಷನ್​ಗಳು, ಶಾಸ್ತ್ರಕ್ಕೆ ಅಗತ್ಯವಾದ ವಸ್ತುಗಳಿಂದ ಮನೆ ಕಂಗೊಳಿಸುತ್ತಿದೆ. ಸದ್ಯ ಇನ್ನು ಅಭಿಷೇಕ್ ಅಂಬರೀಷ್ ಹಾಗೂ ಅವಿವ ಜೋಡಿಗಳು ಹಸೆಮಣೆ ಏರುವುದೊಂದೇ ಬಾಕಿ ಇದೆ.  https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.