ನೆಚ್ಚಿನ ಮಡದಿ ಐಶ್ವರ್ಯಾ ರೈ ಹುಟ್ಟುಹಬ್ಬಕ್ಕೆ ಅಭಿಷೇಕ್ ಬಚ್ಚನ್ ವಿಶ್ ಮಾಡಿದ್ದು ಹೀಗೆ..!
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು, ಪತಿ ಅಭಿಷೇಕ್ ಬಚ್ಚನ್ ತನ್ನ ಹೆಂಡತಿಗೆ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು, ಪತಿ ಅಭಿಷೇಕ್ ಬಚ್ಚನ್ ತನ್ನ ಹೆಂಡತಿಗೆ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ಅವರ ಚಿತ್ರವನ್ನು ಹಂಚಿಕೊಂಡ ಅಭಿಷೇಕ್, "ಜನ್ಮದಿನದ ಶುಭಾಶಯಗಳು ಪ್ರಿನ್ಸಿಪೆಸ್ಸಾ !!!" ಎಂದು ಬರೆದಿದ್ದಾರೆ.
ಈ ವರ್ಷ ಐಶ್ ತಮ್ಮ ಹುಟ್ಟುಹಬ್ಬವನ್ನು ಪತಿ ಅಭಿಷೇಕ್ ಜೊತೆ ರೋಮ್ನಲ್ಲಿ ಆಚರಿಸಲಿದ್ದಾರೆ. ವರದಿಗಳ ಪ್ರಕಾರ, ಅವರು ವಾರ ಪೂರ್ತಿ ರಜಾದಿನವನ್ನು ಯೋಜಿಸಿದ್ದರು, ವಿಶೇಷವಾಗಿ ಅವರ ಹೆಂಡತಿಯ ಜನ್ಮದಿನದಂದು.
ಅಭಿ ಮತ್ತು ಐಶ್ ಅವರು ಕುಚ್ ನಾ ಕಹೋ ಮತ್ತು ಗುರು ಚಿತ್ರಗಳಲ್ಲಿ ಪರದೆ ಹಂಚಿಕೊಂಡಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಅವರು ಏಪ್ರಿಲ್ 20, 2007 ರಂದು ಮುಂಬೈನಲ್ಲಿ ವಿವಾಹವಾದರು. ಅವರ ವಿವಾಹದಲ್ಲಿ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.