Bad Manners Trailer Launch By Darshan: ನಿರ್ದೇಶಕ ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ನಲ್ಲಿ ಬರ್ತಿರೋ 'ಬ್ಯಾಡ್ ಮ್ಯಾನರ್ಸ್‌' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದ್ದು, ಸುಕ್ಕಾ ಸೂರಿ ರಾ ಆಕ್ಷನ್ ಥ್ರಿಲ್ಲರ್ ನೋಡೊಕೆ ಒಂದು ವರ್ಗದ ಪ್ರೇಕ್ಷಕರಂತೂ ತುದಿಗಾಗಲಲ್ಲಿ ನಿಂತಿದ್ದಾರೆ. 3 ವರ್ಷಗಳ ಬಳಿಕ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.ಈ ಚಿತ್ರದಲ್ಲಿ ಅಭಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದ್ದು, ಇದೇ ಭಾನುವಾರ ಸಿನಿಮಾ ಟ್ರೈಲರ್ ಲಾಂಚ್ ಪ್ಲ್ಯಾನ್ ನಡೀತಿದೆ. 


COMMERCIAL BREAK
SCROLL TO CONTINUE READING

ಇದೇ ನವೆಂಬರ್ 12ರಂದು ದೀಪಾವಳಿಯ ದಿನ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದು, ಅಭಿಶೇಕ್ ತಾಯಿ ಸಮಲತಾ ಅಂಬರೀಶ್ ಕೂಡ ಸಮಾರಂಭದಲ್ಲಿ ಪಾಲುಗೊಳ್ಳಲಿದ್ದಾರೆ. ಈಗಾಗಲೇ ಯೂಟ್ಯೂಬ್‌ ಚಾನಲ್‌ಗಳಿಗೆ ಸೂರಿ, ಅಭಿ ಸಂದರ್ಶನ ನೀಡುತ್ತಿದ್ದು, ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಟ್ರೈಲರ್ ಬಿಡುಗಡೆ ಮಾಡಿ 'ಬ್ಯಾಡ್ ಮ್ಯಾನರ್ಸ್' ಪ್ರಮೋಷನ್‌ಗೆ ದೊಡ್ಡಮಟ್ಟದಲ್ಲಿ ಕಿಕ್‌ ಸ್ಟಾರ್ಟ್‌ ಕೊಡಲಿದ್ದಾರೆ. 


ಇದನ್ನು ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಾಯಕ ವಾಸುಕಿ ವೈಭವ್! ಮದುವೆ ಆಗ್ತಿರೋ ಹುಡುಗಿ ಯಾರು ಗೊತ್ತಾ?


ಜೂನಿಯರ್‌ ರೆಬಲ್‌ ಸ್ಟಾರ್‌ ʼಅಮರ್' ಸಿನಿಮಾ ಮೂಲಕ ಹಿರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಆದರೆ ಈ ಚಿತ್ರ ದೊಡ್ಡಮಟ್ಟದಲ್ಲಿ ಹಿಟ್ ಆಗಲಿಲ್ಲ. ಇದೀಗ 'ಮ್ಯಾಡ್ ಮ್ಯಾನರ್ಸ್' ಚಿತ್ರದಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಲೇಟ್ ಆದರೂ ಲೇಟೆಸ್ಟ್ ಆಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಇವತ್ತಿನ ಪಾತಕ ಲೋಕದ ಕತೆಯನ್ನು ಸೂರಿ ಚಿತ್ರದಲ್ಲಿ ಕಟ್ಟಿಕೊಟ್ಟಿರುವಂತೆ ಕಾಣುತ್ತಿದ್ದು, ಡ್ರಗ್ಸ್ ಮಾಫಿಯಾ ಘಾಟು ಚಿತ್ರದಲ್ಲಿದೆ ಎನ್ನಲಾಗ್ತಿದೆ.


ನಟ ಅಭಿಶೇಕ್‌ ಅಂಬರೀಶ್‌ ದಯೆ ಇಲ್ಲದ ಖಡಕ್ ಪೊಲೀಸ್ ಆಫೀಸರ್ ರುದ್ರ ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಸಣ್ಣ ಸಣ್ಣ ಡೈಲಾಗ್ ಪ್ರೋಮೊಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದ ಸೆನ್ಸಾರ್ ಕೂಡ ಕಂಪ್ಲೀಟ್ ಆಗಿದ್ದು ಬಹಳ ವೈಲೆಂಟ್ ಆಗಿರುವ ಒಂದಷ್ಟು ಸನ್ನಿವೇಶಗಳಿಗೆ ಸೆನ್ಸಾರ್ ಕಟ್ ಹೇಳಿ ಯು/ಎ ಸರ್ಟಿಫಿಕೇಟ್ ನೀಡಿದೆ.ಜಯಣ್ಣ ಕಂಬೈನ್ಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದು,'ಮ್ಯಾಡ್ ಮ್ಯಾನರ್ಸ್' ಸಿನಿಮಾ ರನ್‌ಟೈಮ್ 2 ಗಂಟೆ 10 ನಿಮಿಷ 34 ಸೆಕೆಂಡ್ ಅನ್ನೋದು ಗೊತ್ತಾಗುತ್ತಿದೆ. ಚಿಕ್ಕದಾಗಿ ಚೊಕ್ಕದಾಗಿ ಸೂರಿ ಸಿನಿಮಾ ಕಟ್ಟಿಕೊಟ್ಟಿರುವಂತೆ ಕಾಣುತ್ತಿದ್ದು, ಈ ಚಿತ್ರ ಇದೇ ನವೆಂಬರ್‌ 24ರಂದು ತೆರೆಕಾಣಲಿದೆ.



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ