ಅಭಿಷೇಕ್ ಶೆಟ್ಟಿ‌ ನಟನೆ ಜೊತೆಗೆ  ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ನಮ್ ಗಣಿ ಬಿ.ಕಾಂ‌ ಪಾಸ್ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟವರು. ಮೊದಲ ಚಿತ್ರದಲ್ಲಿಯೇ ಗಮನಸೆಳೆದ ಅವರು ಆ ನಂತರ ಗಜಾನನ ಅಂಡ್ ಗ್ಯಾಂಗ್ ಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡರು. ಅನೀಶ್ ಗೆ  ಆರಾಮ್ ಅರವಿಂದ್ ಸ್ವಾಮಿ ಅಂತೇಳಿ ಕುಣಿಸಿರುವ ಅಭಿಷೇಕ್ ಶೆಟ್ಟಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರು ಅಭಿಷೇಕ್ ಶೆಟ್ಟಿ, ಈಗ ಹೊಸ ಚಿತ್ರ ಘೋಷಿಸಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ವಿಶೇಷ ಎಂದರೆ ಅಭಿಷೇಕ್ ಶೆಟ್ಟಿ ನಮ್ ಗಣಿ ಬಿ.ಕಾಂ ಪಾಸ್ ಸೀಕ್ವೆಲ್ ಗೆ ಮುನ್ನುಡಿ ಬರೆದಿದ್ದು, ಫಸ್ಟ್ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಸೂಟ್ ಬೂಟ್ ತೊಟ್ಟು, ಕೈಯಲ್ಲಿ ಕಾಫಿ ಕಪ್ ಬನ್ ಹಿಡಿದು ದುಬಾರಿ ಕಾರಿನ ಮುಂದೆ ಸ್ಟೈಲೀಶ್ ಆಗಿ ಅಭಿ ಪೋಸ್ ಕೊಟ್ಟಿದ್ದಾರೆ.


ಇದನ್ನೂ ಓದಿ-Celebrity: ಎಚ್ಚರಿಕೆಯ ನಡುವೆಯೂ ಸಿಎಂ ಮಗನನ್ನು ಪ್ರೀತಿಸಿ ಮದುವೆಯಾದ ಸ್ಟಾರ್‌ ನಟಿ ಈಕೆ


ನಮ್ ಗಣಿ ಬಿ.ಕಾಂ ಪಾಸ್ 2 ಚಿತ್ರದ ಮೂಲಕ ಅಭಿಷೇಕ್ ಶೆಟ್ಟಿ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟು ಹೀರೋ ಆಗಿ ದಿಬ್ಬಣ ಹೊರಡಲಿದ್ದಾರೆ. ಅವರ ಹೊಸ‌ ಕನಸಿಗೆ ಬಿ ಎಸ್ ಪ್ರಶಾಂತ್ ಶೆಟ್ಟಿ ಶಕ್ತಿಯಾಗಿ ನಿಂತಿದ್ದಾರೆ. 


ಅದ್ವಿ  ಕ್ರಿಯೇಷನ್ ನಡಿ ಪ್ರಶಾಂತ್ ಸೀಕ್ವೆಲ್ ಗೆ ಹಣ ಹಾಕುತ್ತಿದ್ದು, ಸುಮಂತ್ ಆಚಾರ್ಯ ಕ್ಯಾಮೆರಾ ಹಿಡಿಯಲಿದ್ದು, ಉಮೇಶ್ ಆರ್ ಬಿ ಕತ್ತರಿ ಕೆಲಸ, ಆನಂದ್ ರಾಜವಿಕ್ರಂ ಟ್ಯೂನ್ ಹಾಕಲಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್-2 ಸಿನಿಮಾದ ಕಥೆ ಬರವಣಿಗೆ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತೊಂದು ಅಪ್ ಡೇಟ್ ನೊಂದಿಗೆ ಅಭಿಷೇಕ್ ಶೆಟ್ಟಿ ನಿಮ್ಮ ಮುಂದೆ ಹಾಜರಾಗಲಿದ್ದಾರೆ.


ಇದನ್ನೂ ಓದಿ-Celebrity: ಎಚ್ಚರಿಕೆಯ ನಡುವೆಯೂ ಸಿಎಂ ಮಗನನ್ನು ಪ್ರೀತಿಸಿ ಮದುವೆಯಾದ ಸ್ಟಾರ್‌ ನಟಿ ಈಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.