Dhruva Sarja Completed Martain Dubbing: ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮಾರ್ಟಿನ್ ಸಿನಿಮಾದ ಅಪ್‌ಡೇಟ್‌ ಸಿಕ್ಕಿದೆ. ಸುಮಾರು ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ಫ್ಯಾನ್ಸ್‌ ಕಾಯುತ್ತಿದ್ದು, ಸದ್ಯ ಈ ಸಿನಿಮಾದ ಡಬ್ಬಿಂಗ್‌ ಕೆಲಸ ಪೂರ್ಣಗೊಂಡಿದೆ. ಈ ವಿಷಯವನ್ನು ಸ್ವತಃ ನಟ ಧ್ರುವ ಸರ್ಜಾ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟ ಧ್ರುವ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಡಬ್ಬಿಂಗ್‌ ಸ್ಟೂಡಿಯೋದಲ್ಲಿರುವ ಫೋಟೋ ಶೇರ್‌ ಮಾಡುವುದರ ಜೊತೆಗೆ ʻಮಾರ್ಟಿನ್‌ ಡಬ್ಬಿಂಗ್‌ ಸಂಪೂರ್ಣವಾಗಿ ಮುಗಿದಿದೆʼ ಎಂದು ಬರೆದುಕೊಂಡಿದ್ದಾರೆ. ಇನ್ನೂ ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ ಆದ ಹಿನ್ನೆಲೆ ಧ್ರುವ ತಾವೇ ಎಲ್ಲಾ ಭಾಷೆಯಲ್ಲಿಯೂ ಡಬ್‌ ಮಾಡಿದ್ದಾರ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ ಸಿಕ್ಕಿಲ್ಲ.


ಇದನ್ನೂ ಓದಿ: RCB : ಹೆಂಗಸರು ಕಪ್​ ಗೆದ್ದು ಬಿಟ್ರು.. ಗಂಡಸರು..? RCB ಗೆಲುವಿನ ಬೆನ್ನಲ್ಲೆ ಪ್ರಶ್ನೆ ಮಾಡಿದ ವಿಕಟಕವಿ


ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ನಟ ಧ್ರುವ ಸರ್ಜಾ ಡಬ್ಬಿಂಗ್ ಕೆಲಸಗಳನ್ನು ಮುಗಿಸಿದ್ದಾರೆ ಅನ್ನೋದು ಅಷ್ಟೇ. ಧ್ರುವ ಸರ್ಜಾ ಅಭಿನಯದ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಮಾರ್ಟಿನ್‌ ಆಗಿದ್ದು, ಈ ಚಿತ್ರಕ್ಕೆ ನಿರ್ಮಾಪಕ ಉದಯ್ ಮೆಹ್ತಾ ಕೋಟಿ ಕೋಟಿ ಹಣವನ್ನು ಸುರಿಸಿದಾರೆ. ಇದೊಂದು ಹೈ ಬಜೆಟ್‌ ಸಿನಿಮಾ ಆಗಿರುವುದರಿಂದ ಈ ಚಿತ್ರದ ಮೇಲೆ ಫ್ಯಾನ್ಸ್‌ ಬಹಳ ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.


ಮಾರ್ಟಿನ್‌ ಸಿನಿಮಾಗೆ ಡೈರೆಕ್ಟರ್ ಎ.ಪಿ.ಅರ್ಜುನ್ ಆಕ್ಷನ್‌ ಕಟ್‌ ಹೇಳಿದ್ದು, ಧ್ರುವ ಸರ್ಜಾಗೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ ಬಣ್ಣ ಹಚ್ಚಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅನ್ವೇಶಿ ಜೈನ್ ಹಾಗೂ ಸುಕೃತಾ ವಾಗ್ಲೇ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್‌ ಹಾಗೂ ಟೀಸರ್‌ ಅಭಿಮಾನಿಗಳ ಗಮನ ಸೆಳೆದಿದ್ದು, ಈ ಚಿತ್ರ ತೆರೆಗೆ ಅಪ್ಪಳಿಸುವುದನ್ನು ನೋಡುವುದಕ್ಕೆ ಕಾಯ್ತಾಯಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ