Actor Aamir Khan Dating Rumour: ಬಾಲಿವುಡ್’ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಅಮೀರ್ ಖಾನ್ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಪಿಕೆ, 3 ಈಡಿಯಟ್ಸ್, ದಂಗಲ್ ಸೇರಿ ಕೆಲವೊಂದು ಸಿನಿಮಾಗಳಲ್ಲಿ ಅದ್ಭುತ ಅಭಿನಯ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವಕಪ್ ಪಂದ್ಯದಲ್ಲಿ ಪಾಂಡ್ಯ ಆಡುತ್ತಾರೋ ಇಲ್ಲವೋ? ನಾಯಕ ರೋಹಿತ್ ಶರ್ಮಾ ಕೊಟ್ಟ ಅಪ್ಡೇಟ್ ಹೀಗಿದೆ


ಇನ್ನು ನಟ ಅಮೀರ್ ಖಾನ್ ಅವರು ನಟಿ ಫಾತಿಮಾ ಸನಾ ಶೇಖ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕೇಳಿಬರುತ್ತಿತ್ತು. ಇವರಿಬ್ಬರು ದಂಗಲ್ ಚಿತ್ರದಲ್ಲಿ ತಂದೆ ಮಗಳಾಗಿ ನಟಿಸಿದ್ದರು. ಇದೀಗ, ನಟ ಕಮಲ್ ಆರ್ ಖಾನ್ ಅಕಾ ಕೆ ಆರ್‌ ಕೆ ಅವರು, ಫಾತಿಮಾ ಮತ್ತು ಅಮೀರ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಆಘಾತಕಾರಿ ಟ್ವೀಟ್ ಮಾಡಿದ್ದಾರೆ.


ಅವರ ಟ್ವೀಟ್’ನಲ್ಲಿ, "ಬ್ರೇಕಿಂಗ್ ನ್ಯೂಸ್:- ಅಮೀರ್ ಖಾನ್ ಅವರು ತಮ್ಮ ಮಗಳ ವಯಸ್ಸಿನ ಫಾತಿಮಾ ಸನಾ ಶೇಖ್ ಅವರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಅಮೀರ್ ಖಾನ್ ತಮ್ಮ ದಂಗಲ್ ಚಿತ್ರದ ಸಮಯದಿಂದಲೂ ಸನಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.


Astro Tips: ಬಾಳೆ ಮರದ ಈ ತಂತ್ರದಿಂದ ನೀವು ರಾತ್ರೋರಾತ್ರಿ ಶ್ರೀಮಂತರಾಗುತ್ತೀರಿ..!


ಅಮೀರ್ ಮತ್ತು ಕಿರಣ್ ರಾವ್ ವಿಚ್ಛೇದನಕ್ಕೆ ಫಾತಿಮಾ ಕಾರಣ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು. ಆದರೆ ಈ ಸಂದರ್ಭದಲ್ಲಿ ಮಾತನಾಡಿದ್ದ ಫಾತಿಮಾ, “ನಾನು ಎಂದಿಗೂ ಭೇಟಿಯಾಗದ ಅಪರಿಚಿತರು ನನ್ನ ಬಗ್ಗೆ ಬರೆಯುತ್ತಿದ್ದಾರೆ. ಅದರಲ್ಲಿ ಸತ್ಯಾಂಶವಿದೆಯೇ ಎಂಬುದು ಅವರಿಗೂ ತಿಳಿದಿಲ್ಲ. ಅದನ್ನು ಓದುವ ಜನರು ನಾನು ಒಳ್ಳೆಯ ವ್ಯಕ್ತಿಯಲ್ಲ ಎಂದು ಭಾವಿಸುತ್ತಾರೆ. ನನ್ನನ್ನು ಕೇಳಿ ಮತ್ತು ನಾನು ನಿಮಗೆ ಉತ್ತರವನ್ನು ನೀಡುತ್ತೇನೆ. ಇದು ನನ್ನನ್ನು ತೊಂದರೆಗೊಳಿಸುತ್ತದೆ. ಏಕೆಂದರೆ ಜನರು ತಪ್ಪು ವಿಷಯಗಳನ್ನು ಊಹಿಸಲು ನಾನು ಬಯಸುವುದಿಲ್ಲ. ಆದರೆ ನಾನು ಇಂತಹ ಸುದ್ದಿಗಳನ್ನು ನಿರ್ಲಕ್ಷಿಸಲು ಕಲಿತಿದ್ದೇನೆ. ಆದರೂ ಇದು ಪರಿಣಾಮ ಬೀರುವ ದಿನಗಳಿವೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.