Indian Actor: ಒಂದು ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್ ಮಾಡಿದ್ದ ಈ ಖ್ಯಾತ ನಟ ಇಂದು ಟಾಯ್ಲೆಟ್ ಕ್ಲೀನರ್!
South Actor Abbas: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಜೊತೆಗೆ ಸಿನಿಮಾವೊಂದರಲ್ಲಿ ರೊಮ್ಯಾನ್ಸ್ ಮಾಡಿದ ದಕ್ಷಿಣ ಚಿತ್ರರಂಗದ 90 ರ ದಶಕದ ಬಹುಬೇಡಿಕೆ ನಟ, ಸಾಲು ಸಾಲು ಸಿನಿಮಾಗಳ ಸೋಲಿನಿಂದ ಟಾಯ್ಲೆಟ್ ಕ್ಲೀನರ್ ಆಗಿದ್ದಾರೆ. ಈ ನಟ ಯಾರು ಗೊತ್ತೇ?
Actor Abbas Life Story: ಭಾರತದ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ ನಟ ಅಬ್ಬಾಸ್, 1990 ರ ದಶಕದಲ್ಲಿ ಮಿಂಚಿದ್ದರು. ಈ ಹೀರೋ ಒಂದೇ ಒಂದು ಸಿನಿಮಾದ ಮೂಲಕ ಸ್ಟಾರ್ ಪಟ್ಟಕ್ಕೇರಿದ ನಟ ತಮ್ ಕೆರಿಯರ್ ಅನ್ನು ಹಾಳು ಮಾಡಿಕೊಂಡರು. ಸದ್ಯ ಈ ನಟ ಯಾರಿಗೂ ಕಾಣದ, ಯಾರಿಗೂ ನೆನಪಾಗದ ಪರಿಸ್ಥಿತಿಯಲ್ಲಿ ಜೀವನವನ್ನು ಮಾಡುತ್ತಿದ್ದಾರೆ. ಈ ನಟ ಒಂದು ಕಾಲದಲ್ಲಿ ‘ಕಾದಲ್ ದೇಶಂ’ ಚಿತ್ರದ ಮೂಲಕ ಹುಡುಗಿಯರ ಕನಸಿನ ಹುಡುಗನಾಗಿದ್ದರು. ಈ ನಟ ಕನ್ನಡದ ಅಪ್ಪು ಪಪ್ಪು ಸಿನಿಮಾದಲ್ಲಿಯೂ ನಟಿಸಿದ್ದರು.
90 ರ ದಶಕದ ಈ ಸೂಪರ್‌ಸ್ಟಾರ್ ಅಬ್ಬಾಸ್, 2000ರ ,ಮೇಲೆ ಈ ನಟನ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಾಗ ನಾಲ್ಕು ಬಾರಿ ದಿವಾಳಿಯಾದರು. ಅಂತಹ ಸಮಯದಲ್ಲಿ ಈ ನಟ ಟ್ಯಾಕ್ಸಿ ಡ್ರೈವರ್ ಮತ್ತು ಟಾಯ್ಲೆಟ್ ಕ್ಲೀನರ್ ಆಗಿ ಕೆಲಸ ಮಾಡಿದರು. ಸಂದರ್ಶನವೊಂದರಲ್ಲಿ ಈ ನಟ, "ನನ್ನ ವೃತ್ತಿಜೀವನದ ಆರಂಭದಲ್ಲಿ ಕೆಲವು ಯಶಸ್ಸಿನ ನಂತರ, ನನ್ನ ಕೆಲವು ಚಿತ್ರಗಳು ವಿಫಲವಾದವು. ಇದರಿಂದ ಆರ್ಥಿಕವಾಗಿ ನೊಂದಿದ್ದೆ. ಬಾಡಿಗೆ ಮತ್ತು ಸಿಗರೇಟಿನಂತಹ ಸಣ್ಣ ಅಗತ್ಯಗಳನ್ನು ಸಹ ಪೂರೈಸಲು ಸಾಧ್ಯವಾಗಲಿಲ್ಲ" ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?
ನಟ ಅಬ್ಬಾಸ್ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು. ಆದರೆ 1994ರಲ್ಲಿ ಬೆಂಗಳೂರಿನಲ್ಲಿ ಮಾಡೆಲಿಂಗ್ ಸ್ಪರ್ಧೆ ನಡೆಯಲಿದೆ ಎಂದು ಗೊತ್ತಾಗಿ ಅದರಲ್ಲಿ ಭಾಗವಹಿಸಿ, ಆ ಸ್ಪರ್ಧೆಯಲ್ಲಿಯೂ ಗೆದ್ದರು. ಈ ನಟ ಮಾಡೆಲಿಂಗ್ ಬಳಿಕ ಗೆಳೆಯನ ಸಲಹೆ ಮೇರೆಗೆ 1995ರಲ್ಲಿ ತಮಿಳು ಚಿತ್ರವೊಂದಕ್ಕೆ ಆಡಿಷನ್‌ನಲ್ಲಿ ಭಾಗವಹಿಸಿದರು. ಈ ನಟನ ಅಭಿನಯದಿಂದ ಪ್ರಭಾವಿತರಾದ ಡೈರೆಕ್ಟರ್ ಕದಿರ್ ‘ಕಾದಲ್ ದೇಶಂ’ ಸಿನಿಮಾದಲ್ಲಿ ಸ್ಕ್ರೀನ್ ಟೆಸ್ಟ್‌ಗೆ ಕರೆದರು. ಈ ಪರೀಕ್ಷೆಯಲ್ಲಿ ಮಿಂಚಿದ ನಂತರ ಅಬ್ಬಾಸ್‌ಗೆ ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾದರು.
‘ಕಾದಲ್ ದೇಶಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗುತ್ತಿದ್ದಂತೆ, ಅಬ್ಬಾಸ್ ಸೂಪರ್‌ಸ್ಟಾರ್ ಆಗಿಬಿಟ್ಟರು. ಈ ಯಶಸ್ಸಿನ ನಂತರ ಈ ನಟನಿಗೆ ಸತತ ಚಿತ್ರಗಳ ಆಫರ್‌ಗಳು ಬಂದವು ಈ ನಟ 2000 ರಲ್ಲಿ ತೆರೆಕಂಡ ʻಕಂಡುಕೊಂಡೇನ್ ಕಂಡುಕೊಂಡೈನ್ʼ ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಜೊತೆ ರೊಮ್ಯಾನ್ಸ್ ಮಾಡಿದರು. ಅಷ್ಟು ಮಾತ್ರವಲ್ಲದೇ ಟಬು, ರಜನಿಕಾಂತ್, ಮಮ್ಮುಟ್ಟಿ ಮುಂತಾದ ಸ್ಟಾರ್ ಗಳ ಜೊತೆ ಅಭಿನಯಿಸಿರುವ ಈ ಸೌತ್ ಸೂಪರ್ ಸ್ಟಾರ್ ಸದ್ಯ ಗ್ಲಾಮರ್ ಇಂಡಸ್ಟ್ರಿಯಿಂದ ದೂರವೇ ಬದುಕುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.