ಬೆಂಗಳೂರು: ಕಳೆದ ಏಳು ತಿಂಗಳಿಂದ ಮನೆ ಬಾಡಿಗೆ ಕೊಟ್ಟಿಲ್ಲ ಎಂದು ಆರೋಪಿಸಿ ಮನೆ ಮಾಲೀಕ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ನಟ ಆದಿತ್ಯ ಪೋಲೀಸರ ಮುಂದೆ ಹಾಜರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಸದಾಶಿವನಗರದ ಆರ್ ಎಂವಿಎಕ್ಸ್ ಬಡಾವಣೆ ಬಳಿ ಇರುವ ಪ್ರಸನ್ನ ಅವರ ಮನೆಯಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ನಟ ಆದಿತ್ಯ ಅವರು ಕಳೆದ ನಾಲ್ಕು ವರ್ಷಗಳಿಂದ ವಾಸವಿದ್ದು, ಕೆಲ ತಿಂಗಳಿಂದ ಬಾಡಿಗೆ ಕಟ್ಟಿಲ್ಲ ಎಂದು ಮನೆ ಮಾಲೀಕ ಪ್ರಸನ್ನ ದೂರು ನೀಡಿದ್ದ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗುವಂತೆ ಪೊಲೀಸರು ನಟ ಆದಿತ್ಯಗೆ ನೋಟಿಸ್ ನೀಡಿದ್ದರು. ಈ ಸಂಬಂಧ ಇಂದು ನಟ ಆದಿತ್ಯ ಹಾಗೂ ತಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಪೊಲೀಸರ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ.


"ನಾವು ಗೂಂಡಾಗಳನ್ನು ಕರೆಸಿ ಮನೆ ಮಾಲೀಕರ ಮೇಲೆ ಗಲಾಟೆ ಮಾಡಿಸಿಲ್ಲ. ಈ ಬಗ್ಗೆ ವಿಚಾರಣೆ ಕೋರ್ಟ್​ನಲ್ಲಿದೆ. ನಾವು ಕಾನೂನು ಹೋರಾಟ ನಡೆಸುತ್ತೇವೆ" ಎಂದು ನಟ ಆದಿತ್ಯ ಹಾಗೂ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ ಎನ್ನಲಾಗಿದೆ.  


ಪ್ರತಿ ತಿಂಗಳಿಗೆ 48 ಸಾವಿರ ರೂ ಮನೆ ಬಾಡಿಗೆ ನಿಗದಿ ಮಾಡಲಾಗಿದೆ. ಇಲ್ಲಿಯವರೆಗೆ ಎರಡೂವರೆ ಲಕ್ಷದಷ್ಟು ಬಾಡಿಗೆ ಬಾಕಿ ಇದೆ ಎಂದು ಮನೆಯ ಮಾಲೀಕ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.