ಸೌತ್ ಫಿಲಿಂ ಇಂಡಸ್ಟ್ರಿಗೆ ಆಘಾತ..! ಸಿನಿಮಾಗೆ ಗುಡ್ ಬೈ ಹೇಳಿದ ಸೂಪರ್ ಸ್ಟಾರ್!!
Ajith Kumar: ನಟ ಅಜಿತ್ ಕುಮಾರ್, ತಮಿಳು ಚಿತ್ರಗಳಲ್ಲಿ ತಮ್ಮ ಪ್ರಬಲ ನಟನೆಗೆ ಹೆಸರುವಾಸಿಯಾಗಿದ್ದಾರೆ, ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಜಿತ್ಗೆ ಕಾರು ಮತ್ತು ಬೈಕ್ಗಳೆಂದರೆ ತುಂಬಾ ಇಷ್ಟ. ಅವರ ಸಂಗ್ರಹದಲ್ಲಿ ಅನೇಕ ಅದ್ದೂರಿ ಕಾರುಗಳು ಮತ್ತು ಬೈಕ್ಗಳಿವೆ.
Ajith Kumar: ನಟ ಅಜಿತ್ ಕುಮಾರ್, ತಮಿಳು ಚಿತ್ರಗಳಲ್ಲಿ ತಮ್ಮ ಪ್ರಬಲ ನಟನೆಗೆ ಹೆಸರುವಾಸಿಯಾಗಿದ್ದಾರೆ, ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಜಿತ್ಗೆ ಕಾರು ಮತ್ತು ಬೈಕ್ಗಳೆಂದರೆ ತುಂಬಾ ಇಷ್ಟ. ಅವರ ಸಂಗ್ರಹದಲ್ಲಿ ಅನೇಕ ಅದ್ದೂರಿ ಕಾರುಗಳು ಮತ್ತು ಬೈಕ್ಗಳಿವೆ.
ವೇಗದ ಹುಚ್ಚು ಹೊಂದಿರುವ ಕಾರಣ ಅವರ ಬಳಿ ಹಲವು ಸ್ಪೋರ್ಟ್ಸ್ ಕಾರುಗಳಿವೆ. ನಟ ಈಗ 15 ವರ್ಷಗಳ ವಿರಾಮದ ನಂತರ ರೇಸಿಂಗ್ಗೆ ಮರಳುತ್ತಿದ್ದಾರೆ. ವಲಿಮೈ ಸ್ಟಾರ್ ಮೋಟಾರ್ ಸ್ಪೋರ್ಟ್ಸ್ ಮೇಲಿನ ಪ್ರೀತಿಯಿಂದ ಸಿನಿಮಾವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ನಟ ಅಜಿತ್ ಅವರಿಗೆ ಸೂಪರ್ ಕಾರುಗಳು, ಬೈಕ್ಗಳು ಹಾಗೂ ರೇಸಿಂಗ್ ಹೋಗುವುದು ಎಂದರೆ ಅಪಾರ ಪ್ರೀತಿ. ಜೀವಕ್ಕಿಂತ ಹೆಚ್ಚಾಗಿ ನಟ ಅಜಿತ್ ಕುಮಾರ್ ಅವರು ರೇಸಿಂಗ್ ಅನ್ನು ಪ್ರೀತಿಸುತ್ತಾರೆ. ಇದೇ ಕಾರಣದಿಂದಾಗಿ ನಟ ಇದೀಗ ಸಿನಿಮಾ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಂತ ನಟ ಸಿನಿಮಾದಿಂದ ಸದಾ ಉಳಿಯುತ್ತಾರೆ ಎಂದಲ್ಲ. ಆದರೆ ನಟನ ಆಯ್ಕೆ ಮಾತ್ರ ರೇಸಿಂಗ್.
ನಟ ವರ್ಷಕ್ಕೆ ಒಂದೆ ಒಂದು ಸಿನಿಮಾ ಮಾಡುವಂತೆ ನಿರ್ಧರಿಸಿದ್ದಾರೆ, ರೇಸಿಂಗ್ ಇವರ ಮೊದಲ ಆಯ್ಕೆಯಾಗಿದ್ದು, ಹೆಚ್ಚಿನ ಗಮನ ಅವರು ರೇಸಿಂಗ್ ಕಡೆಗೆ ವಹಿಸಲಿದ್ದಾರೆ, ಇನ್ನೂ ಸಿನಿಮಾಗಳ ಕಡೆಗೆ ಕೂಡ ಅಜಿತ್ ಅವರು ಗಮನ ವಹಿಸಲಿದ್ದು, ವರ್ಷಕ್ಕೆ ಒಂದು ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಅಜಿತ್ ಅವರು ಇತ್ತೀಚೆಗಷ್ಟೆ ತಮ್ಮ ರೇಸಿಂಗ್ ತಂಡವನ್ನು ಘೋಷಿಸಿದ್ದರು. ಕೆಲವು ಪ್ರಮುಖ ರೇಸಿಂಗ್ ಈವೆಂಟ್ಗಳಲ್ಲಿ ಭಾಗವಹಿಸಲು ಬಯಸಿದ್ದರು. ಅವರು ಪೋರ್ಷೆ 992 GT3 ಕಪ್ ವರ್ಗದಲ್ಲಿ 24h ದುಬೈ 2025 ಮತ್ತು ಯುರೋಪಿಯನ್ 24H ಸರಣಿ ಚಾಂಪಿಯನ್ಶಿಪ್ನಲ್ಲಿ ಚಾಲಕರಾಗಿ ಸ್ಪರ್ಧಿಸಲಿದ್ದಾರೆ. ರೇಸಿಂಗ್ ಸರ್ಕ್ಯೂಟ್ಗೆ ಹಿಂದಿರುಗಿದ ನಟನಿಗೆ ಇದು ಒಂದು ದೊಡ್ಡ ಕ್ಷಣವಾಗಿದೆ. ಈ ಮೂಲಕ ಅವರು ತಮ್ಮ ನಟನೆ ಮತ್ತು ರೇಸಿಂಗ್ ಎರಡೂ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ