ಸ್ಟಾರ್ ನಟ ಅಜಿತ್‌ಗೆ ಬ್ರೈನ್ ಟ್ಯೂಮರ್..!? ಅವರ ಆಪ್ತರು ಹೇಳಿದ್ದೇನು..?
Ajith Kumar brain tumor : ಸ್ಕ್ಯಾನ್ ವೇಳೆ ಕಿವಿಯ ಕೆಳಗಿನ ಒಳ ಭಾಗದಲ್ಲಿ ಸಣ್ಣ ಉಬ್ಬು ಕಾಣಿಸಿಕೊಂಡಿದೆ. ಈ ಕುರಿತ ಸುದ್ದಿ ತಿಳಿದು ಅಜಿತ್ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಅಷ್ಟಕ್ಕೂ ತಲಾ ಅಜಿತ್ ಆರೋಗ್ಯಕ್ಕೆ ಏನಾಯ್ತು.. ಇಲ್ಲಿದೆ ಸಂಪೂರ್ಣ ಮಾಹಿತಿ..
Actor Ajith Kumar Health News : ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರಿಗೆ ಬ್ರೈನ್ ಟ್ಯೂಮರ್ ಇದ್ದು, ಸತತ 4 ಗಂಟೆಗಳ ಚಿಕಿತ್ಸೆ ನಂತರ ತೆಗೆಯಲಾಗುವುದು ಎಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ ಅವರ ಆಪ್ತ ಸುರೇಶ್ ಚಂದ್ರ ವಿವರಣೆ ನೀಡಿದ್ದಾರೆ.
ಹೌದು.. ನಟ ಅಜಿತ್ ಕುಮಾರ್ ನಿನ್ನೆ ಖಾಸಗಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಹೋಗಿದ್ದರು. ಈ ವೇಳೆ ಅವರಿಗೆ ಬ್ರೈನ್ ಟ್ಯೂಮರ್ ಇದೆ ಎಂದು ಹೇಳಲಾಗಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಆಸ್ಪತ್ರೆಗೆ ತೆರಳಿದ್ದಾರೆ ಎಂಬು ಸುದ್ದಿ ಕೇಳಿ ಬರುತ್ತಿದೆ.
ಇದನ್ನು ಓದಿ : Post Office Schemes: ಕೇವಲ ₹500ಗಳ ಹೂಡಿಕೆಯಿಂದ ಲಕ್ಷ ಲಕ್ಷ ಸಂಪಾದಿಸಿರಿ
ʼವಿಡಸೇಲಿʼ ಸಿನಿಮಾದಲ್ಲಿ ನಟಿಸುತ್ತಿರುವ ಅಜಿತ್ ಕುಮಾರ್ ನಿನ್ನೆ ಇದ್ದಕ್ಕಿದ್ದಂತೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ಕುರಿತು ಕೆಲವು ಫೋಟೋಗಳು ವೈರಲ್ ಆಗಿದ್ದವು, ಅವುಗಳನ್ನು ನೋಡಿ ತಲಾ ಅಭಿಮಾನಿಗಳು ಚಿಂತೆಗೀಡಾಗಿದ್ದರು. ಸಧ್ಯ ಅವರಿಗೆ ಯಾವುದೇ ತೊಂದರೆ ಇಲ್ಲ, ಜಸ್ಟ್ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದರು ಎಂಬ ಸುದ್ದಿ ತಿಳಿದು ಕೂಲ್ ಆಗಿದ್ದರು.
ಅಜಿತ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ವೈದ್ಯಕೀಯ ಪರೀಕ್ಷೆಯ ವರದಿಗಳು ಬರುತ್ತಲೇ ಇದ್ದವು. ಈ ಪರಿಸ್ಥಿತಿಯಲ್ಲಿ ನಿನ್ನೆ ರಾತ್ರಿ ಅಜಿತ್ ಗೆ ಬ್ರೈನ್ ಟ್ಯೂಮರ್ ಆಗಿದ್ದು, 4 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ ಎಂಬ ಸುದ್ದಿ ವೇಗವಾಗಿ ಹರಡಿತ್ತು. ಇದೀಗ ಈ ಬಗ್ಗೆ ಅಜಿತ್ ಅವರ ವಕ್ತಾರರು ಸ್ಪಷನೆ ನೀಡಿದ್ದಾರೆ.
ಇದನ್ನು ಓದಿ : ಶೀಘ್ರದಲ್ಲೇ ವಾಟ್ಸ್ ಆಪ್ ನಲ್ಲಿ ಹೊಸ ವೈಶಿಷ್ಯ ಸೇರ್ಪಡೆ, ಚಾಟ್ ಎಷ್ಟು ಸುರಕ್ಷಿತ ಹೇಳಿಕೊಡಲಿದೆ!
ಈ ಕುರಿತು ಮಾತನಾಡಿರುವ ಸುರೇಶ್ ಚಂದ್ರ, ಅಜಿತ್‌ಗೆ ಬ್ರೈನ್ ಟ್ಯೂಮರ್ ಇಲ್ಲ ಮತ್ತು ಶಸ್ತ್ರಚಿಕಿತ್ಸೆಯೂ ಇಲ್ಲ. ಸಿನಿಮಾ ಚಿತ್ರೀಕರಣ ಇರುವುದರಿಂದ ಸಾಮಾನ್ಯವಾಗಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಂದ ಸುದ್ದಿ ಸುಳ್ಳು ಅಂತ ತಿಳಿಸಿದ್ದಾರೆ.
ಅಲ್ಲದೆ, ಸ್ಕ್ಯಾನ್ ವೇಳೆ ಕಿವಿಯ ಕೆಳಗಿನ ಒಳ ಭಾಗದಲ್ಲಿ ಸಣ್ಣ ಉಬ್ಬು ಕಾಣಿಸಿಕೊಂಡಿದ್ದು ಯಾವುದೇ ತೊಂದರೆಯಾಗಿಲ್ಲ.. ಅರ್ಧ ಗಂಟೆಯಲ್ಲಿ ಅದನ್ನು ಸರಿಪಡಿಸಬಹುದು ಅಂತ ವೈದ್ಯರು ತಿಳಿಸಿದ್ದರು. ಕೂಡಲೇ ಅಜಿತ್ ಅವರು ಅದನ್ನು ಸರಿಪಡಿಸಲು ಹೇಳಿದರು ಅಂತ ಮಾಹಿತಿ ನೀಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.