Bayilvan Ranganathan on Redin Kingsley marriage: ಇತ್ತೀಚೆಗೆಯಷ್ಟೇ ಜೈಲರ್ ಸಿನಿಮಾ ನಟ ರೆಡಿನ್ ಕಿಂಗ್ಸ್ಲಿ ಮತ್ತು ಕಿರುತೆರೆ ನಟಿ ಸಂಗೀತಾ ವಿವಾಹವಾಗಿದ್ದಾರೆ. ಆದರೆ ಈ ಮದುವೆ ಬಗ್ಗೆ ನಟ ಹಾಗೂ ಚಿತ್ರ ವಿಮರ್ಶಕ ಬೈಲ್ವಾನ್ ರಂಗನಾಥನ್ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ತನಿಷಾಗೆ ಐ ಲವ್ ಯೂ ಎಂದ ವರ್ತೂರ್! ನಾಚಿ ನೀರಾದ ‘ಬೆಂಕಿ’...


ರೆಡಿನ್ ಕಿಂಗ್ಸ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎಲ್’ಕೆಜಿ, ಗೂರ್ಖಾ, ಎ1, ಜಾಕ್ ಪಾಟ್, ನೆಟ್ರಿಕನ್, ಡಾಕ್ಟರ್, ಈಡಿಯಟ್, ಬೀಸ್ಟ್, ಕಾತುವಾಕುಲ ರೆಂಡು ಕಾದಲ್, ಜೈಲರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್ ಜೊತೆಗಿನ ಜೈಲರ್‌’ನಲ್ಲಿನ ಅವರ ಪಾತ್ರವು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.


ಅಂದಹಾಗೆ ಈ ನಟನಿಗೆ ಈಗ 46 ವರ್ಷ. ಇದೀಗ ಧಾರಾವಾಹಿ ನಟಿ ಸಂಗೀತಾ ಅವರನ್ನು ವಿವಾಹವಾಗಿದ್ದಾರೆ. ಇದೇ ವಿಚಾರವಾಗಿ ಬೈಲ್ವಾನ್ ರಂಗನಾಥನ್ ವಿಡಿಯೋವೊಂದರಲ್ಲಿ ಮಾತನಾಡಿದ್ದಾರೆ.


ಇದನ್ನೂ ಓದಿ: ಕ್ರಿಕೆಟ್’ನಲ್ಲಿ ಮಿಂಚಿದ್ದು ಮಾತ್ರವಲ್ಲ.. ಈ ಸೂಪರ್ ಹಿಟ್ ಸಿನಿಮಾದಲ್ಲೂ ನಟಿಸಿದ್ರು ಯುವರಾಜ್


ರೆಡಿನ್ ಕಿಂಗ್ಸ್ಲಿ ಅವರ ಬಗ್ಗೆ ಮಾತನಾಡಿರುವ ಈ ವೀಡಿಯೋದಲ್ಲಿ, “ನಟನಾಗುವ ಮೊದಲು ಟ್ರೂಪ್ ಡ್ಯಾನ್ಸರ್ ಆಗಿದ್ದರು. ಇದಲ್ಲದೆ ಶೋನಲ್ಲಿ ಹೊಸ ಹೊಸ ಕೆಲಸಗಳನ್ನು ಮಾಡುತ್ತಾ ಅದ್ಭುತವಾಗಿದ್ದರು. ಅವರಿಗೆ 46 ವರ್ಷ. ಇದು ಮೊದಲ ಮದುವೆಯೋ? ಎಂಬುದು ಕೂಡ ತಿಳಿದಿಲ್ಲ. ಯಾವುದೇ ಪೂರ್ವ ಸೂಚನೆ ನೀಡದೆ, ಚಿತ್ರರಂಗದ ಸೆಲೆಬ್ರಿಟಿಗಳಿಗೂ ಕೂಡ ಆಮಂತ್ರಣ ನೀಡದೆ ಮೈಸೂರಿನ ಶೂಟಿಂಗ್ ಲೊಕೇಶನ್‌’ನಲ್ಲಿ ಮದುವೆಯನ್ನು ಗೌಪ್ಯವಾಗಿಟ್ಟಿದ್ದಾನೆ. ಸಂಗೀತಾ ಕೂಡ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ, ರೆಡ್ಡಿನ್ ಅವರೊಂದಿಗೆ ಒಂದು ವರ್ಷ ಒಟ್ಟಿಗೆ ವಾಸಿಸುತ್ತಿದ್ದರು. ಇತ್ತೀಚೆಗೆ ಸಂಗೀತಾ ಶೂಟಿಂಗ್ ಸೆಟ್’ಗೆ ಬಂದು ಮದುವೆಯಾಗುವಂತೆ ರೆಡ್ಡಿನ್ ಕಿಂಗ್ಸ್ಲಿಯನ್ನು ಪೀಡಿಸಿದ್ದರು” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ