Actor Arulmani death : ಕಾಲಿವುಡ್ ಚಿತ್ರರಂಗದಲ್ಲಿ ದುರಂತ ಸಂಭವಿಸಿದೆ. ಜನಪ್ರಿಯ ತಮಿಳು ನಟ ಮತ್ತು ರಾಜಕಾರಣಿ ಅರುಳ್‌ಮಣಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 65 ವರ್ಷದ ನಟ ಗುರುವಾರ ಬಿಸಿಲಿನ ತೀವ್ರ ತಾಪಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದರು.


COMMERCIAL BREAK
SCROLL TO CONTINUE READING

ಹೌದು.. ಕಳೆದ ಹತ್ತು ದಿನಗಳಿಂದ ಅರುಳ್‌ಮಣಿಯವರು (Actor Arulmani) ಎಐಎಡಿಎಂಕೆ ಪರವಾಗಿ ಪ್ರಚಾರ ನಡೆಸುತ್ತಿದ್ದರು. ಗುರುವಾರ ಬಿಸಿಲಿನ ತೀವ್ರ ತಾಪಕ್ಕೆ ಕೊವಾಲೊ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಕುಟುಂಬ ಸದಸ್ಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ತಡವಾಗಿ ಬಂದಿದ್ದರಿಂದ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. 


ಇದನ್ನೂ ಓದಿ:Actress Tara: ಪ್ರಖ್ಯಾತ ನಟಿ ತಾರಾ ಅವರ ಪತಿ ಯಾರು ಗೊತ್ತಾ? ಇವರೂ ಕೂಡ ತುಂಬಾ ಫೇಮಸ್!


ನಟನ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸಿಂಗಂ 2, ಲಿಂಗಾ, ತೆಂಡ್ರಾಲ್ ಸೇರಿದಂತೆ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದಾರೆ. ನಟನಾಗಿ ಮುಂದುವರೆಯುತ್ತಲೇ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಎಐಎಡಿಎಂಕೆಯ ಕಟ್ಟಾ ಅಭಿಮಾನಿಯಾಗಿರುವ ಅರುಳ್‌ ಅನಾದಿ ಕಾಲದಿಂದಲೂ ಆ ಪಕ್ಷದ ಪರ ಪ್ರಚಾರ ಮಾಡುತ್ತಲೇ ಬಂದಿದ್ದರು.


ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದರು. ಗುರುವಾರ ಎಐಎಡಿಎಂಕೆ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದರು. ಕೂಡಲೇ ಅವರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.