Bigg boss kannada season 9 : ಬಿಗ್‌ ಬಾಸ್‌ ಕನ್ನಡ ಓಟಿಟಿ ಮೊದಲ ಸೀಸನ್‌ ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್‌ ಸೀನಸ್‌ 9  ರ ಪ್ರೋಮೋವನ್ನು ಸಹ ರಿಲೀಸ್‌ ಮಾಡಿದ್ದಾರೆ. ಓಟಿಟಿಯಿಂದ ಕೆಲವು ಸ್ಪರ್ಧಿಗಳು ಬಿಗ್‌ ಬಾಸ್‌ ಮೇನ್‌ ಸೀಸನ್‌ ಗೆ ಹೋಗಲಿದ್ದಾರೆ. ಪ್ರೋಮೋ ರಿಲೀಸ್‌ ಆದ ಬೆನ್ನಲ್ಲೇ ದೊಡ್ಮನೆಗೆ ಯಾರೆಲ್ಲ ಹೋಗಬಹುದೆಂಬ ಚರ್ಚೆ ಜೋರಾಗಿದೆ. ಪ್ರತಿಬಾರಿಯಂತೆಯೇ ಈ ಸಲವೂ ಕೆಲವು ಊಹಾಪೋಹಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆ ಹೆಸರುಗಳಲ್ಲಿ ಅತಿ ಹೆಚ್ಚಾಗಿ ಕೇಳಿ ಬರುತ್ತಿರುವುದು ನಟ ಅನಿರುದ್ಧ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Kiccha Sudeep : ಬೆಂಗಳೂರು ನೆರೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ ಸಹಾಯ ಹಸ್ತ


ಬಿಗ್‌ಬಾಸ್‌ ಕನ್ನಡ ಸೀಸನ್ 9ರ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಚರ್ಚೆ ಬಲು ಜೋರಾಗಿದೆ. ಮೂಲಗಳ  ಪ್ರಕಾರ, ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿರುವ ಅನಿರುದ್ಧ ಅವರು ಇದೀಗ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಈ ಬಗ್ಗೆ ಬಲವಾದ ಚರ್ಚೆ ಕೇಳಿಬರುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದ ಬಳಿಕ ಅನಿರುದ್ಧ ಬಿಗ್‌ ಬಾಸ್‌ ಹೋಗಬಹುದೆಂದು ಅನೇಕರು ಭಾವಿಸುತ್ತಿದ್ದಾರೆ. ಆದರೆ ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬಾದರು ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಮನವಿ ಮಾಡಿರುವ ಕಾರಣ ಇದು ಸಾಧ್ಯವೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ. 


ಬಿಗ್‌ಬಾಸ್‌ ತಂಡ ಕೂಡ ಅನಿರುದ್ಧ ಅವರನ್ನು ಸಂಪರ್ಕಿಸಿದೆಯಂತೆ, ಇದಕ್ಕೆ ಅನಿರುದ್ಧ ಸಹ ಒಪ್ಪಿದ್ದಾರಂತೆ ಎನ್ನಲಾಗುತ್ತಿದೆ. ಈ ಕುರಿತು ವಾಹಿನಿಯಾಗಲಿ ಅಥವಾ ಅನಿರುದ್ಧ ಆಗಲಿ ಖಚಿತ ಪಡಿಸಿಲ್ಲ. ಈ ಎಲ್ಲ ಊಹಾಪೋಹಗಳಿಗೂ ಇನ್ನೇನೂ ಕೆಲವು ದಿನಗಳಲ್ಲಿ ಇದೆಲ್ಲದಕ್ಕೂ ಉತ್ತರ ಸಿಗಲಿದೆ. 


ಇದನ್ನೂ ಓದಿ : Golden Visa: ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕಿಚ್ಚ ಸುದೀಪ್! ಏನಿದರ ಲಾಭ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.