ಶಿವಾಜಿ ನಗರದಲ್ಲಿ ಮಿಲಿಟರಿ ಹೋಟೆಲ್ ಊಟ ಸವಿದು ವಾವ್ ಎಂದ ನಟ ಆಶಿಶ್ ವಿದ್ಯಾರ್ಥಿ
ನಟ ಆಶಿಶ್ ವಿದ್ಯಾರ್ಥಿ ಒಬ್ಬ ಅಮೋಘ ಕಲಾವಿದ. ಸ್ಯಾಂಡಲ್ ವುಡ್ ನಿಂದ ಹಿಡಿದು, ಟಾಲಿವುಡ್, ಬಾಲಿವುಡ್, ಮಲಯಾಳಂ ಹೀಗೆ ಪ್ರತಿ ಭಾಷೆಯ ಸಿನಿಮಾಗಳಲ್ಲಿನ ಇವರ ಅಭಿನಯಕ್ಕೆ ಮನಸೋಲದವರು ಯಾರು ಇಲ್ಲ.
ನಟ ಆಶಿಶ್ ವಿದ್ಯಾರ್ಥಿ ಒಬ್ಬ ಅಮೋಘ ಕಲಾವಿದ. ಸ್ಯಾಂಡಲ್ ವುಡ್ ನಿಂದ ಹಿಡಿದು, ಟಾಲಿವುಡ್, ಬಾಲಿವುಡ್, ಮಲಯಾಳಂ ಹೀಗೆ ಪ್ರತಿ ಭಾಷೆಯ ಸಿನಿಮಾಗಳಲ್ಲಿನ ಇವರ ಅಭಿನಯಕ್ಕೆ ಮನಸೋಲದವರು ಯಾರು ಇಲ್ಲ. ಅಭಿನಯದ ಮೂಲಕ ಜನರ ಮನಗೆದ್ದ ನಟ ಆಶಿಶ್ ಅವರು ಆಹಾರ ಪ್ರಿಯರು ಕೂಡ ಹೌದು. ಇದಕ್ಕೆ ಸಾಕ್ಷಿ ಇವರು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುವ ಆಹಾರದ ವಿಡಿಯೋಗಳೇ ಸಾಕ್ಷಿ. ಬೆಂಗಳೂರು ಸೇರಿದಂತೆ ನಾನಾ ಕಡೆ ಪ್ರಯಾಣ ಮಾಡುವ ಆಶಿಶ್ ಅವರು ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿಯುವುದು ಮತ್ತು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುವುದನ್ನು ಮಾತ್ರ ಮರೆಯುವುದೇ ಇಲ್ಲ.
ಇದನ್ನೂ ಓದಿ : ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ, ಏಮ್ಸ್ ನಲ್ಲಿ ಕೊನೆಯುಸಿರು
ಕಳೆದ ಬಾರಿ ಮುದ್ದೆ, ಮಟನ್ ಸಾರು ಊಟ ಮಾಡಿ ಬೆಂಗಳೂರಿನ ‘ಗೌಡರ ಮುದ್ದೆ ಮನೆ’ಯ ಊಟದ ಪರಿಚಯ ಮಾಡಿಕೊಟ್ಟು ಸೂಪರ್ ಎಂದಿದ್ದ ಆಶಿಶ್ ಅವರು ಇದೀಗ ಸಂಪೂರ್ಣ ಮಾಂಸಾಹಾರ ಊಟದ ರುಚಿಯನ್ನು ಸವಿದು ತೃಪ್ತಿಪಟ್ಟಿರುವುದಲ್ಲದೇ ಆ ಸಂತಸವನ್ನು ಅಭಿಮಾನಿಗಳೊಟ್ಟಿಗೆ ಶೇರ್ ಮಾಡಿದ್ದಾರೆ. ಈ ಬಾರಿ ಅವರು ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಹೋಟೆಲ್ ಮತ್ತು ಅಲ್ಲಿನ ಆಹಾರದ ರುಚಿ, ವಿಶೇಷತೆಯನ್ನು ವಿವರಿಸಿದ್ದಾರೆ.
Koo App
Bengaluru’s most popular Shivaji Military Hotel 😍🤤 Donne Biryani, Chicken Curry, Mutton Sukkha, Paya Soup and much more Beware you’ll get hungry 😋 The Vlog is live now…🤩 #reels #reelitfeelit #reelinstagram #reelkarofeelkaro #foodreels #food #bengaluru #shivajimilitaryhotel #foodie #bengalurufoodie #ashishvidyarthi #ashishvidyarthiactorvlogs #fun #friends
- Ashish Vidyarthi (@ashishvidyarthi) 20 Sep 2022
ಅತಿಯಾದ ಬಿಸಿ ನೀರು ಸೇವನೆ ನಿಮ್ಮ ಈ ಅಂಗಗಳಿಗೆ ಹಾನಿಕಾರಕವಾಗಬಹುದು, ಎಚ್ಚರ!
ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ದೆಹಲಿ ಮೂಲದ ನಟ ಆಶಿಷ್ ವಿದ್ಯಾರ್ಥಿ ಬಳಿಕ ಕಾಣಿಸಿಕೊಂಡದ್ದು ತೆಲುಗು ಸಿನಿಮಾಗಳಲ್ಲಿ. ಸ್ಯಾಂಡಲ್ ವುಡ್ ಗೆ ಎಕೆ 47 ಸಿನಿಮಾ ಮೂಲಕ ಕನ್ನಡಾಭಿಮಾನಿಗಳ ಮೆಚ್ಚುಗೆ ಗಳಿಸಿದರು. ಈ ಸಿನಿಮಾದ ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯ ಚತುರತೆ ಮೆರೆದರು. ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಮಿಂಚಿದರು. ಇತ್ತೀಚೆಗೆ ಯಾವುದೇ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಕೊಂಚ ಬೇಸರದ ಸಂಗತಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.