`ದುಡ್ಡಿಗಾಗಿ ಆದಿವಾಸಿ ಸಂಸ್ಕೃತಿ ಹೈಜಾಕ್ ಮಾಡೋದು ಸರೀನಾ?` : ನಟ ಚೇತನ್
Actor Chetan Ahimsa on Kantara : ಕೇವಲ 16 ಕೋಟಿಯ ಬಜೆಟ್‌ನಲ್ಲಿ ರೆಡಿಯಾದ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬರೋಬ್ಬರಿ 400 ಕೋಟಿ ಗಳಿಕೆ ಮಾಡಿದೆ. ಕಾಂತಾರ ಸಕ್ಸಸ್‌ನಲ್ಲಿ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡ ಸಂಭ್ರಮಿಸುತ್ತಿರುವಾಗ ನಟ ಚೇತನ್ ಅಹಿಂಸಾ ಇದೀಗ ಮತ್ತೆ ಇದೇ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
Actor Chetan Ahimsa on Kantara : ಕಾಂತಾರ ಸಿನಿಮಾ ಸೃಷ್ಟಿಸಿದ ಕ್ರೇಜ್ ಅಷ್ಟಷ್ಟಲ್ಲ. ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಕನ್ನಡಿಗರ ಮನಗೆದ್ದ ಕಾಂತಾರ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಆಯಿತು. ಹಿಂದಿ ಸೇರಿದಂತೆ ಸೌತ್ ಸಿನಿ ಇಂಡಸ್ಟ್ರಿಯಲ್ಲೂ ನೂತನ ದಾಖಲೆಗಳನ್ನು ಬರೆಯಿತು. ದೊಡ್ಡ ದೊಡ್ಡ ನಟರ ಸಿನಿಮಾಗಳ ಎದುರು ಭಾರತದ ಬಾಕ್ಸ್‌ಆಫೀಸ್‌ನಲ್ಲಿ ಗೆದ್ದು ಬೀಗುತ್ತಿರುವ ಸಿನಿಮಾ. ಕೇವಲ 16 ಕೋಟಿಯ ಬಜೆಟ್‌ನಲ್ಲಿ ರೆಡಿಯಾದ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬರೋಬ್ಬರಿ 400 ಕೋಟಿ ಗಳಿಕೆ ಮಾಡಿದೆ. ಕಾಂತಾರ ಸಕ್ಸಸ್‌ನಲ್ಲಿ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡ ಸಂಭ್ರಮಿಸುತ್ತಿರುವಾಗ ನಟ ಚೇತನ್ ಅಹಿಂಸಾ ಇದೀಗ ಮತ್ತೆ ಇದೇ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ : ಇಂದು ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ ವಸಿಷ್ಠ ಸಿಂಹ - ಹರಿಪ್ರಿಯಾ!?
ಕಾಂತಾರ ರಿಲೀಸ್ ಆದಾಗಲೂ ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದೆಯೇ ಇದ್ದವು. ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳನ್ನು ತೋರಿಸಬೇಕೆಂದು ಕೇಳುತ್ತೇನೆ" ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆಗಲೂ ಹಲವರು ಚೇತನ್ ಹೇಳಿಕೆ ವಿರುದ್ಧ ಅಮಸಾಧಾನ ಹೊರಹಾಕಿದ್ದರು.
ದೈವದ ವಿಚಾರ ಇಟ್ಟುಕೊಂಡು ರೀಲ್ಸ್, ಅನುಕರಣೆ ಮಾಡುವುದು ಸರಿಯಲ್ಲ..!
ರಿಷಬ್ ಶೆಟ್ಟಿಯವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೇತನ್, "ಕೋಟಿಗಟ್ಟಲೆ ದುಡ್ಡು, ಆರ್ಥಿಕ ಲಾಭಕ್ಕಾಗಿ ನಮ್ಮ ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಉಪಯೋಗಿಸಿಕೊಂಡು, ಮೂಲನಿವಾಸಿಗಳನ್ನು ಯಾವ ರೀತಿಯಲ್ಲೂ ಎತ್ತಿ ಹಿಡಿಯದೇ ಇರುವವರು, ಇನ್ನೊಬ್ಬರಿಗೆ ಆ ರೀತಿ ತೋರಿಸಬಾರದು ಎಂದು ಹೇಳುವುದು ವಿಪರ್ಯಾಸ. ನೀವು ಅದನ್ನು ತೋರಿಸಬಹುದು ಎಂದಾದರೆ, ಬೇರೆಯವರು ಸಹ ತೋರಿಸಬಹುದು. ಪ್ರಜಾಪ್ರಭುತ್ವಕ್ಕೆ ಸ್ವಾಗತ" ಎಂದು ಬರೆದುಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.