ಬೆಂಗಳೂರು: ಕನ್ನಡ ಸಿನಿರಂಗದಲ್ಲಿ ಹವಾ ಎಬ್ಬಿಸಿರುವ ಆಕ್ಟರ್‌ ಕಂ ಡೈರೆಕ್ಟರ್‌ ರಿಷಬ್ ಶೆಟ್ಟಿ ಅವರು ಬೆಳ್ಳಂಬೆಳಗ್ಗೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ದಂಪತಿ ಎರಡನೇ ಮಗು ಜನಿಸಿದ್ದು, ರಿಷಬ್ ಮನೆಗೆ ಲಕ್ಷ್ಮೀ ಕಾಲಿಟ್ಟಿದ್ದಾಳೆ. ಈ ಖುಷಿ ವಿಚಾರವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ ನಟ ಶಿಷಬ್‌ ಶೆಟ್ಟಿ.


COMMERCIAL BREAK
SCROLL TO CONTINUE READING

ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಿಷಬ್ ಶೆಟ್ಟಿ (Rishab Shetty), ಕಿರಿಕ್‌ ಪಾರ್ಟಿ (Kirik Party) ಸಿನಿಮಾ ನಂತರ ಹಿಂದಿರುಗಿ ನೋಡಲೇ ಇಲ್ಲ. ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ್ದ ರಿಷಬ್ ಶೆಟ್ಟಿ ಇಂದು ಚಂದನವನದ ಸ್ಟಾರ್‌ ಲಿಸ್ಟ್‌ನಲ್ಲಿದ್ದಾರೆ. ಇತ್ತೀಚೆಗೆ ರಿಲೀಸ್‌ ಆಗಿದ್ದ 'ಗರುಡ ಗಮನ ವೃಷಭ ವಾಹನ' ದೊಡ್ಡ ಹಿಟ್‌ ಕಂಡಿದೆ. ಹೀಗೆ ರಿಷಬ್‌ ಬಾಳಲ್ಲಿ ಖುಷಿ ನಲಿದಾಡುತ್ತಿರುವಾಗ ಮುದ್ದಾದ ಪುಟಾಣಿ 'ಲಕ್ಷ್ಮೀ' ಎಂಟ್ರಿ ಕೊಟ್ಟಿದ್ದಾಳೆ.


ಇದನ್ನೂ ಓದಿ- ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಸುಪುತ್ರ…!


ಸಂತಸ ಹಂಚಿಕೊಂಡ ನಟ:
ಈಗಾಗಲೇ ರಿಷಬ್‌ ಶೆಟ್ಟಿ (Rishab Shetty) ದಂಪತಿಗೆ ಮುದ್ದಾದ ಮಗನಿದ್ದು, ರಣ್ವಿತ್ ಶೆಟ್ಟಿಗೆ ತಂಗಿ ಹುಟ್ಟಿದ್ದಾಳೆ. ಹೊಸ ವರ್ಷದಂದೇ ರಿಷಬ್ ಶೆಟ್ಟಿ ಖುಷಿ ವಿಚಾರವನ್ನು ಶೇರ್‌ ಮಾಡಿದ್ದರು. ತಮಗೆ 2ನೇ ಮಗುವಾಗುತ್ತಿರುವ ಸಂತಸದ ವಿಚಾರ ಹಂಚಿಕೊಂಡಿದ್ದರು. ಇಂದು ಆ ಸಂತಸ ದುಪ್ಪಟ್ಟಾಗಿದ್ದು, ರಿಷಬ್‌ ಶೆಟ್ಟಿ ಅವರ ಮನೆಗೆ ಮಗಳು ಕಾಲಿಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ- ರಾಕಿ ಭಾಯಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಈ ದಿನ ಬಿಡುಗಡೆಯಾಗಲಿದೆ KGF Chapter 2 ಟ್ರೈಲರ್


ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ನಟ ರಿಷಬ್‌ ಶೆಟ್ಟಿ, 'ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ.' ಎಂದು ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. 


[[{"fid":"231355","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಮತ್ತೊಂದ್ಕಡೆ ತಮ್ಮ ಸಿನಿ ಕರಿಯರ್‌ನಲ್ಲೂ ರಿಷಬ್‌ ಅವರು ಫುಲ್‌ ಬ್ಯುಸಿಯಾಗಿದ್ದು, ರಿಷಬ್ ಶೆಟ್ಟಿ ಕೈಯಲ್ಲಿ 5 ಸಿನಿಮಾಗಳಿವೆ. 'ಹರಿಕಥೆ ಅಲ್ಲ ಗಿರಿಕಥೆ' , 'ಬೆಲ್ ಬಾಟಂ 2', 'ಮಹಾನೀಯರೆ ಮಹಿಳೆಯರೇ' , 'ಆಂಟಗೋನಿ ಶೆಟ್ಟಿ', 'ಕಾಂತರ' ಸಿನಿಮಾಗಳ ಶೂಟಿಂಗ್‌ನಲ್ಲಿ ಅವರು ಬ್ಯುಸಿಯಾಗಿದ್ದಾರೆ.


ನಟ ರಿಷಬ್‌ ಶೆಟ್ಟಿ ಇವತ್ತು ಸಖತ್‌ ಖುಷಿಯಾಗಿದ್ದಾರೆ. ರಿಷಬ್‌ ಅವರ ಮನೆಗೆ ಪುಟಾಣಿ ಮಹಾಲಕ್ಷ್ಮಿ ಎಂಟ್ರಿ ಆಗಿದೆ. ಈ ಕುರಿತು ಟ್ವೀಟ್‌ ಮಾಡಿ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದ ನಟ ರಿಷಬ್‌, ಹೆಣ್ಣು ಮಗು ಜನಿಸಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು. ಈ ಕುರಿತು 'ಜೀ ಕನ್ನಡ ನ್ಯೂಸ್' ಡಿಜಿಟಲ್‌ ಸುದ್ದಿ ಪ್ರಕಟಿಸಿತ್ತು. 'ಜೀ ಕನ್ನಡ ನ್ಯೂಸ್' ಪ್ರಕಟಿಸಿದ್ದ ಸುದ್ದಿಯನ್ನು ನಟ ರಿಷಬ್‌ ಶೆಟ್ಟಿ ಇದೀಗ ರೀ ಟ್ವೀಟ್‌ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.