ಕಿಲ್ಲರ್ಸ್ ʼಡಿ ಗ್ಯಾಂಗ್ʼಗೆ ಪೊಲೀಸರಿಂದ ರಾಜಾತಿಥ್ಯ..!? ಇತಿಹಾಸದಲ್ಲೇ ಮೊದಲ ಬಾರಿಗೆ ಠಾಣೆ ಸುತ್ತಮುತ್ತ ನಿಷೇಧಾಜ್ಞೆ..!
Darshan Renukaswamy murder case : ರೇಣುಕಾಸ್ವಾಮಿ ಕೊಲೆ ಆರೋಪಿಗಳ ವಿಚಾರಣೆ ನಡೆಸುವ ಪೊಲೀಸ್ ಠಾಣೆ ಬಳಿ ಇತಿಹಾಸದಲ್ಲಿ ಮೊದಲ ಬಾರಿಗೆ 144 ಸೆಕ್ಷೆನ್ ಜಾರಿ ಮಾಡಲಾಗಿದೆ. ಇನ್ನೂ ಮಾಧ್ಯಮಗಳ ಕ್ಯಾಮರಾ ಕಣ್ಣಿಂದ ಆರೋಪಿಗಳನ್ನು ಮರೆಮಾಚಲು ಠಾಣೆಯ ಮುಂಭಾಗ ಸೈಡ್ ವಾಲ್ ಗಳನ್ನ ಕಟ್ಟಿಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Darshan case update : ಕೊಲೆ ಆರೋಪಿಗಳನ್ನು ತಮ್ಮದೇ ಸ್ಟೈಲಲ್ಲಿ ವಿಚಾರಣೆ ನಡೆಸಿ ಬೆಂಡೆತ್ತುವ ಪೊಲೀಸರಿದ್ದಾರೆ. ಆದರೆ ತನಿಖೆ ಚೆನ್ನಾಗಿ ನಡೆಸುತ್ತಿದ್ದ ಪೊಲೀಸರಿಗೆ ಅದೇನ್ ಆಯ್ತೋ ಗೊತ್ತಿಲ್ಲ. ಇವತ್ತು ಕೊಲೆ ಆರೋಪ ಹೊತ್ತಿರುವ ಡಿ ಗ್ಯಾಂಗ್ ಗೆ ರಾಜತಿಥ್ಯ ನೀಡಿದ್ದಾರೆ. ಕೊಲೆ ಆರೋಪಿಗಳು ಮಾಧ್ಯಮಗಳ ಕ್ಯಾಮಾರಗೆ ಸಿಗಬಾರದು ಅಂತಾ ಸ ಪೊಲೀಸ್ ಠಾಣೆಯನ್ನ ಕಂಪ್ಲೀಟ್ ಸೈಡ್ ವಾಲ್ ಹಾಕಿ ಬೇರೆಯದ್ದೆ ಸಂದೇಶ ನೀಡಿದ್ದಾರೆ.
ಯೆಸ್... ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿ 14 ಜನರ ಬಂಧನವಾಗಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಠಾಣೆಯ ಮುಂದೆ ದರ್ಶನ್ ಅಭಿಮಾನಿಗಳು ಜಮಾಯಿಸಬಾರದು, ಲಾ ಆಂಡ್ ಆರ್ಡರ್ ಸಮಸ್ಯೆಯಾಗಬಾರದೆಂದು ಠಾಣೆಯ ೨೦೦ ಮೀಟರ್ ಸುತ್ತಮುತ್ತ ಇಂದಿನಿಂದ ಅಂದ್ರೆ 13 ರಿಂದ 17 ನೇ ತಾರೀಖಿನವರೆಗೆ, ಐದು ದಿನ 144 ಸೆಕ್ಷನ್ ಜಾರಿಮಾಡಲಾಗಿದೆ.
ಇದನ್ನೂ ಓದಿ:ʼದಾಸನʼ ಹಳೆ ಕೇಸ್‌ಗಳ ಪರಿಶೀಲನೆ..! ನಟ ದರ್ಶನ್ ಮೇಲೆ ಓಪನ್ ಆಗುತ್ತಾ ರೌಡಿ ಶೀಟರ್..?
ಇನ್ನೂ ಕೊಲೆ ಆರೋಪಿಗಳ ವಿಚಾರಣೆ ನಡೆಸುವ ಪೊಲೀಸ್ ಠಾಣೆ ಬಳಿ ಇತಿಹಾಸದಲ್ಲಿ ಮೊದಲ ಬಾರಿಗೆ 144 ಸೆಕ್ಷೆನ್ ಜಾರಿ ಮಾಡಲಾಗಿದೆ. ಇನ್ನೂ ಮಾಧ್ಯಮಗಳ ಕ್ಯಾಮರಾ ಕಣ್ಣಿಂದ ಆರೋಪಿಗಳನ್ನು ಮರೆಮಾಚಲು ಠಾಣೆಯ ಮುಂಭಾಗ ಸೈಡ್ ವಾಲ್ ಗಳನ್ನ ಕಟ್ಟಿಲಾಗಿದೆ. ದೂರು ನೀಡಲು ಬಂದ ಸಾರ್ವಜನಿಕರಿಗೂ ಠಾಣೆಯ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಸಮಸ್ಯೆ ಅಂತ ದೂರು ಕೊಡಲು ಬಂದವ್ರಿಗೂ ಸಮಸ್ಯೆಯಾಗ್ತಿದೆ. ಪೊಲೀಸರ ಈ ವರ್ತನೆಗೆ ವ್ಯಾಪಾರ ಆಕ್ರೋಶಗಳು ವ್ಯಕ್ತವಾಗ್ತಿವೆ.
ಆರೋಪಿಗಳಿಗೆ ಮೊದಲ ದಿನ ಪೊಲೀಸರು ಚಿಕ್ಕಪೇಟೆ ದೊಣ್ಣೆ ಬಿರಿಯಾನಿ ನೀಡಿ ರಾಜಾತಿಥ್ಯ ನೀಡಿದ್ದರು. ಈ ಹಿನ್ನೆಲೆ ಕೊಲೆ ಮಾಡುವವರಿಗೆ ಈ ರೀತಿ ವ್ಯವಸ್ಥೆ ಮಾಡಿರುವ ಬಗ್ಗೆ ಸಾರ್ವಜನಿಮ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಸ್ಥಳ ಮಹಜರುಗೆ ಅರೋಪಿಗಳನ್ನ ಕರೆದುಕೊಂಡು ಹೋಗುವಾಗ, ಬರುವಾಗ ಮಾಧ್ಯಮಗಳಲ್ಲಿ ಆರೋಪಿಗಳು ಕ್ಯಾಮಾರದಲ್ಲಿ ಸೆರೆಯಾಗುವುದನ್ನು ತಡೆಯುವ ಪ್ರಯತ್ನ ಪೊಲೀಸರಿಂದ ನಡೆದಿದೆ. ಕೊಲೆ ಆರೋಪಿಗಳಿಗೆ ಇಷ್ಟೊಂದು ರಾಜ ಮಾರ್ಯದೆ ಯಾಕೆ ಅಂತ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ:ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್, ಅಸಭ್ಯವಾಗಿ ನಿಂದಿಸ್ತಿರೋರಿಗೆ ಧನ್ಯವಾದಗಳು..! ವಿನೀಶ್ ದರ್ಶನ್ ಭಾವುಕ ಪೋಸ್ಟ್
ಇಂದು ಠಾಣೆಯ ಸುತ್ತಮುತ್ತ ದರ್ಶನ್ ಅಭಿಮಾನಿಗಳು ಸೇರದಿದ್ರೂ, ಬ್ಯಾರಿಕೇಡ್ ಗಳನ್ನ ಹಾಕಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಅದೇನೆ ಆಗ್ಲಿ, ಈ ಬಗ್ಗೆ ಗೃಹ ಸಚಿವ್ರು ಗಮನ ಹರಿಸಬೇಕು. ದೂರು ಕೊಡಲು ಬಂದ ಸಾರ್ವಜನಿಕರಿಗೆ ಆಗ್ತಿರೋ ಸಮಸ್ಯೆ, ಮಾಧ್ಯಮಗಳನ್ನ ನಿಯಂತ್ರಿಸೋ ಈ ನಿರ್ಧಾರದಿಂದ ಹಿಂದೆ ಸರಿಯಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ