ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಕೆಲ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತನಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನೂ ಕೆಲವರು ಫೇಕ್ ಐಡಿ ಕ್ರಿಯೇಟ್ ಮಾಡಿಕೊಂಡು ಅವಾಚ್ಯ ಶಬ್ದಗಳನ್ನು ಬಳಸಿ ಇತರೆ ನಟರನ್ನು ಹಾಗೂ ಅಭಿಮಾನಿಗಳನ್ನು ನಿಂದಿಸುತ್ತಿರುತ್ತಾರೆ. 


COMMERCIAL BREAK
SCROLL TO CONTINUE READING

ದರ್ಶನ್ ಅರೆಸ್ಟ್ ಆದ ಸಂದರ್ಭದಲ್ಲಿ ದರ್ಶನ್ ಪರವಾಗಿ ಬ್ಯಾಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಲ್ಡಪ್ ಕೊಟ್ಟು ಬೇರೆಯವರನ್ನು ನಿಂದಿಸಿದ್ದ ಕೆಲ‌ ದಾಸನ ಅಭಿಮಾನಿಗಳನ್ನು ಠಾಣೆಗೆ ಕರೆಸಿ ಪೊಲೀಸರು ಬಾಲ ಕಟ್ ಮಾಡಿದ್ರು. ಆದರೆ ಇಷ್ಟಾದ್ರೂ ಬುದ್ದಿ ಕಲಿಯದ ಕೆಲ ದರ್ಶನ್ ಅಭಿಮಾನಿಗಳು ಮತ್ತೆ ಹಳೆ ವರಸೆ ಶುರು ಮಾಡಿದ್ದಾರೆ. 


ಇದನ್ನೂ ಓದಿ:ಒಂದು ನಿಮಿಷದಲ್ಲಿ ಅತಿ ಹೆಚ್ಚು ʼಕಿಸ್‌ಕೊಟ್ಟು ವಿಶ್ವದಾಖಲೆʼ ಬರೆದ ಸ್ಟಾರ್‌ ನಟಿ..! 26 ವರ್ಷಗಳ ಜೈಲು ಶಿಕ್ಷೆ..


ದೊಡ್ಮನೆ ಅಭಿಮಾನಿಯಾಗಿರುವ ಕನ್ನಡಿಗ ಯೋಗಿ ಎಂಬುವವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಯೋಗಿ ಮೊಬೈಲ್ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಡಿ ಬಾಸ್ ಅಭಿಮಾನಿಗಳ ಕೈಗೆ ಸಿಕ್ಕರೆ ನಿನ್ನನ್ನು ಮುಗಿಸಿಬಿಡ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. ಇಷ್ಟೇ ಅಲ್ಲದೇ ಫೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ತೆರೆದು ಮೆಸೇಜ್ ಮಾಡಿ ಬೆದರಿಕೆ ಹಾಕಿದ್ದಾರೆ. ಇನ್ನೂ ಯೋಗಿ ಫೋಟೋ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.


ಯೋಗಿಗೆ ರಂಗಾರೆಡ್ಡಿ, ನಾಗರಾಜ್ ದಚ್ಚು, ವಿಶ್ವಾಸ್ ವಿಶ್ವ ವಿಶು, ವೀರೇಶ್ ವೀರು, ಡಿ ಬಾಸ್ ಅಭಿಮಾನಿ, ಡಿ ಬಾಸ್ ಅಡ್ಡ, ಕಿಂಗ್ ಬಸವ ಎಂಬ ಖಾತೆಗಳಿಂದ ಮೆಸೇಜ್ ಮಾಡಿ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆ ತಮಗೆ ಬೆದರಿಕೆ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಶ್ಚಿಮ ವಿಭಾಗದ ಸೈಬರ್ ಠಾಣೆಗೆ ದೂರು ಕೊಟ್ಟಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.