ಪತ್ನಿಯ ಮನೆಯಲ್ಲಿ ದಾಸನ ವಿಶ್ರಾಂತಿ : ಮಗನ ಹುಟ್ಟು ಹಬ್ಬಕ್ಕೆ ಕಾಸ್ಟ್ಲೀ ಕಾರ್ ಗಿಫ್ಟ್
Darshan case updates : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿರುವ ನಟ ದರ್ಶನ್ ಹೊಸಕೆರೆಹಳ್ಳಿಯ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇತ್ತ ಮಧ್ಯಂತರ ಜಾಮೀನು ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಲು ಚರ್ಚೆ ನಡೆಸಿದ್ದಾರೆ. ಹಾಗಾದ್ರೆ ದರ್ಶನ್ ವಿಷಯದಲ್ಲಿ ಇವತ್ತಾಗಿರುವ ಡೆವಲಪ್ಮೆಂಟ್ ಏನೂ ಅನ್ನೋದನ್ನ ತೋರಿಸ್ತಿವಿ ನೋಡಿ.
Actor Darshan case : ದರ್ಶನ್ 142 ದಿನಗಳ ಜೈಲುವಾಸ ಕ್ಕೆ ತಾತ್ಕಾಲಿಕ ವಾಗಿ ಬ್ರೇಕ್ ಬಿದ್ದಿದೆ. ಅನಾರೋಗ್ಯದ ಕಾರಣ ನೀಡಿ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿದೆ ಎಂದು ನಿನ್ನೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆಗೆ ಬಂದು ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಮಗನ ಹುಟ್ಟುಹಬ್ಬ ಇರುವ ಕಾರಣ ಮನೆಯಲ್ಲಿ ಆಪ್ತರ ಜೊತೆ ಬರ್ತಡೆ ಸೆಲೆಬ್ರೇಷನ್ ಮಾಡಿ ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ.
ಇನ್ನೂ ಮಗನನ್ನ ನೋಡಲು ದರ್ಶನ್ ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್ ಅಪಾರ್ಟ್ಮೆಂಟ್ಗೆ ಬಂದಿದ್ರು. ಇನ್ನೂ ಆರ್ ಆರ್ ನಗರದ ಬಳಿಯಿದ್ದ ಫಾರ್ಚೂನರ್, ಲ್ಯಾಂಬರ್ಗಿನಿ, ಸೇರಿ ಐಷಾರಾಮಿ ಕಾರುಗಳನ್ನ ಸರ್ವಿಸ್ ಮಾಡಿಸಿಕೊಂಡು ಹೊಸಕೆರೆಹಳ್ಳಿಯ ವಿಜಯಲಕ್ಷ್ಮಿ ಮನೆಗೆ ಶಿಪ್ಟ್ ಮಾಡಲಾಯಿತು. ಅಲ್ಲದೆ ಮಗನ ಹುಟ್ಟು ಹಬ್ಬಕ್ಕೆ ಕಾಸ್ಟ್ಲೀ ಕಾರ್ ಗಿಫ್ಟ್ ಕೂಡ ಕೊಡಲಾಗಿದೆ.
ಇದನ್ನೂ ಓದಿ:ಅಭಿಷೇಕ್ ಬಚ್ಚನ್ ಜೊತೆ ಜಗಳ ಆದ್ರೆ ಯಾವಾಗ್ಲೂ ನಾನೇ Sorry ಕೇಳಬೇಕು… ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಮಾತು!
ಇನ್ನೂ ವಿಜಯಲಕ್ಷ್ಮಿಅಪಾರ್ಟ್ಮೆಂಟ್ ನಲ್ಲಿ ದರ್ಶನ್ ಇರುವ ಕಾರಣ ಅಭಿಮಾನಿಗಳು ದರ್ಶನ್ ನೋಡಲು ಆಗಮಿಸಿದ್ದರು. ಆದರೆ ಪೊಲೀಸರು ದರ್ಶನ್ ಅಭಿಮಾನಿಗಳನ್ನು ಅಲ್ಲಿಂದ ಕಳಿಸಿದ್ರು. ಇನ್ನೂ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗಲು ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ.
ಈಗಾಗಲೇ ಅಧಿಕಾರಿಗಳ ಜೊತೆ ನಗರ ಪೊಲೀಸ್ ಆಯುಕ್ತ ದಯಾನಂದ್ ಕೂಡ ಚರ್ಚೆ ನಡೆಸಿದ್ದಾರೆ. ಸೋಮವಾರ ಸುಪ್ರೀಂಗೆ ಅರ್ಜಿ ಸಲ್ಲಿಸೋ ಸಾಧ್ಯತೆಯಿದೆ . ಇವತ್ತಿನಿಂದ ಸೋಮವಾರ ದ ವರೆಗೂ ಕೂಡ ರಜೆಯಿದ್ದು ಸೋಮವಾರ ಅರ್ಜಿ ಸಲ್ಲಿಸೋ ಸಾಧ್ಯತೆಯಿದೆ.
ಒಟ್ಟಾರೆ ದರ್ಶನ್ ಇಂದು ಮಗನ ಹುಟ್ಟುಹಬ್ಬ ಆಚರಣೆ ಮಾಡಿ ನಾಳೆ ಜಯನಗರದ ಅಪೋಲೋ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಸಾಧ್ಯತೆ ಯಿದೆ ಎಂದು ಹೇಳಲಾಗುತ್ತಿದೆ. ಒಪಿಡಿಯಲ್ಲಿ ಚಿಕಿತ್ಸೆ ಪಡೆಯುತ್ತಾರಾ.? ಇಲ್ಲ ಆಸ್ಪತ್ರೆಗೆ ದಾಖಲಾಗುತ್ತಾರ ಎಂಬ ಕುತೂಹಲ ಎಲ್ಲರಲ್ಲೂ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ