Actor Darshan case updates : ನಟ ದರ್ಶನ್ ಸ್ಕ್ರೀನ್ ಮೇಲೆ ಬಂದ್ರೆ ಸಾಕು ಅಭಿಮಾನಿಗಳ ಅಬ್ಬರ ಹೇಳೋದೇ ಬೇಡ.ಶಿಳ್ಳೆ ಚಪ್ಪಾಳೆ ಕುಣಿತಕ್ಕೇನು ಕಡಿಮೆ ಇರಲ್ಲ. ಇದೆಲ್ಲ ಕೇವಲ ರೀಲ್ ನಲ್ಲಿ ನಟನೊಬ್ಬನ ಅಬ್ಬರ.. ಆದ್ರೆ ನಿಜ ಜೀವನದಲ್ಲಿ ಎಲ್ಲರಿಗೂ ಮಾದರಿಯಾಗಿರಬೇಕು.. ಆದ್ರೆ ಅದೇ ದರ್ಶನ್ ನಿಜ ಜೀವನದಲ್ಲಿ ವಿಲನ್ ಆಗಿಬಿಟ್ಟಿದ್ದಾನೆ. ಸಿನಿಮಾ ಮಾದರಿಯಲ್ಲೇ ರೇಣುಕಾಸ್ವಾಮಿ ಮೇಲೆ ಅಟ್ಟಹಾಸ ಮೆರೆದಿದ್ದ. ಶೆಡ್‌ನಲ್ಲಿ 50  ನಿಮಿಷ ಇದ್ದ ದಾಸ ಬಡಪಾಯಿಗೆ ನರಕ ತೋರಿಸಿದ್ದ. ಆ ಐವತ್ತು ನಿಮಿಷದ ಸೇಕ್ರೆಟ್ ಈಗ ರಿವೀಲ್ ಆಗಿದೆ.


COMMERCIAL BREAK
SCROLL TO CONTINUE READING

ಹೌದು..ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸೇರಿ 17 ಜನ ಜೈಲು ಸೇರಿದ್ದು,ಕೊಲೆಯ ಒಂದೊಂದೆ ಸತ್ಯ ಈಗ ರಿವೀಲ್ ಆಗ್ತಿದೆ.‌ ಮೊದಲು ನಾನು ರೇಣುಕಾಸ್ವಾಮಿ ಮೇಲೆ ಸಾಯೋ ರೀತಿ ಹಲ್ಲೆ ಮಾಡಿಲ್ಲ ಎರಡೇಟು ಹೊಡೆದು ಹೊರಟುಬಿಟ್ಟಿದ್ದೆ ಎಂದಿದ್ದ ನಟ ದರ್ಶನ್ ನಿಜ ಬಣ್ಣ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಜೂನ್ 8 ರ ಸಂಜೆ  4.30 ಕ್ಕೆ ಪಟ್ಟಣಗೆರೆ ಶೆಡ್ ಗೆ ವಿನಯ್ ಜೊತೆಗೆ ಎಂಟ್ರಿಯಾಗಿದ್ದ ದರ್ಶನ್ ವಾಪಸ್ಸು ತೆರಳಿದ್ದು 5.20 ಕ್ಕೆ. ಅಂದ್ರೆ 50 ನಿಮಿಷ ಶೆಡ್ ನಲ್ಲಿ ಇದ್ದಿದ್ದಕ್ಕೆ ಸಾಕ್ಷಿಯನ್ನ ಪೊಲೀಸರು ಕಲೆ ಹಾಕಿದ್ದು ಪ್ರತ್ಯಕ್ಷದರ್ಶಿಗಳು 164 ಸ್ಟೇಟ್ ಮೆಂಟ್ ನಲ್ಲಿ ಎಲ್ಲಾ ವಿಚಾರ ಹೇಳಿದ್ದಾರೆ‌‌. 


ಇದನ್ನೂ ಓದಿ:ದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯ


ಅಷ್ಟೇ ಅಲ್ಲಾ ರೇಣುಕಾಸ್ವಾಮಿ ಮೇಲೆ ನಿರಂತರ 30 ನಿಮಿಷ ದಾಸ ಹಲ್ಲೆ ಮಾಡಿದ್ದ. ಸಿನಿಮಾ ಮಾದರಿಯಲ್ಲಿ ನಟ ದರ್ಶನ್ ಕ್ರೌರ್ಯ ಮೆರೆದಿದ್ದ. ರೇಣುಕಾಸ್ವಾಮಿಯನ್ನ ನಿಂತಿದ್ದ ವಾಹನಗಳ ಮೇಲೆ ಎತ್ತಿ ಬಿಸಾಡಿದ್ದ 'ಡೆವಿಲ್' ಬೂಟು ಕಾಲಿನಲ್ಲಿ ಒದ್ದು ನರಕ ತೋರಿಸಿದ್ದ. ಇತ್ತ ಆರೋಪಿ ಪವನ್  ರೇಣುಕಾಸ್ವಾಮಿ  ಪವಿತ್ರಾಗೌಡಗೆ ಕಳುಹಿಸಿದ್ದ ಮೆಸೆಜ್ ಓದ್ತಿದ್ರೆ,ಅದೇ ಕೋಪದಲ್ಲಿ ದರ್ಶನ್ ಥಳಿಸಿದ್ದ. ಈ ಎಲ್ಲಾ ಸಂಗತಿಗಳು ಈಗ ರಿವೀಲ್ ಆಗಿದೆ. ಜೊತೆಗೆ ದರ್ಶನ್ ಕೂಡ ಪೊಲೀಸರ ಎದುರು ಸತ್ಯ ಕಕ್ಕಿದ್ದಾನೆ.


ಮೃತ ರೇಣುಕಾಸ್ವಾಮಿ ಏನು ಸಾಮಾನ್ಯದವನಲ್ಲ.ಫೆಬ್ರವರಿ ತಿಂಗಳಿನಿಂದ ಪವಿತ್ರಾ ಗೌಡಗೆ ಅಶ್ಲೀಲವಾದ ಸಂದೇಶ ಕಳುಹಿಸಲು ಶುರು ಮಾಡಿದ್ದ‌.ದರ್ಶನ್ ಸ್ನೇಹಿತೆಗೆ 200 ಮೆಸೆಜ್ ಕಳುಹಿಸಿದ್ದ ರೇಣುಕಾಸ್ವಾಮಿ ತನ್ನ ಖಾಸಗಿ ಅಂಗದ ವೀಡಿಯೋ, ಫೋಟೊ ಕೂಡ ಸೆಂಡ್ ಮಾಡಿದ್ದ. ಆತನನ್ನ ಕರೆಸಿ ಬುದ್ಧಿ ಕಲಿಸೊ ಉದ್ದೇಶ ಪವಿತ್ರಾ ಗೌಡಗೆ ಇತ್ತು..ಆದರೆ ಹಂತಕ ಪಡೆ ಆತನ ಉಸಿರನ್ನೇ ನಿಲ್ಲಿಸಿಬಿಟ್ಟಿದ್ರು.


ಇದನ್ನೂ ಓದಿ:ಒಂದು ಕಾಲದಲ್ಲಿ ಸಿನಿರಂಗದ ರಾಣಿ.. ಎರಡು ಮದುವೆ.. ಕೊನೆಗೆ ಬಡತನದಿಂದ ಸಾವಿಗೀಡಾದ ನಟಿ ಈಕೆ!!
 
ಇದೆಲ್ಲದರ ಜೊತೆಗೆ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡಗೆ ದರ್ಶನ್ ಅಭಿಮಾನಿಗಳಿಂದ ಕಿರುಕುಳ ಶುರುವಾಗಿದೆಯಂತೆ. ದರ್ಶನ್ ಪರವಾಗಿ ಮಾತನಾಡಿಲ್ಲ ಅಂತಾ ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್ ಗಳು ಬರ್ತಿವೆಯಂತೆ. ಅಲ್ಲದೇ ಸೋನು ರೀಲ್ಸ್ ಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ಕಿರುಕುಳ ನೀಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ .ಈ ಕುರಿತು ರೀಲ್ಸ್ ನಲ್ಲೆ ಸೋನು ಶ್ರೀನಿವಾಸ್ ಗೌಡ ಅಳಲು ತೋಡಿಕೊಂಡಿದ್ದಾಳೆ.


ರೇಣುಕಾಸ್ವಾಮಿ ಹತ್ಯೆಯಾಗಿ ದಿನಗಳು ಉರುಳುತ್ತಿವೆ. ಆರೋಪಿಗಳ ಜೈಲು ಪಾಲಾಗಿದ್ದಾರೆ.‌ ಈ ಮಧ್ಯೆ ಸಾವಿನ ಸುತ್ತ ಇರೋ ಒಂದೊಂದೇ ಸತ್ಯಗಳು ಹೊರಬರ್ತಿವೆ..ಅಲ್ಲಿಗೆ ನಟ ದರ್ಶನ್  ಕರಾಳ ಮುಖ ಬಟಾ ಬಯಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.