Darshan case updates : ಕಿಲ್ಲಿಂಗ್ ಸ್ಟಾರ್ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆಯಾದ ಟೈ ನಲ್ಲಿ ದಾಸ ಪಟ್ಟಣಗೆರೆ ಶೆಡ್‌ನಲ್ಲಿ ಇದ್ದ ಅನ್ನೋದಕ್ಕೆ ಪೂರಕವೆಂಬಂತೆ ಸಾಕ್ಷಿಗಳು ಸಿಕ್ಕಿವೆ. ಎಫ್ಎಸ್ ಎಲ್‌ ರಿಪೋರ್ಟ್ ನಲ್ಲಿ ರಿಟ್ರೀವ್ ‌ಆಗಿರುವ ಫೋಟೋಗಳು ದಾಸನ ಕೈಚಳಕ ಕೊಲೆಯಲ್ಲಿ ಇದೆ ಎಂಬುದನ್ನು ಸಾರಿ ಸಾರಿ‌ ಹೇಳ್ತಿವೆ. ಇತ್ತ ಖಾಕಿ ಟೀಮ್ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಪೊಲೀಸರು ಇದಕ್ಕೆ ಪೂರಕವೆಂಬಂತೆ ಗೃಹ ಸಚಿವರು ಕೂಡ ಸಾಥ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನೇರೆಡು ದಿನ, ಕೇವಲ ಎರಡು ದಿನ ಅಷ್ಟೇ ದರ್ಶನ್‌ಗೆ ಅಪರೇಷನ್ ಮಾಡಿಲ್ಲ ಅಂದ್ರೆ ಲಕ್ವಾ ಹೊಡೆಯುತ್ತೆ ಹಾಗಾಗಿ ಜಾಮೀನು ‌ನೀಡಬೇಕೆಂದು ಮಧ್ಯಂತರ ‌ಜಾಮೀನು ಪಡೆದಿದ್ದರು. ಆದ್ರೆ ಇದುವರೆಗೂ ‌ಕೂಡ ಯಾವುದೇ ‌ಅಪರೇಷನ್ ಮಾಡಿಸಿಕೊಂಡಿಲ್ಲ‌.. ಬದಲಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಷ್ಟು ‌ದಿನ ಆದ್ರೂ ಕೂಡ ವೈದ್ಯರು ಯಾಕೆ ಅಪರೇಷನ್‌ಗೆ ಕೈ ಹಾಕಿಲ್ಲ, ಡೇಟ್ ಫಿಕ್ಸ್‌ ಆಗಿಲ್ಲ, ಇದನ್ನ ನೋಡಿದ್ರೆ ಅನುಮಾನ ಶುರುವಾಗುತ್ತೆ ಮಧ್ಯಂತರ ಜಾಮೀನು ‌ರದ್ದು ಮಾಡಬೇಕೆಂದು ಮನವಿ ಸಲ್ಲಿಸುತ್ತೇವೆ ನ್ಯಾಯಾಲಯ ವ್ಯವಸ್ಥೆಯಲ್ಲಿ ತೀರ್ಮಾನ ಆಗಬೇಕು ಎಂದು ಹೋಮ್ ಮಿನಿಸ್ಟರ್ ಡಾ. ಜಿ. ಪರಮೇಶ್ವರ್‌ ಹೇಳಿಕೆ ಮತ್ತೆ ದರ್ಶನ್ ಗೆ ನಡುಕ ಶುರುವಾಗಿದೆ.


ಇದನ್ನೂಓದಿ:ನಾಗಚೈತನ್ಯ ಮದುವೆ ಅನೌನ್ಸ್‌ ಬೆನ್ನಲ್ಲೇ ಹೊಸ ಬಾಯ್‌ಫ್ರೆಂಡ್‌ ಪರಿಚಯಿಸಿದ ಸಮಂತಾ! ಖ್ಯಾತ ನಟನೊಂದಿಗೆ ಸ್ಯಾಮ್‌ ಸೆಕೆಂಡ್ ಮ್ಯಾರೇಜ್‌ ಫಿಕ್ಸ್?!‌


ರೇಣುಕಾಸ್ವಾಮಿ ಕೊಲೆಯಾದ ಸಮಯದಲ್ಲಿ ನಟ ದರ್ಶನ್ ‌ಪಟ್ಟಣಗೆರೆ ಶೆಡ್ ನಲ್ಲಿದ್ದರು ಅನ್ನೋದಕ್ಕೆ ಸಾಕ್ಷಿಗಳು ಸಿಕ್ಕಿವೆ‌. ದರ್ಶನ್ ಜೊತೆಯಲ್ಲಿದ್ದವರು ಫೋಟೊಗಳನ್ನ ತೆಗೆದಿದ್ದರು. ಅವರ ಮೊಬೈಲ್ ಗಳನ್ನ ಎಫ್‌ಎಸ್‌ಎಲ್ ಗೆ ಹೈದರಾಬಾದ್ ಗೆ ಕಳುಹಿಸಲಾಗಿತ್ತು‌. ಇದೀಗ ಫೋಟೋಗಳು ರಿಟ್ರೀವ್ ಆಗಿವೆ. ಆರೋಪಿಗಳಾದ ರಾಘವೇಂದ್ರ, ಜಗದೀಶ್ ಜೊತೆ ಇರೋ‌ ಇರೋ ಪೋಟೊಗಳನ್ನ ಸಾಕ್ಷಿಗಳನ್ನಾಗಿಟ್ಟು‌ಕೊಂಡು ಮಧ್ಯಂತರ ‌ಜಾಮೀನು ರದ್ದು ಮಾಡಬೇಕೆಂದು ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಲಾಗುವುದು. ಈಗಾಗಲೇ ನ್ಯಾಯಾಯಲಯಕ್ಕೆ 1300 ಪುಟಗಳ ಹೆಚ್ಚುವರಿ ಜಾರ್ಜ್ ಶೀಟ್ ನ್ನ‌ ಸಲ್ಲಿಸಿಲಾಗಿದೆ.


ಒಟ್ಟಾರೆ ‌ನಟ ದರ್ಶನ್ ನ್ಯಾಯಾಲಯ ಕ್ಕೆ‌ ಸುಳ್ಳು ವರದಿ ನೀಡಿದ್ರಾ ಅನ್ನೋ ಅನುಮಾನ ಮೂಡುತ್ತಿದ್ದು. ಆದಷ್ಟು ಬೇಗ ಸುಪ್ರೀಂ ‌ಕೋರ್ಟ್ ಗೆ ಕೂಡ ಮೇಲ್ಮನವಿ ಸಲ್ಲಿಸಲು ‌ಸಿದ್ದತೆಯಾಗಿದ್ದು, ಇದರಲ್ಲಿ ಯಾರಿಗೆ ಜಯ ಸಿಗುತ್ತೆ ಅಂತ ಕಾದು ನೋಡಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.