ಗಂಡ, ಮಕ್ಕಳಿಗಾಗಿ ಸ್ವರ್ವಸ್ವವನ್ನೇ ಧಾರೆಯೆರೆದ ಮೀನಾ ತೂಗುದೀಪ..! ಇಂತಹ ಮಹಾತಾಯಿ ಪುತ್ರ ದರ್ಶನ್ಗೆ ಏನಾಯ್ತು..?
Meena Thoogudeepa : ತೂಗದೀಪ ಶ್ರೀನಿವಾಸ ಅವರ ನಿಧನದ ನಂತರ ಏಕಾಂಗಿಯಾಗಿ ನಿಂತು ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಾಕಿ ಸಲುಹಿ ಪ್ರತಿಭಾವಂತರನ್ನಾಗಿ ಮಾಡಿದ್ದಾರೆ. ಕಷ್ಟ ನಷ್ಟ ಹಾದಿಯಲ್ಲಿ ಬೆಳೆದು ಗಂಡನಂತೆ ಮಕ್ಕಳೂ ಕಲಾಸೇವೆ ಮಾಡಲಿ ಅಂತ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ.
Actor Darshan Mother : ಕನ್ನಡ ಚಿತ್ರರಂಗ ಕಂಡ ಪರಿಪೂರ್ಣ ನಟರಲ್ಲಿ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು. ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಜನ ಮನ ಗೆದ್ದ ಅಪ್ರತಿಮ ಕಲಾವಿದ. ತಂದೆಯಂತೆ ಅವರ ಪುತ್ರ ದರ್ಶನ್ ಸಹ ದೊಡ್ಡ ಸ್ಟಾರ್ ನಟನಾಗಿ ಬೆಳೆದಿದ್ದಾರೆ. ಅಲ್ಲದೆ, ದಿನಕರ್ ತೂಗುದೀಪ ಅವರು ಕೂಡ ನಿರ್ದೇಶಕನಾಗಿ ಒಳ್ಳೆಯ ಖ್ಯಾತಿ ಗಳಿಸಿದ್ದಾರೆ. ಈ ಮೂವರ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದವರು ಮೀನಾ ತೂಗುದೀಪ..
1973ರ ನವೆಂಬರ್ 15ರಂದು ತೂಗುದೀಪ್ ಶ್ರೀನಿವಾಸ್ ಅವರು ಮೀನಾ ಅವರನ್ನು ಮದುವೆಯಾದರು. ಅವರಿಗೆ ದರ್ಶನ್, ದಿನಕರ್ ಹಾಗೂ ದಿವ್ಯ ಸೇರಿ ಮೂವರು ಮಕ್ಕಳು. ಈ ಮೂವರ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದವರು ಮೀನಾ ತೂಗುದೀಪ.
ಇದನ್ನೂ ಓದಿ:ವಿಜಯ್ ದೇವರಕೊಂಡ ತಂಗಿ ಯಾರು ಗೊತ್ತಾ? ಈಕೆಯೂ ಸ್ಟಾರ್ ನಟಿ! ರಶ್ಮಿಕಾಗಿಂತಲೂ ಸಖತ್ ಸ್ವೀಟ್ ಆಂಡ್ ಕ್ಯೂಟ್ ಈಕೆ
ಹೌದು.. ತೂಗದೀಪ ಶ್ರೀನಿವಾಸ ಅವರ ನಿಧನದ ನಂತರ ಏಕಾಂಗಿಯಾಗಿ ನಿಂತು ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಾಕಿ ಸಲುಹಿ ಪ್ರತಿಭಾವಂತರನ್ನಾಗಿ ಮಾಡಿದ್ದಾರೆ. ಕಷ್ಟ ನಷ್ಟ ಹಾದಿಯಲ್ಲಿ ಬೆಳೆದು ಗಂಡನಂತೆ ಮಕ್ಕಳೂ ಕಲಾಸೇವೆ ಮಾಡಲಿ ಅಂತ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ.
ತೂಗುದೀಪ್ ಶ್ರೀನಿವಾಸ್ ಅವರು ಸಕ್ಕರೆ ಕಾಯಿಲೆ ಮತ್ತು 2 ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಆಗ ಅವರಿಗೆ ಒಂದು ಕಿಡ್ನಿಯ ಅವಶ್ಯಕತೆ ಇತ್ತು. ಆದರೆ ಕಿಡ್ನಿ ಕೊಡುವವರಾಗಲಿ, ಅದಕ್ಕೆ ಹಣ ನೀಡುವಷ್ಟಾಗಲಿ ದರ್ಶನ್ ಕುಟುಂಬ ಇರಲಿಲ್ಲ. ಕೊನೆಗೆ ಮೀನಾ ಅವರು ತಮ್ಮ ಕಿಡ್ನಿಯನ್ನು ಕೊಟ್ಟು ಪತಿಯ ಜೀವ ಉಳಿಸಿಕೊಂಡಿದ್ದರು..
ತೂಗುದೀಪ ಶ್ರೀನಿವಾಸ್‌ಗೆ ತಮ್ಮ ಪತ್ನಿ ಅಂದ್ರೆ ಬಹಳ ಪ್ರೀತಿ ಅದಕ್ಕಾಗಿ ಅವರು, ಪತ್ನಿಯ ಉದ್ದನೆಯ ಕೇಶರಾಶಿಗಾಗಿ ನಿತ್ಯ ಮಲ್ಲಿಗೆ ಹೂ ತರುತ್ತಿದ್ದರು. ಶೂಟಿಂಗ್ ಮುಗಿಸಿ ಬರುವಾಗ ಪತ್ನಿಗೆ ಮಿಸ್ ಇಲ್ಲದೇ ಹೂ ತರುತ್ತಿದ್ದರಂತೆ, ಪತಿ ಹೋದ ಬಳಿಕ ತಾಯಿ ಮೀನಾ ಮಕ್ಕಳಿಗಾಗಿ ಜೀವ ಮತ್ತು ಜೀವನವನ್ನೇ ಮುಡಿಪಿಟ್ಟಿದ್ದರು. ಅಲ್ಲದೆ, ಗಂಡ ಹೋದ ಬಳಿಕ ಕೂದಲನ್ನೇ ಕತ್ತರಿಸಿ ಶಾರ್ಟ್ ಹೇರ್ ನಲ್ಲೇ ಇರುತ್ತಿದ್ದಾರೆ.
ಇದನ್ನೂ ಓದಿ:ಸಮರ್ಜಿತ್ ಲಂಕೇಶ್ ಪುತ್ರನ ಮೊದಲ ಸಿನಿಮಾ ʻಗೌರಿʼ ಸಾಂಗ್ ರಿಲೀಸ್
ಕೇಶವಮೂರ್ತಿಯವರ ನಿರ್ದೇಶನದ ‘ತೂಗುದೀಪ’ ಎಂಬ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ ತೂಗುದೀಪ ಶ್ರೀನಿವಾಸ ಎಂಬ ಹೆಸರು ಬಂತು. ಇಂದು ಈ ಹೆಸರನ್ನು ಅವರ ಮಕ್ಕಳು ಆಕಾಶದೆತ್ತರಕ್ಕೆ ಬೆಳೆಸಿದ್ದಾರೆ ಅಂದರೆ ತಪ್ಪಾಗಲಾರದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.