Dhanush 50th Film : ತಮಿಳು ಚಿತ್ರರಂಗದಲ್ಲಿ ಧನುಷ್‌ ಡಿಫ್ರೆಂಟ್‌ ಅಂತಾ ಪ್ರೂವ್‌ ಮಾಡಿದ್ದಾರೆ. ಇವರು ಮೊದಲಿನಿಂದಲೂ ಗಟ್ಟಿ ಕಂಟೆಂಟ್‌ ಇರುವ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದರು. ಹಾಗೇ ಇದಕ್ಕೆ ಅವರ ಅಭಿಮಾನಿಗಳಿಂದಲೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ಧನುಷ್‌ ಕೇವಲ ನಟನಷ್ಟೇ ಅಲ್ಲ. ಸಿಂಗರ್‌, ಕಂಪೋಸರ್‌, ಡೈರೆಕ್ಟರ್‌ ಮತ್ತು ಪ್ರೊಡ್ಯೂಸರ್‌ ಕೂಡಾ ಹೌದು. ಈ ಪ್ರತಿಭಾನ್ವಿತ ನಟ ನಟಿಸಿರೋ ಬಹುತೇಕ ಸಿನಿಮಾಗಳು ಯಶಸ್ಸನ್ನೇ ಗಳಿಸಿವೆ. ಧನುಷ್‌ ತಮಿಳು ಸಿನಿಮಾ ಮಾತ್ರವಲ್ಲದೇ ಬಾಲಿವುಡ್‌, ಹಾಲಿವುಡ್‌ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.


ಮುಡಿ ಕೊಟ್ಟ ಅನುಮಾನ ನಿಜವಾಯ್ತು. ಏನಿದು ಅಂತೀರಾ.. ನಟ ಧನುಷ್‌ ಇತ್ತೀಚೆಗೆ ತಮ್ಮ ಸಹ ಕುಟುಂಬದ ಜೊತೆಗೆ ತಿರುಪತಿಗೆ ಬೇಟಿನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಆಗಲೇ ಅವರ ಅಭಿಮಾನಿಗಳಿಗೆ ಅನುಮಾನ ಮೂಡಿತ್ತು. ಅದೇ "D50". ಈ ಸಿನಿಮಾದಲ್ಲಿ ನಟ ಧನುಷ್‌ ಮೊಟ್ಟೆ ಲುಕ್‌ನಲ್ಲಿ ಅಬ್ಬರಿಸಲಿದ್ದಾರೆಂದು ಕಾಮೆಂಟ್‌ ಮಾಡಿದ್ದರು. 


Puttakkana Makkalu : ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಬಂದ ರಾಜೀಗೆ ತಕ್ಕ ಪಾಠ ಕಲಿಸ್ತಾಳಾ ಸ್ನೇಹಾ..?


ಇನ್ನು ಮೊಟ್ಟೆಲುಕ್‌ ನಲ್ಲಿರುವ ಧನುಷ್‌ ಅವರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿತ್ತು. ಕೆಲವು ದಿನಗಳ ಹಿಂದೆ ರಿಲೀಸ್‌ ಮಾಡಲಾದ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾದ ಫಸ್ಟ್‌ ಲುಕ್‌ ಸಹ ಈ ರೀತಿ ಸೌಂಡ್‌ ಮಾಡಿರಲಿಲ್ಲ. ಆದರೆ ಇದೀಗ ಅಭಿಮಾನಿಗಳ ಊಹೆಯಂತೆ ಧನುಷ್‌ ಮೊಟ್ಟೆ ಲುಕ್‌ನಲ್ಲಿ ತಮ್ಮ 50ನೇ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.


ಧನುಷ್‌ 50ನೇ ಸಿನಿಮಾವನ್ನು ಯಾರು ನಿರ್ಮಾಣ ಮಾಡುತ್ತಾರೆ ಅನ್ನೋ ಗೊಂದಲಕ್ಕೆ ಇದೀಗ ತೆರೆಬಿದ್ದಿದೆ. ಹೌದು ಧನುಷ್‌ ತಮ್ಮ ಸಿನಿಮಾಗೇ ತಾವೇ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಇದು ಚೆನ್ನೈನಲ್ಲಿ ನಡೆಯುವ ಗ್ಯಾಂಗ್‌ಸ್ಟರ್‌ ಹಿನ್ನೆಲೆಯುಳ್ಳ ಸಿನಿಮಾ ಆಗಿದ್ದು, ಈ ಸಿನಿಮಾಗಾಗಿಯೇ ತಿರುಪತಿಗೆ ಮುಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. 


ಇದನ್ನೂ ಓದಿ-Eega: ʻಈಗʼ ಕತೆ ಹುಟ್ಟಿದ್ದೇ ರೋಚಕ.. ಸುದೀಪ್ ಸೆಲೆಕ್ಟ್ ಆಗಿದ್ದು ಹೀಗೆ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.