Dhrava sarja fan accident : ಫೆಬ್ರವರಿ 14 ರಂದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ನಡೆದ ಘಟನೆ ಬೈಕ್‌ ಅಪಘಾತದಲ್ಲಿ ನಟ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಪೃಥ್ವಿರಾಜ್‌ ಅವರು ಗಾಯಕೊಂಡು ಕೋಮಾ ಸ್ಥಿತಿಗೆ ಹೋಗಿದ್ದಾರೆ. ಇನ್ನು ಗಾಯಳು ಅಭಿಮಾನಿಯನ್ನ ನೋಡಲು ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ಧ್ರುವ ಸರ್ಜಾ ಭೇಟಿ ನೀಡಿ ಪೃಥ್ವಿರಾಜ್‌ ಅವರ ತಂದೆಗೆ ಸಾಂತ್ವಾನ ಹೇಳಿದರು. ಅಲ್ಲದೆ ಮಗನ ಆಸ್ಪತ್ರೆ ಖರ್ಚಿಗೆ ಸಾಲ ಮಾಡಿದ್ದ ತಂದೆಗೆ 5 ಲಕ್ಷ ರೂ. ನೀಡಿ ಧ್ರುವ ಆಸರೆಯಾದರು.


COMMERCIAL BREAK
SCROLL TO CONTINUE READING

 ಇನ್ನು ಬೈಕ್‌ ಅಪಘಾತದಲ್ಲಿ ಹೆಲ್ಮೆಟ್‌ ಆಕದೆ ಇದ್ದಕಾರಣ ತಲೆಗೆ ಬಲವಾದ ಪೆಟ್ಟು ಬಿದ್ದು, ಬ್ರೈನ್ ಡೆಡ್ ಅಗಿರೋದ್ರಿಂದ ಬದುಕೊ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಧ್ರುವ ಅಭಿಮಾನಿ ದೇಹದ ಅಂಗಾಗಗಳನ್ನು ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಮೇಮೊರಿಯಲ್ ಆಸ್ಪತ್ರೆಯಲ್ಲಿ ಧ್ರುವ ಅಭಿಮಾನಿಗೆ ಚಿಕಿತ್ಸೆ ನೀಡಲಾಗುತ್ತಿದೆ.  ಪೃಥ್ವಿರಾಜ್ ಧ್ರುವ ಅಪ್ಪಟ ಅಭಿಮಾನಿಯಾಗಿದ್ದು ಧ್ರುವ ಸರ್ಜ ನೋಡುವುದು ಅತನ ಕೊನೆ ಯಾಸೆಯಾಗಿತ್ತು.


ಇದನ್ನೂ ಓದಿ: ಮೆಘಾ ಶೆಟ್ಟಿ ವಿರುದ್ಧ ದರ್ಶನ್‌ ಪತ್ನಿ ಗರಂ : ʼನಾನ್‌ಸೆನ್ಸ್ʼ ತಡೆದುಕೊಳ್ಳಲ್ಲ ಎಂದ ವಿಜಯಲಕ್ಷ್ಮಿ


ಅಭಿಮಾನಿಗೆ ಆಕ್ಸಿಡೆಂಟ್ ಆದ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ಕೊಟ್ಟರು. ಈ ವೇಳೆ ಮಗನ ಆಸ್ಪತ್ರೆ ಖರ್ಚಿಗೆ ಸಾಲ ಮಾಡಿದ ಪೃಥ್ವಿ ತಂದೆ ಜಗದೀಶ್ ಅವರಿಗೆ 5 ಲಕ್ಷ ಹಣ ಕೊಟ್ಟು ಪೃಥ್ವಿ ತಂದೆ ತಾಯಿಗೆ ಧ್ರುವ ಸರ್ಜಾ ಆಸರೆಯಾದರು. ಇದೇ ವೇಳೆ ಮಾತನಾಡಿದ ಅವರು, ಫೃಥ್ವಿ ಸಂಡೇ ಬಂತು ಅಂದ್ರೆ ಬರ್ತಿದ್ರು ತುಂಬಾ ಸರಿ ಮೀಟ್ ಮಾಡಿದ್ದೀನಿ, ನೋವಾಗ್ತಿದೆ. ಅವ್ರ ತಂದೆ ತಾಯಿಗೆ ಎನ್ ಹೇಳಿ ಸಮಾಧಾನ ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಹೆಲ್ಮೆಟ್ ಹಾಕ್ಕೋಂಡು ಹೋಡಾಡಬೇಕು. ಅವ್ರ ತಂದೆ ತಾಯಿ ತುಂಬಾ ಬ್ರೇವ್ ಸ್ಟೇಪ್ ತಗೋಂಡಿದ್ದಾರೆ. ಅವ್ರ ಅಂಗಾಂಗಗಳನ್ನ ದಾನ‌ ಮಾಡಲು ಮುಂದಾಗಿದ್ದಾರೆ ಎಂದರು.


ಇದನ್ನೂ ಓದಿ: CCL 2023 : ಹೇಗಿದೆ ನೋಡಿ ಕರ್ನಾಟಕ ಬುಲ್ಡೋಜರ್ಸ್ ಆರ್ಮಿ..! ಬ್ಲೂ ಜರ್ಸಿಯಲ್ಲಿ ಕಿಚ್ಚನ ಕಿಲಾಡಿಗಳು


ಅಲ್ಲದೆ, ಎಲ್ರಿದ್ರು ಅವ್ರ ಆತ್ಮಕ್ಕೆ ಶಾಂತಿ ಸಿಗಲಿ. ದಯವಿಟ್ಟು ಎಲ್ರಿಗೂ ನಾನು ರೀಕ್ವೆಸ್ಟ್ ಮಾಡೋದೆನಂದ್ರೆ ಎಲ್ರು ಹೆಲ್ನೆಟ್ ಧರಿಸಿ ಬೈಕ್‌ ರೈಡ್‌ ಮಾಡಿ ಎಂದು ಮನವಿ ಮಾಡಿದರು. ಅಲ್ಲದೆ, ಅಜ್ಜಿನ ಆಸ್ಪತ್ರೆಯಲ್ಲಿ ನೋಡಿದ ಮೇಲೆ ಇನ್ಮುಂದೆ ಆಸ್ಪತ್ರೆಗೆ ಹೋಗೋದು ಬೇಡ ಅಂದೊಕೋಂಡಿದ್ದೇ ಅದ್ರೆ ಈಗ ಬಂದೇ. ಹೆಲ್ಮೆಟ್ ಹಾಕ್ಕೋಂಡು ಗಾಡಿ ಓಡ್ಸಿ ಅಂತ ರೀಕ್ವೆಸ್ಟ್ ಮಾಡ್ತೀನಿ. ಅವ್ರ ತಂದೆ ತಾಯಿಗೆ ಏನ್ ಹೇಳೋದು ಅಂತ ಗೋತ್ತಾಗ್ತಿಲ್ಲ ಎಂದು ಬಾವುಕರಾದರು.


ಅಭಿಮಾನಿ ಪೃಥ್ವಿರಾಜ್‌ ತಂದೆ ದೇವರಾಜ್ ಅವರು ಮಾತನಾಡಿ, ಅಣ್ಣಾವ್ರು ಬರಲಿ ಅಂತ ಕಾಯ್ತಿದ್ದೇ ಬಂದ್ರು ಅವ್ರಿಗೆ ನಾನು ಚಿರರುಣಿ, ನನ್ನ ಮಗನಿಗೆ ಅಂತ ಹೊಸ ಮನೆ ಕಟ್ಟಿದ್ದೇ ಈಗ ಅವನೇ ಇಲ್ಲ ಎಲ್ರು ಹೆಲ್ಮೆಟ್ ಧರಿಸಿಕೊಂಡು ಹೋಗಿ ಯಾರು ಈ ರೀತಿ ತಪ್ಪು ಮಾಡಬೇಡಿ ಎಂದ ತಂದೆ ದೇವರಾಜ್ ಮನವಿ ಮಾಡಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.