ರಮ್ಯಾ ಜೊತೆ ನಟಿಸಿದ್ದ ಈ ನಟನ 22 ಸಿನಿಮಾಗಳು ಫ್ಲಾಪ್.. ಕೊನೆಗೆ ಚಿತ್ರರಂಗ ಬಿಟ್ಟು ಜ್ಯೂಸ್ ಅಂಗಡಿ ತೆರೆದು ಕೋಟಿ ಕೋಟಿ ಗಳಿಸಿದ ಆ ಸ್ಟಾರ್ ಹೀರೋ ಯಾರು ಗೊತ್ತಾ!
Actor Dino Morea: ಆ ನಟನ 22 ಸಿನಿಮಾಗಳು ಫ್ಲಾಪ್.. ಕೊನೆಗೆ ಜ್ಯೂಸ್ ಅಂಗಡಿಯಿಂದ ಕೋಟಿ ಕೋಟಿ ಗಳಿಸಿದ್ದು ಹೇಗೆ.. ಆ ಸ್ಟಾರ್ ಹೀರೋ ಯಾರು ಇಲ್ಲಿದೆ ನೋಡಿ..
Actor Dino Morea: ಒಬ್ಬ ನಟ ಒಂದೇ ಬಾರಿಗೆ 23 ಸಿನಿಮಾ ಮಾಡಿದ್ದು, ಒಂದಲ್ಲ, ಎರಡಲ್ಲ.. ಅದರಲ್ಲಿ 22 ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿವೆ. ಬಳಿಕ ಸಿನಿರಂಗ ತೊರೆದ ಈ ಹೀರೋ ಜ್ಯೂಸ್ ಅಂಗಡಿ ತೆರೆದು ಕೋಟಿ ಕೋಟಿ ಗಳಿಸಿದ್ದಾನೆ.
ನಟ ಡಿನೋ ಮೋರಿಯಾ 1999 ರಲ್ಲಿ 'ಪ್ಯಾರ್ ಮೇ ಕಭಿ ಕಭಿ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದು ಗಲ್ಲಾಪೆಟ್ಟಿಗೆಯಲ್ಲಿ ಸಂಪೂರ್ಣ ಫ್ಲಾಪ್ ಆಗಿತ್ತು. ಇಷ್ಟು ದೊಡ್ಡ ಫ್ಲಾಪ್ ಆಗಿದ್ದರೂ.. ಹಿನ್ನಡೆಗಳ ಹೊರತಾಗಿಯೂ, ನಟ 2002 ರಲ್ಲಿ 'ರಾಜ್' ಎಂಬ ಥ್ರಿಲ್ಲರ್ ಮೂಲಕ ಸೂಪರ್ ಹಿಟ್ ಗಳಿಸಿದರು.
ಆ ಸಿನಿಮಾ ಡಿನೋ ಮೋರಿಯಾಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು.. ಆ ಒಂದು ಸಿನಿಮಾದಿಂದ ಒಳ್ಳೆ ಜನಪ್ರಿಯತೆ ಗಳಿಸಿದರು.. ಬಿಪಾಶಾ ಬಸು ಜೊತೆಗಿನ ಈ ಸಿನಿಮಾ ₹5 ಕೋಟಿ ಬಜೆಟ್ ನಲ್ಲಿ ತಯಾರಾಗಿದೆ. ಚಿತ್ರ ₹ 37 ಕೋಟಿ ಕಲೆಕ್ಷನ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.
ಇದು 2002 ರಲ್ಲಿ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು. ರಾಜ್ ಸಿನಿಮಾ ಯಶಸ್ಸು ಡಿನೋಗೆ ರಾತ್ರೋರಾತ್ರಿ ಸ್ಟಾರ್‌ಡಮ್ ನೀಡಿತು, ಆದರೆ ಅದನ್ನು ಉಳಿಸಿಕೊಳ್ಳುವುದು ಸವಾಲಾಗಿತ್ತು. ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ಪ್ರಿಯಾಂಕಾ ಚೋಪ್ರಾ, ಸಂಜಯ್ ದತ್ ಮತ್ತು ಇಮ್ರಾನ್ ಹಶ್ಮಿಯಂತಹ ತಾರೆಯರೊಂದಿಗೆ ನಟಿಸಿದ್ದರೂ ಸಹ ಡಿನೋ 22 ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ನಟಿ ರಚಿತಾ ರಾಮ್-ಶ್ರೀನಗರ ಕಿಟ್ಟಿ ಅಭಿನಯದ ʼಸಂಜು ವೆಡ್ಸ್ ಗೀತಾ 2′ ರಿಲೀಸ್ ಡೇಟ್ ಫಿಕ್ಸ್!
ಬಾಲಿವುಡ್ ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟರು. ಕೊನೆಗೆ ಡಿನೋ ಮೋರಿಯಾ ದಕ್ಷಿಣ ಭಾರತದ ಚಿತ್ರಗಳತ್ತ ಬಂದರು. ನಟ ಡಿನೋ ಮೋರಿಯಾ ಕನ್ನಡದಲ್ಲಿ ನಟಿ ರಮ್ಯಾ ಜೊತೆ ಜೂಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಅಂದುಕೊಂಡಂತೆ ಚಿತ್ರಗಳು ಬರಲಿಲ್ಲ.. ಹಾಗಾಗಿ ಸಿನಿಮಾಗಳಿಂದ ದೂರ ಉಳಿದ ಡಿನೋ ಉದ್ಯಮಿಯಾಗಿ ಸೂಪರ್ ಸಕ್ಸಸ್ ಪಡೆದರು.
2012 ರಲ್ಲಿ, ಅವರು ಕ್ರಿಕೆಟ್ ಐಕಾನ್ ಎಂಎಸ್ ಧೋನಿ ಅವರೊಂದಿಗೆ ಕೂಲ್ ಮಾಲ್ ಎಂಬ ಮರ್ಚಂಡೈಸಿಂಗ್ ಕಂಪನಿಯನ್ನು ಸ್ಥಾಪಿಸಿದರು. ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುತ್ತಾ, ಡಿನೋ ಕ್ಲಾಕ್‌ವೈಸ್ ಫಿಲ್ಮ್ಸ್ ಎಂಬ ತನ್ನದೇ ಸ್ವಂತ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದರು. ಜಿಸ್ಮ್ 2 ಚಲನಚಿತ್ರವನ್ನು ನಿರ್ಮಿಸಿದರು. 2018 ರಲ್ಲಿ ಮಿಥಿಲ್ ಲೋಧಾ ಮತ್ತು ರಾಹುಲ್ ಜೈನ್ ಅವರೊಂದಿಗೆ ಕೋಲ್ಡ್ ಪ್ರೆಸ್ಡ್ ಜ್ಯೂಸ್ ಬ್ರ್ಯಾಂಡ್ ದಿ ಫ್ರೆಶ್ ಪ್ರೆಸ್ ಅನ್ನು ಸ್ಥಾಪಿಸಿದರು.
ಬ್ರ್ಯಾಂಡ್ ಉತ್ತಮ ಮನ್ನಣೆಯನ್ನು ಗಳಿಸಿತು. ಗುಜರಾತ್, ರಾಜಸ್ಥಾನ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ವಿಸ್ತರಣೆಗಳನ್ನು ಯೋಜಿಸಿದೆ. ಇಂದು ಡಿನೋ ಮೋರಿಯಾ 150 ಕೋಟಿ ರೂಪಾಯಿಗಳ ಒಡೆಯನಾಗಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.