ವರ್ಷಗಳ ನಂತರ ಸ್ಟಾರ್ ನಟನ ದಾಂಪತ್ಯದಲ್ಲಿ ಬಿರುಕು! ಪ್ರತ್ಯೇಕ ವಾಸ, ಪತ್ನಿಯ ಜೊತೆಯಲ್ಲಿದ್ದಂತೆ ಜಗತ್ತಿನ ಮುಂದೆ ನಟನೆ!
Actor Govindha: ಇತ್ತೀಚೆಗಂತೂ ಸಿನಿಮಾ ಇಂಡಸ್ಟ್ರಿ ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ, ಪ್ರೀತಿಸಿ ಸಂಗಾತಿಯ ಜೊತೆ ಸಾಯುವ ವೆರಗು ಜೊತೆಗಿರಬೆಕು ಎಂದು ಮದುವೆಯಾದ ಜೋಡಿಗಳು, ಅರ್ಧದಲ್ಲೆ ಮನಸ್ಥಾಪಗಳಿಂದ ದಾಂಪತ್ಯ ಮುರಿದುಕೊಂಡ ದೂರವಾಗುತ್ತಾರೆ. ಇದೀಗ ಅಂತಹದ್ದೆ ಒಂದು ಸುದ್ದಿ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.
Actor Govindha: ಇತ್ತೀಚೆಗಂತೂ ಸಿನಿಮಾ ಇಂಡಸ್ಟ್ರಿ ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ, ಪ್ರೀತಿಸಿ ಸಂಗಾತಿಯ ಜೊತೆ ಸಾಯುವ ವೆರಗು ಜೊತೆಗಿರಬೆಕು ಎಂದು ಮದುವೆಯಾದ ಜೋಡಿಗಳು, ಅರ್ಧದಲ್ಲೆ ಮನಸ್ಥಾಪಗಳಿಂದ ದಾಂಪತ್ಯ ಮುರಿದುಕೊಂಡ ದೂರವಾಗುತ್ತಾರೆ. ಇದೀಗ ಅಂತಹದ್ದೆ ಒಂದು ಸುದ್ದಿ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.
ಹೌದು, ಬಾಲಿವುಡ್‌ನ ಖ್ಯಾತ ನಟ ಗೋವಿಂದು ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಈ ಕುರಿತು ಸೆಲೆಬ್ರಿ ಒಬ್ಬರು ಕೂಡ ಮಾತನಾಡಿ, ನಟ ಗೋವಿಂದು ಮೇಲ್ನೊಟಕ್ಕೆ ಮಾತ್ರ ತನ್ನ ದಾಂಪತ್ಯ ಚೆನ್ನಾಗಿ ಇರುವಂತೆ ತೋರಿಸಿಕೊಳ್ಳುತ್ತಾನೆ, ಆದರೆ ನಿಜವಾಗಿಯೂ ಅವರ ಜೀವನ ಸರಿಯಿಲ್ಲ ಎಂದು ಹೇಳಿದ್ದರು. ಆದರೆ, ಅದನ್ನು ಯಾರು ಕೂ ನಂಬಿರಲಿಲ್ಲ, ಪತಿ-ಪತ್ನಿ ಅನ್ಯೂನ್ಯವಾಗಿಯೇ ಇದ್ದಾರೆ ಎಂದು ಜನ ಈ ಸುದ್ದಿಯನ್ನು ಅಲ್ಲಗೆಳೆದಿದ್ದರು.
ಆದರೆ, ಇದೀಗ ಈ ಸುದ್ದಿ ನಿಜವಾಗಿದೆ, ಇದನ್ನು ಸ್ವತಃ ನಟ ಗೋವಿಂದ್ ಅವರ ಪತ್ನಿಯೇ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಹೌದು, ನಟ ಗೋವಿಂದ್ ಅವರ ಪತ್ನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಎಲ್ಲಾ ಪತ್ನಿಯರಂತೆ ನನಗೂ ನನ್ನ ಪತಿಯನ್ನು ಕಂಡರೆ ಅಭದ್ರತೆ ಇದೆ ಎಂದು ಗೋವಿಂದ್ ಅವರ ಪತಿ ಹೇಳಿಕೊಂಡಿದ್ದಾರೆ.
ಅಷ್ಟೆ ಅಲ್ಲ, ಇನ್ನೂ ಮುಂದೆ ಮಾತನಾಡಿದ ಅವರು, "ನಾನು ಗೋವಿಂದ್ ಅವರೊಂದಿಗೆ ಸಮಯ ಕಳೆಯಲು ಭಯಸುತ್ತೇನೆ, ಅವರ ಜೊತೆ ಸಣ್ಣ ಪುಟ್ಟ ಕೆಲಸದಲ್ಲಿ ಪಾಲು ತೆಗೆದುಕೊಳ್ಳಲು ಇಚ್ಚಿಸುತ್ತೇನೆ, ಆದರೆ ಗೋವಿಂದ್ ಮಾತ್ರ ತನ್ನ ಕೆಲಸಗಳಲ್ಲಿ ನಿರತನಾಗಿರುತ್ತಾನೆ, ನನಗೆ ಸ್ವಲ್ಪವೂ ಸಮಯ ಕೊಡುವುದಿಲ್ಲ. ಮುಂದಿನ ಜನ್ಮದಲ್ಲಿ ನೀನು ನನ್ನ ಗಂಡನಾಗಬೇಡ ಎಂದು ಸಾಕಷ್ಟು ಭಾರಿ ನಾನು ಗೋವಿಂದ್‌ಗೆ ಹೇಳಿದ್ದೇನೆ" ಎಂದಿದ್ದಾರೆ.
ಅಷ್ಟೆ ಅಲ್ಲ ಮುಂದಕ್ಕೆ ಮಾತನಾಡಿದ ಸುನಿತಾ " ನಟ ಗೋವಿಂದ್ ಅವರಿಂದ ನಾನು ಒಂಟಿತನವನ್ನು ಅನುಭವಿಸುವಂತೆ ಆಗಿದೆ, ನಮ್ಮ ಇಬ್ಬರ ಜೀವನ ಶೈಲಿ ತೀರಾ ವಿಭಿನ್ನವಾಗಿ ಹೋಗಿದೆ. ನಾನು ರಾತ್ರಿ ಮಲಗುವಾಗ, ಗೋವಿಂದ್ ಎಚ್ಚರವಾಗುತ್ತಾನೆ, ಇದೇ ಕಾರಣದಿಂದಾಗಿ ನಾವಿಬ್ಬರು ಜೊತೆಯಾಗಿ ವಾಸ ಮಾಡುತ್ತಿಲ್ಲ, ಪ್ರತ್ಯೇಕ ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ." ಎಂದಿದ್ದಾರೆ.
ಗೋವಿಂದ ಅವರ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಅವರ ಸಂಬಂಧದ ಬಗ್ಗೆ ಆಗಾಗ್ಗೆ ವದಂತಿಗಳು ಬರುತ್ತಿದ್ದವು, ಆದರೆ ಆ ಸಮಯದಲ್ಲಿ ಅವರು ಈ ವಿಷಯಗಳಿಂದ ತಲೆಕೆಡಿಸಿಕೊಳ್ಳಲಿಲ್ಲ, ಆದರೆ ಈಗ ಗೋವಿಂದ 60 ವರ್ಷಕ್ಕೆ ಕಾಲಿಟ್ಟಿದ್ದರಿಂದ ಅವರು ಚಿಂತಿಸಲಾರಂಭಿಸಿದ್ದಾರೆ ಎಂದು ಸುನೀತಾ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಚಿಕ್ಕವನಿದ್ದಾಗ ಅಫೇರಿಗೆ ಸಮಯ ಸಿಗುತ್ತಿರಲಿಲ್ಲ, ಈಗ ಬಿಡುವಿದ್ದ ಕಾರಣ ಹೆದರಿ ಏನು ಮಾಡಬೇಕೆಂದು ತೋಚುತ್ತಿಲ್ಲ, ಎಂದಿದ್ದಾರೆ ಸುನಿತಾ. ಸದ್ಯ ಈ ಮಾತುಗಳನ್ನು ಕೇಳಿದ ನಂತರ ಅನೇಕರು ನಟ ಗೋವಿಂದ್ ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ದಂಪತಿಯಾಗಿದ್ದು ಪ್ರತ್ಯೇಕ ಮನೆಗಳಲ್ಲಿ ವಾಸ ಅದೆಷ್ಟು ಸೂಕ್ತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ, ಇನ್ನೂ ಇಷ್ಟೆಲ್ಲಾ ಅನುಭವಿಸುವುದಕ್ಕೆ ಬದಲು ನೀವು ವಿಚ್ಛೇದನ ಪಡೆದುಕೊಳ್ಳುವುದು ಉತ್ತಮ ಎಂದು ಸುನಿತಾ ಅವರು ನೆಟ್ಟಿಗರು ಕೆಲವರು ಸಲಹೆ ನೀಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.