ಬೆಂಗಳೂರು: ಕನ್ನಡ ಚಿತ್ರ ರಂಗದ ನಿರ್ದೇಶಕ ಎ.ಆರ್.ಬಾಬು ಅವರ ನಿಧನಕ್ಕೆ ನಟ ಜಗ್ಗೇಶ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಎ.ಆರ್.ಬಾಬು ನನ್ನ ಆತ್ಮೀಯ ಸಹೋದರ ನಿರ್ದೇಶಕ. ನಾವಿಬ್ಬರು 'ಯಾರದ್ದೋ ದುಡ್ಡು ಕಾಸಿದ್ದವನೇ ಬಾಸ್' ಕಾರ್ಯಕ್ರಮವನ್ನು ಒಟ್ಟಿಗೆ ಮಾಡಿದ್ದೆವು. ಕನ್ನಡ ಚಿತ್ರಂಗಕ್ಕೆ ಪ್ರೇಂ ಅವರನ್ನು ನಿರ್ದೇಶಕನಾಗಿ ಪರಿಚಯಿಸಿದ್ದೇ ಬಾಬು ಅವರು. ನಮ್ಮಿಬ್ಬರದು 30 ವರ್ಷಗಳ ಗೆಳೆತನ. ಇಂದು ಅವರಿಲ್ಲ ಎಂಬ ಸುದ್ದಿ ಬಹಳ ನೋವುಂಟುಮಾಡಿದೆ. ನೋವಿನಿಂದಲೇ ಮಿತ್ರನಿಗೆ ವಿದಾಯ ಹೇಳುತ್ತಿದ್ದೇನೆ" ಎಂದು ಜಗ್ಗೇಶ್ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.



ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಎ.ಆರ್.ಬಾಬು ಅವರು ಮಂಗಳವಾರ ಮುಂಜಾನೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 56 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು. 


ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರಿಗೆ ಗುರುವಾಗಿದ್ದ ಬಾಬು ಅವರು, 'ಹಲೋ ಯಮ', 'ಚಮ್ಕಾಯಿಸಿ ಚಿಂದಿ ಉಡಾಯ್ಸಿ', 'ಸಪ್ನೋಂಕಿ ರಾಣಿ', ಕೂಲಿ ರಾಜ, ಖಳನಾಯಕ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಸೇರಿದಂತೆ ಹಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.