200 ವರ್ಷದ ಹಿಂದೆ ಹಿರಿಯರು ನೆಟ್ಟ ಊರ್ಗಲ್ಲಿನ ಮುಂದೆ ಜನ್ಮಾಂತರ ಸಂಬಂಧ ಸ್ಮರಿಸಿದ ನಟ ಜಗ್ಗೇಶ್
ಜಗ್ಗೇಶ್ ಎಂದರೆ ನಮಗೆ ನೆನಪಾಗೋದು ಯಾವಾಗಲೂ ತಮ್ಮ ನವರಸಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುವ ರೀತಿ. ಜೊತೆಗೆ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು ಆಗಿರುವ ಜಗ್ಗೇಶ್ ಅವರಿಗೆ ಅಧ್ಯಾತ್ಮದ ಮೇಲೆಯೂ ಕೂಡ ಅಷ್ಟೇ ಒಲವೂ. ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಈಗ ತಮ್ಮ ವಂಶದ ಇತಿಹಾಸದ ಬಗೆಗಿನ ನೆನಪುಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬೆಂಗಳೂರು: ಜಗ್ಗೇಶ್ ಎಂದರೆ ನಮಗೆ ನೆನಪಾಗೋದು ಯಾವಾಗಲೂ ತಮ್ಮ ನವರಸಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುವ ರೀತಿ. ಜೊತೆಗೆ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು ಆಗಿರುವ ಜಗ್ಗೇಶ್ ಅವರಿಗೆ ಅಧ್ಯಾತ್ಮದ ಮೇಲೆಯೂ ಕೂಡ ಅಷ್ಟೇ ಒಲವೂ. ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಈಗ ತಮ್ಮ ವಂಶದ ಇತಿಹಾಸದ ಬಗೆಗಿನ ನೆನಪುಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಟ್ವಿಟ್ಟರ್ ನಲ್ಲಿ ಊರ್ಗಲ್ಲಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡಿರುವ ಅವರು " 200ವರ್ಷದ ಹಿಂದೆ ನನ್ನ ಮುತ್ತಾತಂದಿರು ನೆಟ್ಟ ಊರ್ಗಲ್ಲು..ಯಾರೆ ಮದುವೆಯಾದರು ಈ ಕಲ್ಲು ದಾಟಿ ಹೋಗುವುದು ಸಂಪ್ರದಾಯ..ಅವರ ಗೌರವದ ನೆನಪಿಗೆ ನಾನು ಪರಿಮಳ ಅದರ ಮುಂದೆ ನಿಂತು ವಂಶೀಕರ ಆಶೀರ್ವಾದ ಪಡೆದವು.. ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ಫೋಟೋದಲ್ಲಿ "400ವರ್ಷದ ಹಿಂದೆ ನಿರ್ಮಿಸಿದ ಭೈರವ ಆಲಯದ ಕಂಬದ ಮೇಲೆ ನನ್ನ ವಂಶಜರ ಚಿತ್ರ..ಅದರ ಮುಂದೆ ನಾವು ದಂಪತಿಗಳು ಕುಳಿತಾಗ ಜನ್ಮಾಂತರ ಸಂಬಂಧ ನಮ್ಮದು ಅನ್ನಿಸಿತು..ಇಂದು ನನ್ನ ಸ್ವಗ್ರಾಮದಲ್ಲಿ ನಾವು.." ಎಂದು ಹೇಳಿಕೊಂಡಿದ್ದಾರೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದು ದೊಡ್ಡವರಾದರು ಕೂಡ ನಮ್ಮ ಊರಿನ ಪ್ರೀತಿ, ವಂಶದ ಇತಿಹಾಸ ಅಂತ ಬಂದಾಗ ಎಂತಹ ಮನುಷ್ಯನಿಗೂ ಕೂಡ ನೆಮ್ಮದಿಯ ಭಾವ ಉಕ್ಕಿ ಬರುತ್ತದೆ.ಈಗ ಈ ಇಬ್ಬರು ದಂಪತಿಗಳ ಫೋಟೋ ನೋಡಿದಾಗ ಅಂತದ್ದೇ ನೆಮ್ಮದಿಯ ಸಂತೃಪ್ತ ಭಾವ ಇಬ್ಬರಲ್ಲಿಯೂ ಇದೆ.