ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ ಜಾವೇದ್ ಜಾಫ್ರಿ..! ಕಾರಣ?
ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಓರ್ವ ಬಳಕೆದಾರ, ಸದ್ಯ ಇರುವ ಪರಿಸ್ಥಿತಿ ಸುಧಾರಿಸಲು ನಾವು ಫೈಟ್ ಬ್ಯಾಕ್ ಮಾಡಬೇಕು ಎಂದಿದ್ದ. ಇದೊಂದು ದೀರ್ಘ ಹೋರಾಟವಾಗಿದ್ದು, ಇದಕ್ಕಾಗಿ ನಾವು ರಸ್ತೆಗಿಳಿಯಬೇಕು, ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಕು ಎಂದಿದ್ದ. ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯಿಸಿದ್ದ ಇನ್ನೋರ್ವ ಟ್ವಿಟ್ಟರ್ ಬಳಕೆದಾರ ಟ್ರೋಲ್ ಮಾಡುವವರನ್ನು ಬ್ಲಾಕ್ ಮಾಡಬೇಕು ಹಾಗೂ ಅವರನ್ನು ಕಡೆಗಣಿಸಬೇಕು ಎಂದಿದ್ದ.
ನವದೆಹಲಿ: ಬಾಲಿವುಡ್ ನಟ ಜಾವೇದ್ ಜಾಫ್ರಿ ಯಾವಾಗಲು ಸಾಮಾಜಿಕ ಜಾಲತಾಣಗಳ ಮೇಲೆ ಅಂಜದೆ ಮತ್ತು ಅಳುಕತೆ ಯಾವುದೇ ಒಂದು ವಿಷಯದ ಮೇಲೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಹೀಗಾಗಿ ಹಲವು ಬಾರಿ ಅವರು ಟ್ವಿಟರ್ಥಿಗಳಿಂದ ಟ್ರೋಲ್ ಗೂ ಕೂಡ ಒಳಗಾಗುತ್ತಾರೆ. ಇದರಿಂದ ಬೇಸತ್ತ ಜಾವೇದ್ ಜಾಫ್ರಿ ತಾವು ಸಾಮಾಜಿಕ ಮಾಧ್ಯಮಗಳನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಮಾಡಿರುವ ಟ್ವೀಟ್ ಹಲವರ ಗಮನ ಸೆಳೆದಿದೆ. ಈ ಕುರಿತು ಸ್ವತಃ ಜಾವೇದ್ ಜಾಫ್ರಿ ಅವರೇ ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣಗಳನ್ನು ತ್ಯಜಿಸುವುದಾಗಿ ಘೋಷಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿದ್ದ ಜಾವೇದ್ ಜಾಫ್ರಿ ತಮ್ಮ ಪಾಲಿಗೆ ದೇಶ ಎಂದರೆ ಭಾರತ ಎಂದು ಹೇಳಿದ್ದರು. ಅಷ್ಟೇ ಅಲ್ಲ ಇನ್ಮುಂದೆ ದ್ವೇಷ ಹಾಗೂ ಟ್ರೋಲಿಂಗ್ ಗಳನ್ನು ಹೆಚ್ಚಿಗೆ ಸಹಿಸುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆ ಬರುವವರೆಗೆ ತಾವು ಸಾಮಾಜಿಕ ಮಾಧ್ಯಮಗಳಿಂದ ದೂರ ಸರೆಯುತ್ತಿರುವುದಾಗಿ ಹೇಳಿದ್ದರು. ಜೊತೆಗೆ ಎಲ್ಲವೂ ಶೀಘ್ರವೇ ಸರಿಯಾಗಲಿದೆ ಎಂಬ ಆಶಾಭಾವ ಕೂಡ ವ್ಯಕ್ತಪಡಿಸಿ, ಇನ್ಷಾಅಲ್ಲಾಹ್ ನನ್ನ ಪಾಲಿಗೆ ಭಾರತ ಮೊದಲು.. ಜೈ ಹಿಂದ್ ಎಂದಿದ್ದರು. ಬಳಿಕ ಜಾವೇದ್ ಜಾಫ್ರಿ ಅವರಿಗೆ ಸಲಹೆಗಳ ಮಹಾಪೂರವೇ ಎದುರಾಗಿದೆ. ಜೊತೆಗೆ ಅವರನ್ನು ಟ್ರೋಲ್ ಮಾಡುವವರ ಸಂಖ್ಯೆಯಲ್ಲಿಯೂ ಕೂಡ ಹೆಚ್ಚಳವಾಗಿದೆ.
ಇದಕ್ಕೆ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರ, ಸದ್ಯ ಇರುವ ಪರಿಸ್ಥಿತಿ ಸುಧಾರಿಸಲು ನಾವು ಫೈಟ್ ಬ್ಯಾಕ್ ಮಾಡಬೇಕು ಎಂದಿದ್ದ. ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯಿಸಿದ್ದ ಮತ್ತೊರ್ವ ಟ್ವಿಟ್ಟರ್ ಬಳಕೆದಾರ ಟ್ರೋಲ್ ಮಾಡುವವರನ್ನು ಬ್ಲಾಕ್ ಮಾಡಬೇಕು ಹಾಗೂ ಅವರನ್ನು ಕಡೆಗಣಿಸಬೇಕು ಎಂದಿದ್ದ.
ಮತ್ತೋರ್ವ ಬಳಕೆದಾರ ನಾವೂ ಕೂಡ ಟ್ರೊಲ್ ಗೆ ಒಳಗಾಗುತ್ತೇವೆ. ಹೋರಾಟದಿಂದ ನಮ್ಮ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತದೆ ಎಂದಿದ್ದಾನೆ. ನಕಾರಾತ್ಮಕ ಟ್ವೀಟ್ ಮಾಡಿರುವ ಕೆಲ ಬಳಕೆದಾರರು ಜಾವೇದ್ ಜಾಫ್ರಿ ಅವರ ಮೇಲೆ ಯುವಕರನ್ನು ದಾರಿತಪ್ಪಿಸಿದ ಆರೋಪ ಮಾಡಿದ್ದಾರೆ. ಮತ್ತೋರ್ವ ಧೈರ್ಯದಿಂದ ಇರಿ..ಎಂದು ಪ್ರತಿಕ್ರಿಯಿಸಿದ್ದಾನೆ.