Komal Rolex movie poster : ಸ್ಯಾಂಡಲ್‌ವುಡ್‌ನಲ್ಲಿ ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ನಟನೆಯ ಮುಂಬರುವ ʼರೋಲೆಕ್ಸ್‌ʼ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ನಟ ಕೋಮಲ್‌ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದೆ.


COMMERCIAL BREAK
SCROLL TO CONTINUE READING

ಹೌದು.. ಇತ್ತೀಚಿಗೆ ʼರೋಲೆಕ್ಸ್‌ʼ ಎಂಬ ಶಬ್ದ ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿತ್ತು. ಅದೇ ಹೆಸರನ್ನು ಇಟ್ಟುಕೊಂಡು ಕೋಮಲ್ ತರೆ ಮೇಲೆ ಬರಲು ರೆಡಿಯಾಗಿದ್ದಾರೆ. ಇಂದು ಸೆನ್ಸೇಷನಲ್‌ ಸ್ಟಾರ್‌ ಬರ್ತ್‌ಡೇ ಅದಕ್ಕಾಗಿ ಚಿತ್ರತಂಡ ‘ರೋಲೆಕ್ಸ್’ ಸಿನಿಮಾದ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ವಿಶ್‌ ಮಾಡಿದೆ.


ಇದನ್ನೂ ಓದಿ: ಶ್ರೀದೇವಿಗೆ ಕಠಿಣ ಸ್ಪರ್ಧೆ ನೀಡಿದ 90 ರ ದಶಕದ ಈ ನಟಿ ಯಾರು ಗುರುತಿಸಬಲ್ಲಿರಾ?


ಇನ್ನು ಪೋಸ್ಟರ್‌ನಲ್ಲಿ ಕೋಮಲ್‌ ಸೂಟು ಬೂಟೂ ತೊಟ್ಟು ಸಖತ್‌ ಸ್ಟೈಲೀಶ್ ಲುಕ್ ಕಾಣಿಸಿಕೊಂಡಿದ್ದಾರೆ. ‘ರೋಲೆಕ್ಸ್’ಗೆ ‘ಬಿಲ್ ಗೇಟ್ಸ್’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಆಕ್ಷನ್ ಕಟ್ ಹೇಳಿದ್ದಾರೆ. ಕೋಮಲ್‌ಗೆ ಜೋತೆಯಾಗಿ ಪಂಚತಂತ್ರ ಬ್ಯೂಟಿ ಸೋನಲ್ ಮೊಂಟೆರೋ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 


ʼಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ʼ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಕನ್ನಡದ ಖ್ಯಾತ ನಟರಾದ ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಸ್ಟಾರ್‌ ಕಲಾವಿದರ ದಂಡು ಈ ಸಿನಿಮಾದಲ್ಲಿದೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ʼರೋಲೆಕ್ಸ್‌ʼ ಚಿತ್ರಕ್ಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.