Mahesh Babu Statement : ಮಹೇಶ್ ಬಾಬು ಅವರ ಗುಂಟೂರು ಕಾರಂ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶಿಸಿದ್ದಾರೆ. ಹಲವು ನಿರೀಕ್ಷೆಗಳ ನಡುವೆ ಸಂಕ್ರಾಂತಿಯಂದು ಜನವರಿ 12 ರಂದು ಬಿಡುಗಡೆಯಾದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ರೇಂಜ್ ತಲುಪುತ್ತಿಲ್ಲ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಮಹೇಶ್ ಬಾಬು ಈ ಚಿತ್ರದ ಪ್ರಚಾರವನ್ನು ಹೆಚ್ಚಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ಮಹೇಶ್ ಬಾಬು ನೀಡಿರುವ ಇತ್ತೀಚಿನ ಸಂದರ್ಶನ ಎಲ್ಲರ ಗಮನ ಸೆಳೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ವಿಯೆಟ್ನಾಂ ಪ್ರವಾಸ, ಎಂಗೇಜ್ಮೆಂಟ್‌ ವದಂತಿ ಬೆನ್ನಲ್ಲೇ ಇಂಥದ್ದೊಂದು ಸುದ್ದಿ! 


ಚಿತ್ರಕ್ಕೆ ಸಾಮಾನ್ಯ ಪ್ರೇಕ್ಷಕರಿಂದ ನೆಗೆಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಆದರೆ ಮಹೇಶ್ ಬಾಬು ಅಭಿಮಾನಿಗಳಿಗೆ ಈ ಚಿತ್ರದಲ್ಲಿನ ಮಹೇಶ್ ಬಾಬು ಪಾತ್ರ ಮನ ಮುಟ್ಟಿದೆ. ಮಹೇಶ್ ಬಾಬು ಅವರ ನೃತ್ಯ ಎಲ್ಲರನ್ನು ಆಕರ್ಷಿಸದೆ. ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಹೇಳಿದಂತೆ ಈ ಸಿನಿಮಾದಲ್ಲಿ ತ್ರಿವಿಕ್ರಮ್ ಹೊಸ ಮಹೇಶ್ ಬಾಬು ಅವರನ್ನು ತೋರಿಸಿದ್ದಾರೆ. 


ಇದೇ ವಿಷಯದ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಹೇಶ್ ಬಾಬು ಮಾತನಾಡಿದ್ದು, ಚಿತ್ರ ಆರಂಭಿಸಿದಾಗ ನಾನು ಮತ್ತು ತ್ರಿವಿಕ್ರಮ್ ಒಂದು ವಿಷಯದ ಬಗ್ಗೆ ದೃಢವಾಗಿ ಫಿಕ್ಸ್ ಆಗಿದ್ದೆವು. ಈ ಚಿತ್ರದಲ್ಲಿ ಒಂದೋ ಎರಡೋ ಹಾಡುಗಳನ್ನಾದರೂ ಮಾಡೋಣ ಎಂದುಕೊಂಡಿದ್ದೆವು. ಯಾಕೆಂದರೆ.. ಈ ಚಿತ್ರದ ನಂತರ ಮತ್ತೆ ಪ್ರಾದೇಶಿಕ ಸಿನಿಮಾ ಮಾಡುವ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಇದು ನನ್ನ ಕೊನೆಯ ತೆಲುಗು ಚಿತ್ರವಾಗಿರಬಹುದು. ಹಾಗಾಗಿ ಮತ್ತೆ ನಮ್ಮ ತೆಲುಗು ಮಾಸ್ ಹಾಡುಗಳಿಗೆ ಕುಣಿಯಲು ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಹಾಗಾಗಿಯೇ ಈ ಸಿನಿಮಾದಲ್ಲಿ ಡ್ಯಾನ್ಸ್‌ ಮಾಡಬೇಕು ಅಂದುಕೊಂಡೆ ಎಂದು ಮಹೇಶ್ ಬಾಬು ಹೇಳಿದ್ದಾರೆ.


ಇದನ್ನೂ ಓದಿ: Bigg Boss ಶೋನಲ್ಲಿ ಖ್ಯಾತ ಕಿರುತೆರೆ ನಟಿಯ ಸಂಸಾರದ ಗುಟ್ಟು ರಟ್ಟು.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.