Mammootty mother died : ಸೌತ್ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಫಾತಿಮಾ ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಇಸ್ಮಾಯಿಲ್ ಅವರು ಕೊಚ್ಚಿಯ ಚೆಂಪುವಿನ ಮೂಲದವರಾಗಿದ್ದಾರೆ. ನಟ ಮಮ್ಮುಟ್ಟಿ ಸೇರಿದಂತೆ ಅವರ ಐವರು ಒಡಹುಟ್ಟಿದವರನ್ನು ಅಗಲಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ಸಂಜೆ 4:00 ಗಂಟೆಗೆ ಚೆಂಪು ಜುಮಾ ಮಸೀದಿ ಕಬ್ರಿಸ್ತಾನ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅವರು ನಟ ಇಬ್ರಾಹಿಂ ಕುಟ್ಟಿ, ಜಕಾರಿಯಾ, ಅಮೀನ, ಸೌದಾ ಮತ್ತು ಶಫೀನಾ ಸೇರಿದಂತೆ ತಮ್ಮ ಮಕ್ಕಳನ್ನು ಅಗಲಿದ್ದಾರೆ. ಇನ್ನು ಶಶಿ ತರೂರ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡು, ಮಮ್ಮುಟ್ಟಿ ತಾಯಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಚಿತ್ರರಂಗ ಸೇರಿದಂತೆ ಹಲವು ರಾಜಕೀಯ ಗಣ್ಯ ವ್ಯಕ್ತಿಗಳು ಸಹ ಸಂತಾಪ ಸೂಚಿಸುತ್ತಿದ್ದಾರೆ.


ಇದನ್ನೂ ಓದಿ: ಸಾವಿನ ಸನಿಹದಲ್ಲಿದ್ದೇನೆ ! ಕೊನೆ ಆಸೆ ಈಡೇರಿಸಲು ಸಹಕರಿಸಿ ಎನ್ನುವ ಯುವತಿಯ ಬೇಡಿಕೆಗೆ ಸದ್ಗುರು ಭಾವಾನಾತ್ಮಕ ಸ್ಪಂದನೆ https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.