Actor Ponnambalam : ನಾನು ಬದುಕಿದ್ದೇ ಚಿರಂಜೀವಿ ಅಣ್ಣನಿಂದ..! ನಟನ ಕಷ್ಟಕ್ಕೆ ಮೆಗಾಸ್ಟಾರ್ ನೆರವು
80-90ರ ದಶಕದಲ್ಲಿ ಹಲವು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿ ದಕ್ಷಿಣದಲ್ಲಿ ಗುರುತಿಸಿಕೊಂಡಿರುವ ನಟ ಪೊನ್ನಂಬಲಂ. ತಮಿಳು ನಟರಾಗಿರುವ ಅವರು ಕನ್ನಡ ಪ್ರೇಕ್ಷಕರಿಗೂ ಪರಿಚಿತರು. ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಹಲವು ನಟರ ಜೊತೆ ಪೊನ್ನಂಬಲಂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ವಿಲನ್ ಆಗಿ ಮಿಂಚಿದ್ದರು.
Actor Ponnambalam About Chiranjeevi : 80-90ರ ದಶಕದಲ್ಲಿ ಹಲವು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿ ದಕ್ಷಿಣದಲ್ಲಿ ಗುರುತಿಸಿಕೊಂಡಿರುವ ನಟ ಪೊನ್ನಂಬಲಂ. ತಮಿಳು ನಟರಾಗಿರುವ ಅವರು ಕನ್ನಡ ಪ್ರೇಕ್ಷಕರಿಗೂ ಪರಿಚಿತರು. ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಹಲವು ನಟರ ಜೊತೆ ಪೊನ್ನಂಬಲಂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ವಿಲನ್ ಆಗಿ ಮಿಂಚಿದ್ದರು.
ಕಳೆದ ವರ್ಷ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಎರಡೂ ಕಿಡ್ನಿ ವೈಫಲ್ಯದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಕೂಡ ಭರಿಸಲು ಸಾಧ್ಯವಾಗಿರಲಿಲ್ಲ. ಪೊನ್ನಂಬಲಂ ಅವರು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಆರ್ಥಿಕ ನೆರವು ನೀಡುವಂತೆ ಸಂದೇಶ ಕಳುಹಿಸಿದಾಗ ಅವರು ಸ್ಪಂದಿಸಿ ಸಹಾಯ ಹಸ್ತ ಚಾಚಿದ್ದರು ಎಂಬ ಸಂಗತಿಯನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಪೊನ್ನಂಬಲಂ ಅವರು ಸ್ಮರಿಸಿದರು. ಕಿಡ್ನಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಅವರು ಇತ್ತೀಚೆಗೆ ತಮಿಳು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದಾಗ ಈ ವಿಚಾರ ಬಿಚ್ಚಿಟ್ಟಿದ್ದರು. ಅಲ್ಲದೆ, ಚಿರಂಜೀವಿ ಅಣ್ಣನಿಂದ ಮರು ಜೀವ ಪಡೆದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Nani Dasara movie: ರವಿಮಾಮನ ಮನೆಗೆ ʼದಸರಾʼ ಮಾಡೋಕೆ ಬಂದ ನಾನಿ..! ಫೋಟೋಸ್ ನೋಡಿ
ಎರಡು ವರ್ಷಗಳ ಹಿಂದೆ ನನಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. ಯಾರಾದರೂ ನನಗೆ ಸಹಾಯ ಮಾಡುತ್ತಾರೆ ಎಂದು ನಾನು ಕಾಯುತ್ತಿದ್ದೇನೆ. ಆಗಲೇ ನನಗೆ ಚಿರಂಜೀವಿ ನೆನಪಾಯಿತು.. ನನ್ನ ಸ್ನೇಹಿತನ ಮೂಲಕ ನಂಬರ್ ತೆಗೆದುಕೊಂಡು ಮೆಗಾಸ್ಟಾರ್ ಅಣ್ಣನಿಗೆ ನನ್ನ ಅನಾರೋಗ್ಯದ ಬಗ್ಗೆ ಮೆಸೇಜ್ ಮಾಡಿದೆ. ಕೂಡಲೇ ಅಣ್ಣ ನನಗೆ ಕರೆ ಮಾಡಿ ಹೈದರಾಬಾದ್ ಗೆ ಬರುವಂತೆ ಹೇಳಿದರು. ನೀವು ಬರಲು ಸಾಧ್ಯವಿಲ್ಲ ಅಂದ್ರೆ, ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ನಿಮಗೆ ಕರೆ ಬರುತ್ತದೆ. ಅಲ್ಲಿಗೆ ಹೋಗಿ ಅಡ್ಮಿಷನ್ ಮಾಡಿಕೊಳ್ಳಿ ಎಂದರು'.
ಚಿರಂಜೀವಿ ಅವರು ಹೇಳಿದಂತೆ ನಾನು ಅಲ್ಲಿಗೆ ಹೋಗಿದ್ದೆ. ಪ್ರವೇಶ ಶುಲ್ಕವೂ ಇಲ್ಲದೆ ನನ್ನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಿದರು. ನನ್ನ ಚಿಕಿತ್ಸೆಗೆ ಒಟ್ಟು ರೂ. 40 ಲಕ್ಷ ಖರ್ಚು ಮಾಡಿದ್ದು, ಚಿರಂಜೀವಿ ಸಂಪೂರ್ಣ ಹಣ ನೀಡಿದ್ದಾರೆ. ಕೇಳಿದಾಗ ಚಿರಂಜೀವಿ ಒಂದು ಲಕ್ಷ ರೂಪಾಯಿ ಅಥವಾ 2 ಲಕ್ಷದಲ್ಲಿ ಸಹಾಯ ಮಾಡುತ್ತಾರೆ ಅಂದು ಕೊಂಡಿದ್ದೆ, ಆದರೆ ಅವರು 40 ಲಕ್ಷ ಖರ್ಚು ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಪೊನ್ನಂಬಲಂ ಭಾವುಕರಾದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.